ಬ್ರೆಡ್‌ನಲ್ಲಿಟ್ಟು ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್ ಸಾಗಿಸುತ್ತಿದ್ದ ನೈಜೀರಿಯಾ ಮಹಿಳೆ ಬಂಧನ – ಕಹಳೆ ನ್ಯೂಸ್
ಬೆಂಗಳೂರು : ಬ್ರೆಡ್ ಒಳಗೆ ಮಾದಕ ವಸ್ತುವನ್ನು ಪ್ಯಾಕ್‌ಮಾಡಿ ಯಾರಿಗೂ ಅನುಮಾನ ಬಾರದಂತೆ ಮುಂಬೈನಿಂದ ಸಾಗಣೆ ಮಾಡಿಕೊಂಡು ಖಾಸಗಿ ಟ್ರಾವೆಲ್ಸ್ ಬಸ್‌ನಲ್ಲಿ ನಗರಕ್ಕೆ ಬಂದಿದ್ದ ನೈಜೀರಿಯಾ ದೇಶದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 1.20 ಕೋಟಿ ರೂ. ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದಾರೆ. ನೈಜೀರಿಯಾದ ಓಲಜೈಡ್ ಎಸ್ತರ್ ಇಯಾನುವೊಲುವಾ (29) ಬಂಧಿತ ಮಹಿಳೆ. 2024 ರಲ್ಲಿ ದೆಹಲಿಯ ಯೂನಿವರ್ಸಿಟಿಯೊಂದರಲ್ಲಿ ವ್ಯಾಸಂಗ ಮಾಡುವುದಾಗಿ ವಿದ್ಯಾರ್ಥಿ ವೀಸಾ ಪಡೆದು ದೆಹಲಿಗೆ ಬಂದಿರುವ ಈ ಮಹಿಳೆ,...







