Saturday, March 7, 2026

ಮಂಗಳೂರು

ದಕ್ಷಿಣ ಕನ್ನಡಮಂಗಳೂರುಮುಂಬೈಸುದ್ದಿ

ಮಿಸೆಸ್ ಇಂಡಿಯಾ -2025 ಕಿರೀಟ ಮುಡಿಗೇರಿಸಿದ ಕನ್ನಡತಿ ಡಾ. ರಶ್ಮಾ ಎಂ. ಶೆಟ್ಟಿ – ಕಹಳೆ ನ್ಯೂಸ್

ಜೈಪುರ ಡಿ. 26 : ಮುಲುಂಡ್‌ನ ಪ್ರಕೃತಿ ಚಿಕಿತ್ಸಕಿ ವೈದ್ಯೆ ಡಾ. ರಶ್ಮಾ ಮೋಹಿತ್ ಶೆಟ್ಟಿ ಅವರು ಡಿ. 18 ರಿಂದ ಡಿ 21 ವರಗೆ ನಡೆದ ಜೈಪುರದ ಜೈಬಾಗ್ ಪ್ಯಾಲೇಸ್‌ನಲ್ಲಿ ದೀಪಾಳಿ ಫಡ್ನಿಸ್ (ನ್ಯಾಷನಲ್ ಡೈರೆಕ್ಟರ್, ಮಿಸೆಸ್ ಇಂಡಿಯಾ) ಅವರ ಆಯೋಜನೆಯಲ್ಲಿ ನಡೆದ ಭವ್ಯ ಅಂತಿಮ ಸ್ಪರ್ಧೆಯಲ್ಲಿ ಮಿಸೆಸ್ ಇಂಡಿಯಾ – ಸೀಸನ್ 15 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮಿಸೆಸ್ ಇಂಡಿಯಾ ಭಾರತದಲ್ಲಿನ ಅತ್ಯಂತ ಪ್ರತಿಷ್ಠಿತ ಹಾಗೂ ದೀರ್ಘಕಾಲದಿಂದ ನಡೆದ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಡಿ.27: ಗೋಲ್ಡ್ ಫಿಂಚ್ ಸಿಟಿಯಲ್ಲಿ 9ನೇ ವರ್ಷದ ರಾಮಲಕ್ಷ್ಮಣ ಜೋಡುಕರೆ ಕಂಬಳ; ಕ್ಯಾ.ಬ್ರಿಜೇಶ್ ಚೌಟ – ಕಹಳೆ ನ್ಯೂಸ್

ಮಂಗಳೂರು: "9ನೇ ವರ್ಷದ ರಾಮಲಕ್ಷ್ಮಣ ಜೋಡುಕರೆ ಕಂಬಳವು ಶನಿವಾರ(ಡಿ. 27) ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಲಿದೆ" ಎಂದು ಕಂಬಳ ಸಮಿತಿಯ ಅಧ್ಯಕ್ಷ ಸಂಸದ ಕ್ಯಾ.ಬ್ರಿಜೇಶ್ ಚೌಟ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. "ಅಂದು ಬೆಳಗ್ಗೆ 8 ಗಂಟೆಗೆ ಕಂಬಳದ ಉದ್ಘಾಟನೆ ನಡೆಯಲಿದ್ದು ಉದ್ಘಾಟನೆಯನ್ನು ಗರೋಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಮೊತ್ತೇಸರ ಚಿತ್ತರಂಜನ್‌ ಅವರು ದೀಪ ಬೆಳಗಿಸುವ ಮೂಲಕ ನೆರವೇರಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ರಾಘವೇಂದ್ರ ಸಹಿತ ಶಾಸಕರು, ರಾಜಕೀಯ ಸಾಮಾಜಿಕ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

6 ತಿಂಗಳಿಂದ ಸಂಬಳವಿಲ್ಲದೇ ಸಂಕಷ್ಟಕ್ಕೀಡಾದ ಡಾಕ್ಟರ್: ವೈದ್ಯಾಧಿಕಾರಿ ರಾಜೀನಾಮೆ – ಕಹಳೆ ನ್ಯೂಸ್

ಮಂಗಳೂರು: 6 ತಿಂಗಳಿಂದ ಸಂಬಳ ನೀಡದ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲಮೊಗ್ರುವಿನಲ್ಲಿ ನಡೆದಿದೆ. ಡಾ.ಕುಲದೀಪ್ ಎಂಡಿ ರಾಜೀನಾಮೆ ನೀಡಿರುವ ವೈದ್ಯಾಧಿಕಾರಿ. ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ವೈದ್ಯಾಧಿಕಾರಿಯಾಗಿದ್ದ ಡಾ. ಕುಲದೀಪ್ ಅವರಿಗೆ ಕಳೆದ 6 ತಿಂಗಳಿಂದ ಸಂಬಳವಾಗಿರಲಿಲ್ಲ. ಸಂಬಳವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿತ್ತು. ಇದರಿಂದ ಬೇಸತ್ತು ವೈದ್ಯಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕುಲದೀಪ್ ತಮಗೆ...
ಮಂಗಳೂರುಸುದ್ದಿ

ಬೈಕ್ ಕಳ್ಳರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದಾಗ ಸರಗಳ್ಳತನ ಪ್ರಕರಣ ಬಯಲು : ಒಬ್ಬನ ಮೇಲಿದೆ 42 ಕೇಸ್-ಕಹಳೆ ನ್ಯೂಸ್

ಬೈಕ್ ಕಳರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದಾಗ ಸರಗಳ್ಳತನ ಪ್ರಕರಣದ ಬಗ್ಗೆಯೂ ಕಳ್ಳರು ಬಾಯಿಬಿಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಬಂಧಿತರನ್ನು ತೋಟ ಪೈಸಲ್ ಮತ್ತು ಮೈಸೂರಿನ ವಿನಾಯಕ ನಗರದ ನಿತೀನ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 1,20,000 ರೂ. ಮೌಲ್ಯದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಿಸಿದ 45 ಸಾವಿರ ರೂ. ಮೌಲ್ಯದ ಬೈಕ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿಸೆಂಬರ್ 12ರಂದು ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್ ನ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಎಸ್ಕೇಪ್‌ ಆಗುತ್ತಿದ್ದ ರೌಡಿಶೀಟರ್‌ನ ಚೇಸ್‌ ಮಾಡಿ ಹಿಡಿದ ಪೊಲೀಸರು – ಕಹಳೆ ನ್ಯೂಸ್

ಮಂಗಳೂರು: ಪರಾರಿಯಾಗಲು ಯತ್ನಿಸಿದ್ದ ರೌಡಿಶೀಟರ್‌ನನ್ನು ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಮೂಡಬಿದ್ರೆ ಪೊಲೀಸರು  ಬಂಧಿಸಿದ್ದಾರೆ. ಕಲ್ಲಡ್ಕ ನಿವಾಸಿ ತೌಸೀಪ್ ಯಾನೆ ಪಪ್ಪಿ ಬಂಧಿತ ಆರೋಪಿ.‌ ನಟೋರಿಯಸ್ ರೌಡಿ ತೌಸೀಪ್ ಮೂಡಬಿದ್ರೆ ಪರಿಸರದಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧನಕ್ಕೆ ಮುಂದಾಗಿದ್ದರು. ಮೂಡಬಿದ್ರೆ ಹೊರವಲಯದ ಕೊಡಂಗಲ್ಲು ಸಮೀಪ ತೌಸೀಪ್ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಆರೋಪಿಯ ಕಾರನ್ನು ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಹಿಂಬಾಲಿಸಿದ್ದರು. ಪೊಲೀಸರು ಹಿಂಬಾಲಿಸುತ್ತಿರುವ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಎಜೆಐಇಟಿ ಯಲ್ಲಿ ವಿಶಿಷ್ಟ ‘ಇನ್ವೆಸ್ಟಿಚರ್ ಸಮಾರಂಭ’ – ವಿದ್ಯಾರ್ಥಿಗಳ ‘ಪವರ್ ಆಫ್ 180’ ಸಮಾಜಮುಖಿ ಚಿಂತನೆಗೆ ಸಾಕ್ಷಿ-ಕಹಳೆ ನ್ಯೂಸ್

ಮಂಗಳೂರು: ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (AJIET), ಮಂಗಳೂರು ಇಲ್ಲಿನ ಎಂ.ಬಿ.ಎ. ವಿಭಾಗದ ವತಿಯಿಂದ ಸೆಮಿನಾರ್ ಹಾಲ್–3 ರಲ್ಲಿ ಇನ್ವೆಸ್ಟಿಚರ್ ಸಮಾರಂಭ ಹಾಗೂ ‘ಪವರ್ ಆಫ್ 180’ ಎಂಬ ನವೀನ ಸಮಾಜಮುಖಿ ಉಪಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ‘ಪವರ್ ಆಫ್ 180’ ಎಂಬ ಕಲ್ಪನೆ ಸಂಪೂರ್ಣವಾಗಿ ವಿದ್ಯಾರ್ಥಿ ಕೇಂದ್ರಿತವಾಗಿದ್ದು, 180 ಎಂ.ಬಿ.ಎ ವಿದ್ಯಾರ್ಥಿಗಳು ತಮ್ಮ ಸ್ವಂತ ಜೇಬು ಖರ್ಚಿನಿಂದ ಹಣವನ್ನು ಒಟ್ಟುಗೂಡಿಸಿ, ಉಚಿತ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ವೃದ್ಧೆಯ ಮನೆಗೆ ನುಗ್ಗಿ ಕಳ್ಳತನ :ಮೂವರ ಬಂಧನ-ಕಹಳೆ ನ್ಯೂಸ್

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೊಬ್ಬರ ಮನೆಗೆ ನುಗ್ಗಿ ಚಿನ್ನ ಹಾಗೂ ನಗದು ದೋಚಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಮೂವರು ಆರೋಪಿತರನ್ನು ಬಂಧಿಸಲಾಗಿದ್ದು, ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಸುರತ್ಕಲ್ ಸಮೀಪದ ಮುಕ್ಕ ಪ್ರದೇಶದಲ್ಲಿ ವಾಸವಿರುವ ವೃದ್ಧೆ ಜಲಜ ( 85 ವರ್ಷ) ಅವರ ಮನೆಗೆ ನುಗ್ಗಿ ದರೋಡೆ ನಡೆಸಿದ ಘಟನೆ ಡಿಸೆಂಬರ್ 3ರಂದು ನಡೆದಿತ್ತು. ಅಪರಿಚಿತರು ಕುಡಿಯಲು ನೀರು ಬೇಕೆಂದು ಬಾಗಿಲು ತೆರೆಯುವಂತೆ ಹೇಳಿದ್ದು, ಬಾಗಿಲು ತೆಗೆಯದ ಕಾರಣ...
ದಕ್ಷಿಣ ಕನ್ನಡಮಂಗಳೂರುಸುದ್ದಿ

“ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ ದೈವ ! ಹರಕೆ ನೇಮದ ನೆಪದಲ್ಲಿ ದೈವ ನರ್ತಕನ ಅತಿರೇಕದ ವರ್ತನೆ, ಜಾಲತಾಣದಲ್ಲಿ ಭಾರೀ ಟೀಕೆ, ಹರಕೆ ನೇಮವೇ ಇಲ್ಲ” : ತಮ್ಮಣ್ಣ ಶೆಟ್ಟಿ- ಕಹಳೆ ನ್ಯೂಸ್

ಕಾಂತಾರ ಚಿತ್ರದ ಮೂಲಕ ದೈವಾರಾಧನೆಯನ್ನು ಮಾರ್ಕೆಟ್ ಮಾಡುತ್ತಿದ್ದಾರೆಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಗ್ಗೆ ತೀವ್ರ ಟೀಕೆ ಕೇಳಿಬಂದಿತ್ತು. ಚಿತ್ರದ ಯಶಸ್ಸಿನ ಕಾರಣಕ್ಕೆ ವಾರದ ಹಿಂದೆ ಚಿತ್ರ ತಂಡವು ಮಂಗಳೂರಿನಲ್ಲಿ ವಾರಾಹಿ ಪಂಜುರ್ಲಿ ದೈವಕ್ಕೆ ಹರಕೆ ನೇಮವನ್ನು ಅರ್ಪಿಸಿತ್ತು. ಈ ವೇಳೆ, ದೈವದ ಪಾತ್ರಧಾರಿಯ ವರ್ತನೆ, ರಿಷಬ್ ಶೆಟ್ಟಿಯನ್ನು ಹಾರೈಸಿದ ಪರಿಯ ಬಗ್ಗೆ ಮತ್ತೆ ಟೀಕೆ, ಟಿಪ್ಪಣಿ ಕೇಳಿಬಂದಿದೆ. ಕಾಂತಾರ ಚಿತ್ರದ ಮೂಲಕ ದೈವಾರಾಧನೆಯನ್ನು ಮಾರ್ಕೆಟ್ ಮಾಡುತ್ತಿದ್ದಾರೆಂದು ನಟ, ನಿರ್ದೇಶಕ...
1 4 5 6 7 8 105
Page 6 of 105