ಮನೆಯೇ ಅಕ್ರಮ ಕಸಾಯಿ ಖಾನೆ! ಪೊಲೀಸ್ ದಾಳಿ, 3 ಮಂದಿ ಬಂಧನ : ಆರೋಪಿ ಮನೆ ಮುಟ್ಟು ಗೋಲು ಹಾಕಲು ಕ್ರಮ – ಕಹಳೆ ನ್ಯೂಸ್
ಸುರತ್ಕಲ್ : ಮಂಗಳೂರು ತಾಲೂಕು ಕಾಟಿಪಳ್ಳ ಗ್ರಾಮದ 8ನೇ ಬ್ಲಾಕ್ ಚೊಕ್ಕಬೆಟ್ಟುವಿನ ಅಂಚೆ ಕಛೇರಿ ರಸ್ತೆಯ ಅಬ್ದುಲ್ ಖಾದರ್ ರವರ ಮನೆಯಲ್ಲಿ ಅಕ್ರಮವಾಗಿ ದನ ವಧೆಯನ್ನು ಮಾಡುತ್ತಿದ್ದ ಬಗ್ಗೆ ಮಾಹಿತಿಯನ್ನು ಪಡೆದು ಸುರತ್ಕಲ್ ಪೊಲೀಸ್ ಠಾಣೆ ಪಿಎಸ್ಐ ರಘುನಾಯಕ್ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚೊಕ್ಕಬೆಟ್ಟುವಿನ ಅಜೀಜ್ ಅಹಮ್ಮದ್, (55) ಇಮ್ಮಿಯಾಜ್ (41), ಎ ಕೆ ಆಶೀಕ್ (22) ಬಂಧಿತ ಆರೋಪಿಗಳು. ಇನ್ನೊರ್ವ ಆರೋಪಿ...







