ಕಡಬದಲ್ಲಿ ಅಕ್ರಮ ಗೋಸಾಗಾಟದ ಕಾರು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು ; ಜಮಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು..!! – ರಸ್ತೆ ತಡೆದು ತಡರಾತ್ರಿ ಪ್ರತಿಭಟನೆ – ಕಹಳೆ ನ್ಯೂಸ್
ಸುಬ್ರಹ್ಮಣ್ಯ- ಉಪ್ಪಿನಂಗಡಿ ರಾಜ್ಯ ರಸ್ತೆಯ ಮರ್ದಾಳ ಜಂಕ್ಷನ್ ನಲ್ಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಾ.30 ರ ಸಂಜೆ ನಡೆದಿತ್ತು.ಈ ಅಪಘಾತದಲ್ಲಿ ನೆಕ್ಕಿತ್ತಡ್ಕದ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಎಂಬವರು ಮೃತಪಟ್ಟಿದ್ದರು.ಆದರೆ ಡಿಕ್ಕಿ ಹೊಡೆದ ಕಾರು ಶರವೇಗದಲ್ಲಿ ಸಂಚರಿಸಿತ್ತು ಎಸ್ಕೇಪ್ ಆಗಿರುವ ಕಾರಿನ ಕುರಿತು ಸಾರ್ವಜನಿಕರು ಮಾಹಿತಿ ಕಲೆ ಹಾಕಿದ್ದು ಸದ್ಯ ಆ ಕಾರು ಮರ್ಧಾಳ ಸಮೀಪದ ಪನ್ಯದಲ್ಲಿರುವ ಮನೆಯಲ್ಲಿ ತಂದು...







