Recent Posts

Saturday, April 25, 2026

ಸುಳ್ಯ

ಕಡಬದಕ್ಷಿಣ ಕನ್ನಡಸುದ್ದಿಸುಳ್ಯ

ಟ್ಯಾಪಿಂಗ್ ಮಾಡಲು ರಬ್ಬರ್ ತೋಟಕ್ಕೆ ಹೋಗಿದ್ದ ಮಹಿಳೆಯನ್ನು ಬೆನ್ನಟ್ಟಿ ತಿವಿದ ಕಾಡು ಹಂದಿ -ಕಹಳೆ ನ್ಯೂಸ್

ಕಡಬ: ಟ್ಯಾಪಿಂಗ್ ಮಾಡಲು ರಬ್ಬರ್ ತೋಟಕ್ಕೆ ಹೋಗಿದ್ದ ಮಹಿಳೆಗೆ ಕಾಡುಹಂದಿ ತಿವಿದು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಸುಳ್ಯದಿಂದ ವರದಿಯಾಗಿದೆ. ಸುಳ್ಯ ತಾಲೂಕು ದುಗಲಡ್ಕ ಕೂಟೇಲು ನಿವಾಸಿ ಪದ್ಮಾವತಿ ಎಂಬವರು ಕೆ.ಎಫ್.ಡಿ.ಸಿ. ರಬ್ಬರ್ ತೋಟದ ಟ್ಯಾಪರ್ ಆಗಿದ್ದು ಅವರು ಇಂದು ಮುಂಜಾನೆ ದುಗಲಡ್ಕ ಘಟಕದ ಕೂಟೇಲು ಪಿಲಿಕಜೆ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವಾಗ ಪೊದೆಯಲ್ಲಿದ್ದ ಕಾಡುಹಂದಿ ಏಕಾಏಕಿ ಧಾಳಿ ನಡೆಸಿತೆನ್ನಲಾಗಿದೆ...
ದಕ್ಷಿಣ ಕನ್ನಡಸುದ್ದಿಸುಳ್ಯ

ಸುಳ್ಯದ ಮಂಡೆಕೋಲು ಗ್ರಾಮದಲ್ಲಿ ಸಾಯುತ್ತಿರುವ ತೆಂಗಿನ ಮರಗಳು ; ಅಧಿಕಾರಿಗಳ ಭೇಟಿ, ಪರಿಶೀಲನೆ – ಕಹಳೆ ನ್ಯೂಸ್

ಸುಳ್ಯ: ಸಿರಿ ಕರಟುವ ಮೂಲಕ ಫಸಲು ಭರಿತ ತೆಂಗಿನ ಮರಗಳು ಸಾಯುತ್ತಿರುವ ಹಿನ್ನೆಲೆ ಯಲ್ಲಿ ತೋಟಗಾರಿಕೆ ಅಧಿಕಾರಿಗಳು ಸುಳ್ಯದ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಡೆಕೋಲು ಗ್ರಾಮದ ಅಂಬ್ರೋಟ್ಟಿ ಪೇರಾಲು ಅಡ್ಡಂತ್ತಡ್ಕದ ಮಾಜಿ ಸೈನಿಕ ದೇರಣ್ಣ ಗೌಡ ಅವರ ತೋಟದ ಹಲವು ತೆಂಗಿನ ಮರಗಳು ಸತ್ತಿದ್ದು, ಸುಳ್ಯದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಸುಹಾನ ಮತ್ತು ಅರಬಣ್ಣ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಸುಳಿಕೊಳೆ ರೋಗದ ಲಕ್ಷಣ ಇದು ಸುಳಿಕೊಳೆ...
ದಕ್ಷಿಣ ಕನ್ನಡಪುತ್ತೂರುಸುದ್ದಿಸುಳ್ಯ

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ನಿವಾಸಿ ಸೇಸಪ್ಪ ಗೌಡ 5 ದಿನಗಳ ಹಿಂದೆ ಪುತ್ತೂರಿನಿಂದ ಕಾಣೆಯಾಗಿದ್ದಾರೆ – ಕಹಳೆ ನ್ಯೂಸ್

ಪುತ್ತೂರು: ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ಎಂಬಲ್ಲಿನ ನಿವಾಸಿ ಸೇಸಪ್ಪ ಗೌಡ(62) ಕಳೆದ 5 ದಿನಗಳ ಹಿಂದೆ ಪುತ್ತೂರಿನಿಂದ ಕಾಣೆಯಾಗಿದ್ದಾರೆ ಎಂದು ಅವರ ಪುತ್ರ ಲೋಕೇಶ್ ದೇವರಗುಂಡ ಎಂಬವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಪುತ್ತೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಿಂದ ಔಷಧಿ ಪಡೆದುಕೊಂಡು ಅಲ್ಲಿಂದ ತೆರಳಿದ ಅವರು ತಮ್ಮ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ. ಅಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥಗೆ ಒಳಗಾಗಿದ್ದಾರೆ. ಸುಮಾರು 6 ಅಡಿ ಎತ್ತರ, ಗೋದಿ...
ಸುದ್ದಿಸುಳ್ಯ

ಕೊಲ್ಲಮೊಗ್ರು: ಪತ್ರಕರ್ತರ ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ಥರಿಂದ ಅಹವಾಲು ಸಲ್ಲಿಕೆ: ಕಂದಾಯ-‘ಅರಣ್ಯ ಸಮಸ್ಯೆ ಪರಿಹಾರಕ್ಕೆ ಪೈಲಟ್ ಯೋಜನೆ’– ಕಹಳೆ ನ್ಯೂಸ್

ಸುಳ್ಯ:ಕೊಲ್ಲಮೊಗ್ರು ಮತ್ತು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಭಾಗಷಃ ಅರಣ್ಯ ಸಮಸ್ಯೆ ಸೇರಿ ಅರಣ್ಯ - ಕಂದಾಯ ನಡುವಿನ ಸಮಸ್ಯೆ ಇದೆ. ಇದರ ಪರಿಹಾರಕ್ಕೆ ಇಲ್ಲಿ ಪೈಲಟ್ ಯೋಜನೆಯಡಿಯಲ್ಲಿ ಸರ್ವೆ ಮಾಡಿಸಿ ಇಲ್ಲಿನ ಅರಣ್ಯ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ. 3-4 ತಿಂಗಳ ಯೋಜನೆ ಅಡಿಯಲ್ಲಿ ಸರ್ವೆ ಪೂರ್ತಿ ಮಾಡಲಾಗುವುದು. ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ...
ದಕ್ಷಿಣ ಕನ್ನಡಸುದ್ದಿಸುಳ್ಯ

ಹಾಡಹಗಲೇ ಮಹಿಳೆಯ ಚಿನ್ನದ ಸರ ಎಗರಿಸಿದ ಪ್ರಕರಣ : ಕಳ್ಳರ ಎಡೆಮುರಿ ಕಟ್ಟಿದ ಬೆಳ್ಳಾರೆ ಪೊಲೀಸರ ತಂಡ – ಕಹಳೆ ನ್ಯೂಸ್

ಬೆಳ್ಳಾರೆ ಠಾಣಾ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಪಾಂಬಾರ್ ಎಂಬಲ್ಲಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಹಾಡಹಗಲೇ ಎಗರಿಸಿದ ಇಬ್ಬರು ಆರೋಪಿಗಳನ್ನು ಬೆಳ್ಳಾರೆ ಪೊಲೀಸರ ವಿಶೇಷ ತಂಡ ಬಂಧಿಸಿದೆ. ಪುತ್ತೂರು ನರಿಮೊಗರು ಗ್ರಾಮದ ಮುಕ್ವೆ ನಿವಾಸಿ ನೌಶಾದ್ ಬಿ ಎ (36) ಮತ್ತು ಸುಲಿಗೆಗೆ ಸಹಕರಿಸಿದ ಕಾಸರಗೋಡು ಉದ್ಯಾವರ ನಿವಾಸಿ ಚಂದ್ರಮೋಹನ್ (42) ಬಂಧಿತ ಆರೋಪಿಗಳು. ಬಂಧಿತರಿಂದ ರೂ 80,000/- ಮೌಲ್ಯದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ರೂ 1,00,000/- ಮೌಲ್ಯದ...
ಪುತ್ತೂರುಸುದ್ದಿಸುಳ್ಯ

ಓಮಿನಿ ಕಾರಿನ ಮೇಲೆ ದಾಳಿ ನಡೆಸಿದ ಕಾಡಾನೆ : ಪ್ರಾಣಾಪಾಯದಿಂದ ಪಾರಾದ ಕಾರು ಚಾಲಕ – ಕಹಳೆ ನ್ಯೂಸ್

ಸುಳ್ಯ: ಕಾಡಾನೆಯೊಂದು ಪೆರಾಜೆ ಗ್ರಾಮದಲ್ಲಿ ಸುತ್ತಾಡಿ ಪಯಸ್ವಿನಿ ನದಿ ದಾಟಿ ಪೂಮಲೆ ಬೆಟ್ಟಕ್ಕೆ ತೆರಳುವ ಸಂದರ್ಭ ರಸ್ತೆ ಬದಿ ನಿಂತಿದ್ದ ಓಮಿನಿ ಕಾರಿಗೆ ಹಾನಿ ಮಾಡಿ ತೆರಳಿರುವ ಘಟನೆ ಕನ್ನಡ ಪೆರಾಜೆ ಸಮೀಪ ನಡೆದಿದೆ. ಪೆರಾಜೆಯ ಉದ್ಯಮಿ ಉನೈಸ್ ಪೆರಾಜೆಯವರ ಕಾರು ಇದಾಗಿದ್ದು, ಕಾರಿನ ಚಾಲಕ ಗೂನಡ್ಕ ಅವಿನಾಶ್ ಕಾರಿನೊಳಗೆ ಕುಳಿತುಕೊಂಡು ಪೇಪರ್ ಓದುತ್ತಿರುವ ಸಂದರ್ಭ ಆನೆ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನೆ...
ದಕ್ಷಿಣ ಕನ್ನಡಶಿಕ್ಷಣಸುದ್ದಿಸುಳ್ಯ

ಸುಳ್ಯ : ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ – ಕಹಳೆ ನ್ಯೂಸ್

ಸುಳ್ಯ : ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಇಂದು ಕಾಲೇಜಿನ ಆವರಣದಲ್ಲಿ ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಸುಳ್ಯದ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಇವರು ಧ್ವಜಾರೋಹಣಗೈದು ಮಾತನಾಡಿ ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿರುವ ಸಂದರ್ಭ ಯುವಜನತೆ ಪಾತ್ರ ಮಹತ್ವದ್ದು. ರಾಷ್ಟೀಯ ಶಿಕ್ಷಣ ನೀತಿ ಮೂಲಕ ಕಲಿಕೆ ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಯುತ್ತಿರುವುದರಿಂದ ಇನ್ನಷ್ಟು ಪ್ರಗತಿ ಸಾಧ್ಯ ಎಂದರು. ಈ ಸಂದರ್ಭ 75ನೇ ವರ್ಷದ...
ಸುದ್ದಿಸುಳ್ಯ

ಸುಳ್ಯ ಅರಂತೋಡು ಬಳಿ ರಸ್ತೆ ದಾಟಿದ ಕಾಡಾನೆಗಳ ಹಿಂಡು : ವಾಹನ ಸವಾರರಲ್ಲಿ ಆತಂಕ – ಕಹಳೆ ನ್ಯೂಸ್

ಸುಳ್ಯದ ಅರಂತೋಡು ಅಡ್ತಲೆ ಮಧ್ಯೆ ಚುಕ್ರಡ್ಕ ಎಂಬಲ್ಲಿ ಕಾಡಾನೆ ಹಿಂಡು ಇಂದು ಬೆಳಿಗ್ಗೆ ರಸ್ತೆ ದಾಟಿ ಆತಂಕ ಸೃಷ್ಟಿಸಿದೆ. ಈ ಭಾಗದ ಕಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಗಜಪಡೆ ಸಂಚಾರ ನಡೆಯುತ್ತಿದ್ದು ಇಂದು ಕೂಡಾ ರಸ್ತೆ ದಾಟಿತು. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ . ಶಾಲಾ ಮಕ್ಕಳು ಕೂಡ ಸಂಚಾರ ನಡೆಸುವ ವೇಳೆ ಆದುದರಿಂದ ಸಹಜವಾಗಿ ಈ ಭಾಗದ ಜನ ಆತಂಕಕ್ಕೀಡಾಗಿದ್ದಾರೆ. ಬೆಳಿಗ್ಗೆ ಸುಳ್ಯಕ್ಕೆ...
1 11 12 13 14 15 28
Page 13 of 28