Recent Posts

Monday, June 8, 2026

ಸುಬ್ರಹ್ಮಣ್ಯ

ಸುಬ್ರಹ್ಮಣ್ಯ

ಸುಬ್ರಹ್ಮಣ್ಯದಲ್ಲಿ‌ ಅನಾಥವಾಗಿರುವ ಮಹಿಳೆಯೊಬ್ಬರ ಗುರುತು ಪತ್ತೆಗೆ ಸಹಕರಿಸುವರೇ ಎಂದು ಸಾರ್ವಜನಿಕರಲ್ಲಿ ಠಾಣಾಧಿಕಾರಿ ಮನವಿ-ಕಹಳೆ ನ್ಯೂಸ್

ಸುಬ್ರಹ್ಮಣ್ಯ :ಸುಬ್ರಹ್ಮಣ್ಯದಲ್ಲಿ‌ ಅನಾಥವಾಗಿರುವ ಮಹಿಳೆಯೊಬ್ಬರ ಗುರುತು ಪತ್ತೆ ಆಗಬೇಕಿದೆ. ಸಹಕರಿಸುವರೇ ಎಂದು ಸಾರ್ವಜನಿಕರಲ್ಲಿ ಠಾಣಾಧಿಕಾರಿ ಒಮಾನಾ ಅವರು ಮನವಿ ಮಾಡಿದ್ದಾರೆ. ಸುಮಾರು ಒಂದು ತಿಂಗಳಿಂದ ವಿಶ್ವ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಗಳಲ್ಲಿ ಅನಾಥ ಮಹಿಳೆಯೊಬ್ಬರು ಸುತ್ತಾಡುವುದು, ಕಂಡುಬರುತ್ತಿದೆ. ಅವರ ಬಗ್ಗೆ ಗುರುತು ಪತ್ತೆಗೆ ಸಹಕರಿಸುವಂತೆ ಸುಬ್ರಹ್ಮಣ್ಯ ಠಾಣಾಧಿಕಾರಿ ಸಬ್ ಇನ್ಸ್‌ಪೆಕ್ಟರ್ ಓಮನ ಅವರು ಮನವಿ ಮಾಡಿದ್ದಾರೆ. ಸಾಧಾರಣ ನಲ್ವತ್ತು ವರ್ಷ ಪ್ರಾಯದ ಮಹಿಳೆಯೊಬ್ಬರು ಸುಬ್ರಹ್ಮಣ್ಯ ಪರಿಸರದಲ್ಲಿದ್ದು, ಅವರಿಗೆ ವಾಸ್ತವ್ಯಕ್ಕಾಗಿ...
ಸುಬ್ರಹ್ಮಣ್ಯ

ಸುಬ್ರಹ್ಮಣ್ಯ:-  ಬಡ ಕುಟುಂಬದ ಸದಸ್ಯರಿಗೆ ಧನ ಸಹಾಯ ವಿತರಣೆ-ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ಅಯ್ಯಪ್ಪ ದೀಪೋತ್ಸವ  ಸಮಿತಿ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಪೂರ್ವಾಧ್ಯಕ್ಷರಾದ ರೋ.ಉಮೇಶ್ ಕೆ ಎನ್ ಇವರ ಸಾರಥ್ಯದಲ್ಲಿ ಬೆಳಂದೂರು ಕಾರ್ಲಾಡಿ ಅವರ ಮನೆಯ ಆಸುಪಾಸಿನಲ್ಲಿರುವ ೫ ಬಡವರ್ಗದ ಕುಟುಂಬಗಳಿಗೆ ನಿತ್ಯೋಪಯೋಗಿ  ಆಹಾರದ ಕಿಟ್ಟನ್ನು ನೀಡಿರುತ್ತಾರೆ. ಅಲ್ಲದೆ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬವೊAದಕ್ಕೆ  ರೂ.೩,೦೦೦ ಹಾಗೂ ಗೃಹ ನಿರ್ಮಾಣದ ಪ್ರಯುಕ್ತ ಇನ್ನೊಂದು ಬಡ ಕುಟುಂಬದ ಸದಸ್ಯರಿಗೆ ರೂ.೧೦,೦೦೦ ಧನ ಸಹಾಯವನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ...
ಸುಬ್ರಹ್ಮಣ್ಯ

ಕಡಬ ತಾಲೂಕಿನ ಕುಕ್ಕೆ ದೇಗುಲದಲ್ಲಿ ಕಳೆದ 5 ವರ್ಷಗಳಿಂದ ಲೆಕ್ಕ ಪರಿಶೋಧನೆ ನಡೆದಿಲ್ಲವೆಂಬ ಆರೋಪ ; ಮುಖ್ಯಮಂತ್ರಿಗೆ ದೂರು ನೀಡಿದ ವಕೀಲ ಶ್ರೀಹರಿ ಕುತ್ಸ-ಕಹಳೆ ನ್ಯೂಸ್

ಸುಬ್ರಹ್ಮಣ್ಯ : ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಮೂಲ ಹೊಂದಿರುವ ದೇವಸ್ಥಾನಗಳ ಪೈಕಿ ಕಡಬ ತಾಲೂಕಿನ ಕುಕ್ಕೆ ದೇಗುಲ ಮೊದಲ ಸ್ಥಾನದಲ್ಲಿದೆ. ಆದರೆ ಕಳೆದ 5 ವರ್ಷದಲ್ಲಿ 100 ರೂ ಕೋಟಿಗೂ ಹೆಚ್ಚು ಹಣ ಸಂಗ್ರವಾಗಿದ್ದರೂ, ಈ ಬಗ್ಗೆ ಯಾವುದೇ ಲೆಕ್ಕ ಪರಿಶೋಧನೆ ನಡೆದಿಲ್ಲ ಎಂದು ವಕೀಲ ಶ್ರೀಹರಿ ಕುತ್ಸ ಅವರು ಮುಖ್ಯಮಂತ್ರಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಆರೋಪಿಸಿ ದೂರು ನೀಡಿದ್ದಾರೆ. ದೇಗುಲಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗಳು...
ಸುಬ್ರಹ್ಮಣ್ಯ

ಕಾಡಾನೆ ದಾಳಿಗೆ ಓರ್ವ ಬಲಿಯಾದ ಬೆನ್ನಲ್ಲೇ ಆನೆಗಳ ಹಿಂಡು ಪ್ರತ್ಯಕ್ಷ; ಸಾರ್ವಜನಿಕರಲ್ಲಿ ಆತಂಕ-ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಸುಬ್ರಹ್ಮಣ್ಯದಿಂದ ಐನಕಿದು ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಮತ್ತು ಬಾಳುಗೋಡು ಭಾಗವನ್ನು ಸಂಪರ್ಕಿಸುವ ಮಲೆಯಾಳ ಐನೆಕಿದು ರಸ್ತೆಯ ಕೆದಿಲ ಎಂಬಲ್ಲಿ 8 ಕಾಡಾನೆಗಳ ಹಿಂಡೊಂದು ಕಾಣಿಸಿಕೊಂಡಿದ್ದು, ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ. ಈ ಮಾರ್ಗವು ಕಾಡಿನೊಳಗೆ ಹಾದು ಹೋಗಿದ್ದು ದಾರಿ ಮಧ್ಯೆ ಯಾವುದೇ ಮನೆಗಳಿಲ್ಲ. ಇದೀಗ ಆನೆಗಳ ಉಪಟಳವು ಮಿತಿಮೀರಿದ್ದು, ಇಂದು ಕಲ್ಮಕಾರು ಕಾಡಿನ ದಾರಿಯಲ್ಲಿ ತೆರಳಿದ್ದ ವ್ಯಕ್ತಿಯೋರ್ವನ ಮೇಲೆ ಕಾಡಾನೆ ದಾಳಿ ನಡೆಸಿದೆ. ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ...
ಸುಬ್ರಹ್ಮಣ್ಯ

ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿ ಬಿದ್ದ ಕಾರು-ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ತೋಟಕ್ಕೆ ಉರುಳಿ ಬಿದ್ದ ಘಟನೆ ಧರ್ಮಸ್ಥಳ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳದ ಬಳಿ ನಡೆದಿದೆ. ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಟೊಯೋಟಾ ಕಂಪನಿಯ ಇಟಿಯೋಸ್ ಕಾರು ಮರ್ಧಾಳ ಸಮೀಪದ ಚಾಕಟೆಕೆರೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟದಲ್ಲಿದ್ದ ರಬ್ಬರ್ ಶೀಟ್ ಮಾಡುವ ಶೆಡ್ ಮೇಲೆ ಉರುಳಿ ಬಿದ್ದಿದೆ. ಇನ್ನು ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ...
ಸುಬ್ರಹ್ಮಣ್ಯ

ಹರಿಹರ : ವೈನ್ ಶಾಪ್ ಗೆ ವಿರೋಧ, ವಿಶೇಷ ಗ್ರಾಮ ಸಭೆಗೆ ನಿರ್ಧಾರ; ಮದ್ಯದಂಗಡಿ, ವಿರೋಧಿ ಸಮಿತಿ ಅಸ್ತಿತ್ವಕ್ಕೆ-ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ವೈನ್ ಶಾಪ್ ತೆರೆಯಲು ಪ್ರಯತ್ನ ನಡೆಸುತ್ತಿರುವುದರ ಬೆನ್ನಲ್ಲೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹರಿಹರ ಪಳ್ಳತ್ತಡ್ಕ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ನಾಗರಿಕರು, ಶ್ರೀ ಕ್ಷೇ..ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದವರು ಎಲ್ಲರು ವೈನ್ ಶಾಪ್ ತೆರೆಯುವುದನ್ನು ವಿರೋಧಿಸಿದ್ದು, ಮಂಗಳವಾರ ಶ್ರೀ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಮುಖರ ಸಭೆ ನಡೆಯಿತು. ಸಭೆಯಲ್ಲಿ ಪಕ್ಷ ಬೇಧ ಮರೆತು ಎಲ್ಲರು ವೈನ್ ಶಾಪ್ ತೆರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದರು 1994ರಲ್ಲಿ...
ಸುಬ್ರಹ್ಮಣ್ಯ

ಸುಬ್ರಹ್ಮಣ್ಯ ಇಲ್ಲಿನ ಅಸಹಾಯಕ ವಯೋವೃದ್ಧೆಯ ಮನೆ ದುರಸ್ತಿ ಮಾಡಿದ ವಿಪತ್ತು ನಿರ್ವಹಣಾ ತಂಡ-ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಇಲ್ಲಿನ ವಲಯ ವಿಪತ್ತು ನಿರ್ವಹಣೆ ಘಟಕದವರಿಂದ ಕೊಲ್ಲಮೊಗ್ರು ಗ್ರಾಮದ ಕಟ್ಟದಲ್ಲಿರುವ ಯೋವೃದ್ಧೆಯ ಮನೆ ದುರಸ್ತಿ ಮಾಡಿ ಮಾದರಿ ಕಾರ್ಯ ಮಾಡಿದ್ದಾರೆ. ಮಾನಿಕ ಎಂಬ ಅಸಹಾಯಕ ವಯೋವೃದ್ಧೆಯ ಮನೆಯ ಛಾವಣಿ ಮಾಡಿದ್ದು ಮುಂಜಾನೆ ಬೆಳಗ್ಗೆ 8.30 ರಿಂದ ರಾತ್ರಿ 8.00 ಗಂಟೆ ವರೆಗೆ ಕೆಲಸ ಮಾಡಿದ್ದಾರೆ. ವಿಪತ್ತು ನಿರ್ವಹಣೆ ಘಟಕದ ಸಂಯೋಜಕರಾದ ಸತೀಶ್ ಟಿ ಎನ್, ಮಣಿಕಂಠ ಕಟ್ಟ, ಮತ್ತು ಲಕ್ಷ್ಮಣ ಐನೆಕಿದು, ಕುಸುಮಾಧರ ಪಿ, ಯಶವಂತ, ಚಂದ್ರಶೇಖರ...
ದಕ್ಷಿಣ ಕನ್ನಡಬೆಂಗಳೂರುಸುದ್ದಿಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿ ಆಚರಣೆ ಯಥಾಸ್ಥಿತಿಗೆ ಹೈಕೋರ್ಟ್ ಆದೇಶ ; ಮಾಧ್ವ ಪದ್ದತಿಯಂತೆ ಶಿವರಾತ್ರಿ – ಕಹಳೆ ನ್ಯೂಸ್

ಬೆಂಗಳೂರು : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿಯ ಕುರಿತಾಗಿ ಗೊಂದಲ ಏರ್ಪಟ್ಟಿತು. ಶಿವರಾತ್ರಿ ಆಚರಣೆ ಶೈವ ಮಾಧ್ವ ಪದ್ದತಿಯಂತೆ ನಡೆಯಬೇಕೆಂಬ ಜಟಾಪಟಿಯು ನಡೆದಿತ್ತು ಇದೀಗ ಉಮಾಮಹೇಶ್ವರಿ ಗುಡಿಯಲ್ಲಿ ಈ ಹಿಂದಿನಂತೆ ಪೂಜೆ ಅಭಿಷೇಕ ನಡೆಸುವುದಕ್ಕೆ ಮುಜರಾಯಿ ಇಲಾಖೆಗೆ ಹೈಕೊರ್ಟ್ ನಿರ್ದೇಶನ ನೀಡಿದೆ. ಕಳೆದ ಹಲವು ವರ್ಷಗಳಿಂದ ಕುಕ್ಕೆಸುಬ್ರಮಣ್ಯದಲ್ಲಿ ಆಚರಣೆಗಳು ನಡೆಯುತ್ತಿದ್ದವು ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ದ ನಾಗರೀಕ ಹಿತರಕ್ಷಣಾ ಸಮತಿಯವರು ಈ ಬಾರಿಯ ಶಿವರಾತ್ರಿಯ ಅಚರಣೆಯಲ್ಲಿ ಬದಲಾವಣೆ ಮಾಡಬೇಕು ಶೈವ...
1 11 12 13 14 15 16
Page 13 of 16