ಪೊಲೀಸ್ ಠಾಣೆಗೆ ಟರ್ಪಾಲು ಹೊದಿಕೆ : ಇದು ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ಸ್ಧಿತಿ– ಕಹಳೆ ನ್ಯೂಸ್
ಸುಬ್ರಮಣ್ಯ: ಜನರ ಆಗುಹೋಗುಗಳಿಗೆ ಪೊಲೀಸರು ಬೇಕು. ಜೋರು ಮಳೆ ಬಂದರೂ ಇವರು ಬೇಕು, ಜನರ ಬೇಕು ಬೇಡಗಳಲ್ಲಿ ಇವರು ಬೇಕು. ಆದರೆ ದೇಶದ ಪ್ರಾಮುಖ್ಯ ಧಾರ್ಮಿಕ ಸ್ಥಳವಾದ ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ಮಾಡಿಗೆ ಮಾತ್ರ ಟರ್ಪಾಲೇ ಬೇಕು. ಯಾಕೆಂದರೆ ಠಾಣೆಯ ಮಾಡಿನ ರಿಪೇರಿಗೆ ಹಣವಿಲ್ಲದೆ ನೀರು ಸೋರುವಿಕೆ ತಡೆಯಲು ಟರ್ಪಾಲು ಹೊದಿಸಲಾಗಿದೆ. ಸುಬ್ರಹ್ಮಣ್ಯ ಠಾಣೆಯ ಮಾಡು ಬಹಳವಾಗಿ ಶಿಥಿಲವಾಗಿ ಮಾಡು 3 - 4 ವರ್ಷ ಆಯ್ತು. ಒಳ...







