ಪುತ್ತೂರು ಬೈಪಾಸ್ ರಸ್ತೆಯಲ್ಲಿ ಹೋರಿ ಕರುವಿಗೆ ಅಪರಿಚಿತ ವಾಹನ ಡಿಕ್ಕಿ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರಿಂದ ಕರುವಿನ ರಕ್ಷಣೆ – ಕಹಳೆ ನ್ಯೂಸ್
ಪುತ್ತೂರು ಬೈಪಾಸ್ ಅಶ್ಮಿ ಕಂಫರ್ಟ್ ನ ಬಳಿ ಅಪರಿಚಿತ ವಾಹನವೊಂದು ಹೋರಿ ಕರುವಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಪುತ್ತೂರಿನ ಬೈಪಾಸ್ ನಲ್ಲಿ ನಡೆದಿದೆ. ಇಂದು ಬೆಳಗ್ಗಿನ ಜಾವ ಹೋರಿ ಕರುವಿಗೆ ಡಿಕ್ಕಿ ಹೊಡೆದ ಘಟನೆ ತಿಳಿದ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ತಕ್ಷಣ ಧಾವಿಸಿ ತುರ್ತು ಚಿಕಿತ್ಸೆಗೆ ಸರಕಾರಿ ಪಶು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋಶಾಲೆಗೆ ಸೇರಿಸಲಾಯಿತು. ಪಿಕಪ್ ವ್ಯವಸ್ಥೆಯನ್ನು ಧರಿತ್ರಿ...







