ಕುಡಿಪಾಡಿಯಲ್ಲಿ ‘ಆರೋಗ್ಯ ಮಿತ್ರ’ ಕೊರೊನ ಬಗ್ಗೆ ಜಾಗೃತಿ ಕಾರ್ಯಾಗಾರ- ಕಹಳೆ ನ್ಯೂಸ್
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ವಿವೇಕಾನಂದ ಆಯುರ್ವೇದ ಆಸ್ಪತ್ರೆ, ರೇಡಿಯೋ ಪಾಂಚಜನ್ಯ ಸಮುದಾಯ ಬಾನುಲಿ 90.8ಎಫ್.ಎಮ್. ವಿವೇಕಾನಂದ ಮಹಾವಿದ್ಯಾಲಯ, ಗ್ರಾಮ ವಿಕಾಸ ಸಮಿತಿ, ಐಕ್ಯುಎಸಿ ಘಟಕ, ರಾಷ್ಟ್ರೀಯ ಸೇವಾಯೋಜನೆ, ರೋವರ್ಸ್ & ರೇಂಜರ್ಸ್, ರೆಡ್‍ಕ್ರಾಸ್ ಮತ್ತು ದ.ಕ.ಜಿ.ಪಂ.ಉ.ಹಿ. ಪ್ರಾಥಮಿಕ ಶಾಲೆ ಕುಡಿಪಾಡಿಯ ಶಾಲಾಭಿವೃದ್ಧಿ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ‘ಆರೋಗ್ಯ ಮಿತ್ರ’ ಕೊರೊನ ಬಗ್ಗೆ ಜಾಗೃತಿ ಕಾರ್ಯಾಗಾರವು ದ.ಕ.ಜಿ.ಪಂ.ಉ.ಹಿ. ಪ್ರಾಥಮಿಕ ಶಾಲೆ ಕುಡಿಪಾಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಡಿಪಾಡಿ ಗ್ರಾಮ...







