ಕುಂದಾಪುರದ “ಬಡವರ ಡಾಕ್ಟರ್” ಡಾ. ಎ.ಎಸ್. ಕಲ್ಕೂರ ನಿಧನ – ಕಹಳೆ ನ್ಯೂಸ್
ಕುಂದಾಪುರ: “ಬಡವರ ಡಾಕ್ಟರ್” ಎಂದೇ ಕುಂದಾಪುರ ಭಾಗದಲ್ಲಿ ಪ್ರಸಿದ್ಧಿ ಪಡೆದಿದ್ದ, ಹಂಗಳೂರಿನ ಯೂನಿಟಿ ಹಾಲ್ ಬಳಿಯ ನಿವಾಸಿ ಡಾ. ಎ.ಎಸ್. ಕಲ್ಕೂರ (87) ಅವರು ವಯೋ ಸಹಜ ಅಸೌಖ್ಯದಿಂದ ನಿನ್ನೆ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇವರು ಆರಂಭದಲ್ಲಿ ಸರಕಾರಿ ವೈದ್ಯರಾಗಿ ವಿವಿಧೆಡೆ ಸೇವೆ ಸಲ್ಲಿಸಿದ್ದು, ಬಳಿಕ ಕುಂದಾಪುರ ನಗರದಲ್ಲಿ ತಾವೇ ಸ್ವತಃ ಪುಟ್ಟದಾದ ಕ್ಲಿನಿಕ್ ತೆರೆದು, 5...







