ತಾಲೂಕಿನಲ್ಲಿ ಸುರಿಯುತ್ತಿರುವ ವಿಪರೀತ ಗಾಳಿ ಮಳೆಗೆ ಮೊಗ್ರು ಗ್ರಾಮದ ಹಲವು ಕಡೆ ಮನೆ, ಕೃಷಿಗೆ ಹಾನಿ ; ಬಂದಾರು ಪಂಚಾಯತ್ ಅಧ್ಯಕ್ಷರು,ಸದಸ್ಯರು, ಪಿಡಿಓ ರವರು ಸ್ಥಳಕ್ಕೆ ಭೇಟಿ -ಕಹಳೆ ನ್ಯೂಸ್
ಮೊಗ್ರು : ತಾಲೂಕಿನಲ್ಲಿ ಸುರಿಯುತ್ತಿರುವ ವಿಪರೀತ ಗಾಳಿ ಮಳೆಯ ಪರಿಣಾಮ ಮೊಗ್ರು ಗ್ರಾಮದ ಕೊಳಬ್ಬೆ ಸಿದ್ದಣ್ಣರವರ ವಾಸದ ಮನೆಗೆ ಹಾಗೂ ನಡುಮನೆ,ಬರುoಗುಡೆಲು, ಪುಣ್ಕೆದಡಿ, ಅರ್ತಿದಡಿ, ಪರಕ್ಕಾಜೆ, ಕಡಮ್ಮಾಜೆ ನಿವಾಸಿಗಳ ಅಡಿಕೆ ಮರ ನೆಲಕ್ಕಪ್ಪಲಿಸಿದ್ದು ಕೃಷಿಗೆ ಹಾನಿಯಾಗಿದ್ದು ಅಪಾರ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ ಹಾಗೂ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮರವರು ಸ್ಥಳಕ್ಕೆ ಭೇಟಿ ನೀಡಿದರು....







