Saturday, March 7, 2026

ಬಂಟ್ವಾಳ

ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲ : ಉಕ್ಕುಡ ಒತ್ತೆಸಾರು ಗೌಡರ ಕುಟುಂಬಸ್ಥರ ತರವಾಡು ಮನೆಯ ಜೀರ್ಣೋದ್ಧಾರ ಪೂರ್ವ ದೈವಗಳ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ-ಕಹಳೆ ನ್ಯೂಸ್

ವಿಟ್ಲ: ಸುಮಾರು 300 ವರ್ಷಗಳ ಹಿಂದೆ ವಿಟ್ಲ ಅರಮನೆಯ ರಾಜರ ಆಳ್ವಿಕೆಯ ಕಾಲದಲ್ಲಿ ಜನರಿಗೆ ಹಾಗೂ ಕೃಷಿ ಬೆಳೆಗಳಿಗೆ ಪಕ್ಷಿ ಮೃಗಾದಿಗಳ ಉಪದ್ರವಗಳು ಜಾಸ್ತಿಯಾದಗ ಆಗಿನ ರಾಜರ ಸೂಚನೆ ಮೇರೆಗೆ ಒತ್ತೆಸಾರು ಕುಟುಂಬಸ್ಥರ ಹಿರಿಯರು ಹುಲಿ, ಹಂದಿ, ಪಕ್ಷಿ ಮೃಗಾದಿಗಳನ್ನು ಬೇಟೆಯಾಡಿ ಹಿಡಿದಿದ್ದರಿಂದ ರಾಜರಿಂದ ಪ್ರಶಸ್ತಿ ಲಭಿಸಿದ್ದು ಮತ್ತು ರಾಜರಿಂದ ಮಲರಾಯ, ಕಕ್ಕರಿ ಚಾಮುಂಡಿ ಎಂಬೀ ಶಕ್ತಿಗಳನ್ನು ಆರಾಧಿಸಲು ನಿರ್ದೇಶನವನ್ನು ಮಾಡಿ ಅವುಗಳ ಆರಾಧನೆಗಾಗಿ ಭೂಮಿಯನ್ನು ಬಿಟ್ಟುಕೊಟ್ಟಿರುವ ಇತಿಹಾಸ ತಾಮ್ರ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ-ಕಹಳೆ ನ್ಯೂಸ್

ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಬಿ.ಮೂಡ ವತಿಯಿಂದ ಬದಲಾವಣೆಯ ಶಿಕ್ಷಣ ಭವಿಷ್ಯದ ನಿರ್ಮಾಣ 2025-26 ಎಂಬ ಘೋಷಣೆಯಡಿ ಬಿ.ಮೂಡ ಕ್ಲಸ್ಟರ್ ಹಂತದ ಕಲಿಕಾ ಹಬ್ಬವನ್ನು ಶಾಲಾಭಿವೃದ್ಧಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಹರೀಶ್ ಮಾಂಬಾಡಿ ಉದ್ಘಾಟಿಸಿದರು. ಈ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಶಂಭೂರು ನಲ್ಲಿ 2025-26ನೇ ಸಾಲಿನ ಬಾಳ್ತಿಲ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ -ಕಹಳೆ ನ್ಯೂಸ್

ಬಂಟ್ವಾಳ:ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಶಂಭೂರು ಇಲ್ಲಿ 2025-26ನೇ ಸಾಲಿನ ಬಾಳ್ತಿಲ ಕ್ಲಸ್ಟರ್ ಮಟ್ಟದ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನಕ್ಕೆ ಸಂಬಂಧಿಸಿದ ಕಲಿಕಾ ಹಬ್ಬ ಕಾರ್ಯಕ್ರಮ ಡಿ.29 ಸೋಮವಾರ ಜರಗಿತು ನಡೆಯಿತು. ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಹೇಮಚಂದ್ರ ಭಂಡಾರದ ಮನೆ ವಹಿಸಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ವಿಮಲ, ಸದಸ್ಯರಾದ ದಯಾನಂದ ,ನರಿಕೊಂಬು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸುಜಾತ,ಕಂಟಿಕ ಶಾಲೆಯ ಚೇತನ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪುಂಜಾಲಕಟ್ಟೆ ; ಪೊಲೀಸ್ ಸಿಬಂದಿ ಕಾರು- ಬೈಕ್‌ ಡಿಕ್ಕಿ, ಸವಾರ ಸ್ಥಳದಲ್ಲೇ ಮೃತ್ಯು ಕಾರಿನಲ್ಲಿ ಮದ್ಯ ಬಾಟಲಿ ಇದ್ದ ಬಗ್ಗೆ ವಿಡಿಯೋ ವೈರಲ್, ಕುಡಿದು ವಾಹನ ಚಲಾಯಿಸಿದ್ದಾಗಿ ಆರೋಪ, ತಪಾಸಣೆಯಲ್ಲಿ ನೆಗೆಟಿವ್…!-ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯ ಪಿಲಾತಬೆಟ್ಟು ಕಟ್ಟೆಮನೆ ಎಂಬಲ್ಲಿ ಪೊಲೀಸ್ ಸಿಬಂದಿಯೊಬ್ಬರು ಚಲಾಯಿಸುತ್ತಿದ್ದ ನ್ಯಾನೋ ಕಾರು ಮತ್ತು ಬೈಕ್ ಡಿಕ್ಕಿಯಾಗಿದ್ದು, ಬೈಕ್ ಸವಾರ ಮಾರ್ನಬೈಲು ನಿವಾಸಿ ಇಮ್ರಾನ್ ಮೊಹಮ್ಮದ್ ತಾಹ ಎಂಬವರು ಸ್ಥಳದಲ್ಲೇ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ಕಾರನ್ನು ಮಂಗಳೂರಿನ ಡಿಸಿಆರ್ ಇ ವಿಭಾಗದಲ್ಲಿ ಕರ್ತವ್ಯದಲ್ಲಿರುವ ಪ್ರಸನ್ನ ಎಂಬವರು ಚಲಾಯಿಸುತ್ತಿದ್ದರು. ಘಟನೆ ಸಂದರ್ಭದಲ್ಲಿ ಕಾರು ಮತ್ತು ಬೈಕ್‌ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಕಾರಿನ ಎದುರಿನ ಗ್ಲಾಸಿಗೆ ಬಿದ್ದು...
ದಕ್ಷಿಣ ಕನ್ನಡಪುತ್ತೂರುಬಂಟ್ವಾಳಸುದ್ದಿ

ದಕ್ಷಿಣ ಕನ್ನಡ : ಅಡಿಕೆ ಎಲೆಚುಕ್ಕೆ ರೋಗದಿಂದ ಕಂಗಾಲಾದ ಬೆಳೆಗಾರರು-ಕಹಳೆ ನ್ಯೂಸ್

ಕರಾವಳಿಯ ಅಡಿಕೆ ಬೆಳೆಗಾರರಿಗೆ ಎದುರಾಗುವ ಸಮಸ್ಯೆಗಳಿಗೆ ಕೊನೆ ಇಲ್ಲವಾಗಿದೆ. ಪ್ರಸ್ತುತ ತೋಟಗಳಲ್ಲಿ ಎಲೆಚುಕ್ಕೆ ರೋಗ ಕಾಣಿಸಿದ್ದು, ಅವುಗಳ ನಿಯಂತ್ರಣವೇ ಸವಾಲಾಗಿದೆ. ಎಲೆ ಚುಕ್ಕೆ ರೋಗ ಫಸಲಿನ ಮೇಲೆ ಪರಿಣಾಮ ಬೀರುತ್ತಿದ್ದು, ಇಳುವರಿ ಕುಸಿತದ ಭೀತಿ ಎದುರಾಗಿದೆ. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಎಲೆಚುಕ್ಕೆ ರೋಗ ಬೇಸಗೆಯಲ್ಲಿ ಕಡಿಮೆಯಾಗುತ್ತದೆ. ಆದರೆ ಈ ಬಾರಿ ಮಳೆ ಅಧಿಕವಾಗಿರುವ ಕಾರಣ ಎಲೆಚುಕ್ಕೆ ರೋಗ ತೋಟಗಳಲ್ಲಿ ವ್ಯಾಪಕವಾಗಿ ಹರಡಿದೆ. ರೋಗ ಬಾಧೆಗೆ ಒಳಗಾದ ಅಡಿಕೆ ಮರಗಳ ಸೋಗೆಗಳು ಒಣಗಿವೆ....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ (ರಿ) ಶ್ರೀ ಅಯ್ಯಪ್ಪ ಭಕ್ತವೃಂದ ಗಣೇಶನಗರ ನೇರಳಕಟ್ಟೆಯಲ್ಲಿ ಡಿ.29ರಂದು ಶ್ರೀ ಹನುಮಗಿರಿ ಮೇಳದವರಿಂದ “ಸಾಕೇತ ಸಾಮ್ರಾಜ್ಞ ” ಯಕ್ಷಗಾನ ಬಯಲಾಟ – ಕಹಳೆ ನ್ಯೂಸ್

ಬಂಟ್ವಾಳ : ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ (ರಿ) ಶ್ರೀ ಅಯ್ಯಪ್ಪ ಭಕ್ತವೃಂದ ಗಣೇಶನಗರ ನೇರಳಕಟ್ಟೆಯಲ್ಲಿ ಡಿ.29ರಂದು ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳದವರಿಂದ "ಸಾಕೇತ ಸಾಮ್ರಾಜ್ಞ "ಯಕ್ಷಗಾನ ಬಯಲಾಟ ನಡೆಯಲಿದೆ. ಹೊಟೇಲ್ ಸದ್ಗುರು ಇದರ ಮಾಲಕರಾದ ಶ್ರೀ ಅನಂತಪ್ರಭು ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚೆನ್ನೈ ನ ಉದ್ಯಮಿ ಶ್ರೀ ಉಮೇಶ್ ಕುಮಾರ್, ಶ್ರೀ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶಂಭೂರು ಶಾಲೆಯಲ್ಲಿ ನೂತನ ತರಗತಿ ಕೊಠಡಿಗಳ ಉದ್ಘಾಟನೆ, ಶಿಲನ್ಯಾಸ ಮತ್ತು ಶಾಲಾ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭ-ಕಹಳೆ ನ್ಯೂಸ್

ಬಂಟ್ವಾಳ: ಗ್ರಾಮಕ್ಕೊಂದು ಮಾದರಿ ಶಾಲೆಯನ್ನಾಗಿ ಮಾಡಿ ಆ ಗ್ರಾಮದಲ್ಲಿರುವ ಬೆರಳೆಣಿಕೆಯ ಮಕ್ಕಳನ್ನು ಹೊಂದಿದ ಶಾಲೆಗಳ ಮಕ್ಕಳನ್ನು ಒಂದೇ ಕಡೆ ಸೇರಿಸಿ ಅವರಿಗೆ ಬೇಕಾದ ವಾಹನ ಶಿಕ್ಷಕರ ಸೌಲಭ್ಯವು ಒದಗಿಸಿ ಎಲ್ಲರಿಗೂ ಉತ್ತಮ ಶಿಕ್ಷಣ ದೊರಕುವಂತೆ ಮಾಡಬೇಕು, ಸರಕಾರಿ ಶಾಲೆಗಳು ಪ್ರಗತಿ ಹೊಂದಿದಾಗ ಪ್ರತಿಯೊಬ್ಬ ನಾಗರಿಕನು ಶಿಕ್ಷಿತನಾಗಲು ಸಾಧ್ಯ,ಎಂದು ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಯು ಹೇಳಿದರು. ಅವರು ಡಿಸೆಂಬರ್ 27 ನೇ ಶನಿವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಬಂಟ್ವಾಳ ಇದರ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮ -ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ( ರಿ) ಬಂಟ್ವಾಳ ಇದರ ಬಿಸಿ ರೋಡು ವಲಯದ ಕಾರ್ಯಕ್ಷೇತ್ರದ ಜ್ಞಾನ ವಿಕಾಸಕಾರ್ಯಕ್ರಮದಡಿಯಲ್ಲಿ ಮೂರು ತಿಂಗಳುಗಳ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಭಂಡಾರಿ ಬೆಟ್ಟು ವ್ಯಾಯಾಮ ಶಾಲೆ ಯಲ್ಲಿ ಪ್ರಾರಂಭಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ ಕಾರ್ಯಕ್ರಮ ಉದ್ಘಾಟಿಸಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬರುವ ಕಾರ್ಯಕ್ರಮಗಳ ಬಗ್ಗೆ...
1 4 5 6 7 8 210
Page 6 of 210