ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ (ರಿ) ಶ್ರೀ ಅಯ್ಯಪ್ಪ ಭಕ್ತವೃಂದ ಗಣೇಶನಗರ ನೇರಳಕಟ್ಟೆಯಲ್ಲಿ ಡಿ.29ರಂದು ಶ್ರೀ ಹನುಮಗಿರಿ ಮೇಳದವರಿಂದ “ಸಾಕೇತ ಸಾಮ್ರಾಜ್ಞ ” ಯಕ್ಷಗಾನ ಬಯಲಾಟ – ಕಹಳೆ ನ್ಯೂಸ್

ಬಂಟ್ವಾಳ : ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ (ರಿ) ಶ್ರೀ ಅಯ್ಯಪ್ಪ ಭಕ್ತವೃಂದ ಗಣೇಶನಗರ ನೇರಳಕಟ್ಟೆಯಲ್ಲಿ ಡಿ.29ರಂದು ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳದವರಿಂದ “ಸಾಕೇತ ಸಾಮ್ರಾಜ್ಞ “ಯಕ್ಷಗಾನ ಬಯಲಾಟ ನಡೆಯಲಿದೆ.
ಹೊಟೇಲ್ ಸದ್ಗುರು ಇದರ ಮಾಲಕರಾದ ಶ್ರೀ ಅನಂತಪ್ರಭು ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚೆನ್ನೈ ನ ಉದ್ಯಮಿ ಶ್ರೀ ಉಮೇಶ್ ಕುಮಾರ್, ಶ್ರೀ ರಾಜೇಶ್ ಕರುವಣ್, ಗಣೇಶನಗರ, ಶ್ರೀ ವಿಶು ಗುರುಸ್ವಾಮಿ, ಅಯ್ಯಪ್ಪ ಭಕ್ತವೃಂದ, ಗಣೇಶನಗರ, ಶ್ರೀ ಉಪೇಂದ್ರ ಆಚಾರ್ಯ, ಅಧ್ಯಕ್ಷರು, ಯಂಗ್ ಚಾಲೆಂಜರ್ಸ್ (ರಿ), ಗಣೇಶನಗರ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡಾಪಟು ಶ್ರೀ ತರುಣ್ ಕೃಷ್ಣ ಗಣೇಶನಗರ ಇವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳದವರಿಂದ “ಸಾಕೇತ ಸಾಮ್ರಾಜ್ಞ “ಯಕ್ಷಗಾನ ಬಯಲಾಟ ನಡೆಯಲಿದೆ.









