ವಿಶೇಷ ಚೇತನ ಮಗವನ್ನು ಎತ್ತಿಕೊಂಡು ಹೊಳೆ ದಾಟಿದ ತಂದೆ; ವಿಡಿಯೋ ವೈರಲ್ ; ಶಾಶ್ವತ ವ್ಯವಸ್ಥೆ ರೂಪಿಸಲು ಯೋಜನೆ ಸಿದ್ಧಪಡಿಸಲಾಗುವುದು: ಶಾಸಕ ಗಂಟಿಹೊಳೆ –ಕಹಳೆ ನ್ಯೂಸ್
ಉಡುಪಿ : ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಳಜಿತ್ ಗ್ರಾಮದ ಹುಲ್ಕಡ್ಕಿ ಗುಡಿಕೇರಿ ಎಂಬಲ್ಲಿ ಸೇತುವೆ ಇಲ್ಲದ ಕಾರಣ ಶಾಲೆಗೆ ಹೋಗುವ ಮಕ್ಕಳನ್ನು ಪೋಷಕರೇ ಎತ್ತಿಕೊಂಡು ಹೊಳೆ ದಾಟಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದೇ ರೀತಿ ತಂದೆಯೊಬ್ಬರು ತನ್ನ ವಿಶೇಷ ಚೇತನ ಮಗುವನ್ನು ಹೆಗಲ ಮೇಲೆ ಕೂರಿಸಿ ಹೊಳೆ ದಾಟುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಬೈಂದೂರು ತಾಲೂಕಿನಲ್ಲಿ ಜನರು ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಾಕಷ್ಟು...







