Tuesday, April 28, 2026

ರಾಜಕೀಯ

ರಾಜಕೀಯಸುದ್ದಿ

ಸಚಿವ ಸ್ಥಾನ ನಿರಾಕರಿಸಿ ಅರುಣ್ ಜೇಟ್ಲಿಯಿಂದ ಮೋದಿಗೆ ಮನವಿ – ಕಹಳೆ ನ್ಯೂಸ್

ನೂತನ ಸರ್ಕಾರದಲ್ಲಿ ನನಗೆ ಯಾವುದೇ ಜವಾಬ್ದಾರಿ ನೀಡಬೇಡಿ. ಎನ್‍ಡಿಎ ಸರ್ಕಾರದಲ್ಲಿ ಸಚಿವನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಪ್ರಸ್ತುತ ನನಗೀಗ ವಿಶ್ರಾಂತಿಯ ಅಗತ್ಯವಿದೆ. ಈ ಬಾರಿ ಸಂಪುಟ ಸೇರಲು ನಾನು ಅಸಹಾಯಕನಾಗಿದ್ದೇನೆ ಎಂದು ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದು, ಇದಕ್ಕೂ ಮುನ್ನ ಜೇಟ್ಲಿ ಅವರು ಈ ಪತ್ರ...
ರಾಜಕೀಯಸುದ್ದಿ

ನಮ್ಮ ಯಾವ ಶಾಸಕರನ್ನೂ ಮುಟ್ಟುವ ಶಕ್ತಿ ಯಾರಿಗೂ ಇಲ್ಲ: ಕೆಎಸ್ ಈಶ್ವರಪ್ಪ – ಕಹಳೆ ನ್ಯೂಸ್

ಶಿವಮೊಗ್ಗ: ನಾವು ಆಪರೇಷನ್ ಕಮಲ ಮಾಡಲ್ಲ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ಸರ್ಕಾರ ಬೀಳಿಸುವ ಪ್ರಯತ್ನ ನಾವು ಮಾಡಲ್ಲ. ನಮ್ಮ ಯಾವ ಶಾಸಕರನ್ನೂ ಮುಟ್ಟುವ ಶಕ್ತಿ ಯಾರಿಗೂ ಇಲ್ಲ. ನಾವು 105 ಹುಲಿಗಳಿದ್ದಂಗೆ ಎಂದು ಬಿಜೆಪಿ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ ಮೈತ್ರಿ ಸರಕಾರ ಬೇಡ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಹೇಳೋರು, ಕೇಳೋರು ಯಾರು ಇಲ್ಲ....
ರಾಜಕೀಯಸುದ್ದಿ

ಮಂಡ್ಯದಲ್ಲಿ ಮುಂದುವರೆದ ಮತದಾನದ ಬಿಸಿ ಬಿಸಿ ಚರ್ಚೆ – ಕಹಳೆ ನ್ಯೂಸ್

ಮಂಡ್ಯ : ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎಂಬಂತೆ ಮಂಡ್ಯದಲ್ಲಿ ಚುನಾವಣೆ ನಡೆದು ಫಲಿತಾಂಶ ಹೊರಬಂದಿದ್ದರೂ ಚರ್ಚೆಗಳು ಮಾತ್ರ ನಿಂತಿಲ್ಲ. ಹೌದು ಮಂಡ್ಯ ಹೇಳಿ ಕೇಳಿ ಜೆಡಿಎಸ್‍ನ ಭದ್ರಕೋಟೆ. ಒಕ್ಕಲಿಗರೇ ಬಹು ಸಂಖ್ಯಾತರಾಗಿದ್ದರು. ಅವರು ಜೆಡಿಎಸ್ ಬೆಂಬಲಿಸಿದ್ದರೂ ಕೊನೆ ಗಳಿಗೆಯಲ್ಲಿ ಲಕ್ಷಾಂತರ ಮತದಿಂದ ಸ್ವತಂತ್ರ ಅಭ್ಯರ್ಥಿ ಸುಮಲತಾ ಹೇಗೆ ಗೆಲುವು ಪಡೆದರು ಎಂಬ ಪ್ರಶ್ನೆಗಳು ಹಲವರನ್ನು ಕಾಡತೊಡಗಿದೆ. ಜೆಡಿಎಸ್‍ಗೆ ಒಕ್ಕಲಿಗರ ಮತಗಳೇ ವರದಾನ. ಇದರ ಜೊತೆಗೆ ಒಂದಷ್ಟು ಅಲ್ಪಸಂಖ್ಯಾತ,...
ರಾಜಕೀಯಸುದ್ದಿ

ಸಚಿವ ಪದವಿಯ ಆಸೆ ನನಗಿಲ್ಲ : ಹೆಚ್ಚಿನ ಅನುದಾನ ನೀಡುವಂತೆ ಪ್ರಧಾನಿಯಲ್ಲಿ ಮನವಿ : ಸಂಸದ ನಳಿನ್‍ಕುಮಾರ್ ಘೋಷಣೆ – ಕಹಳೆ ನ್ಯೂಸ್

ನನ್ನ ಪ್ರಾಮಾಣಿಕ ಹಾಗೂ ಸಜ್ಜನಿಕೆಯ ರಾಜಕಾರಣ ನನ್ನನ್ನು ಬೆಂಬಲಿಸಿದೆ. ಅಹಂಕಾರ, ಹಠ, ಜಾತಿಯ ರಾಜಕಾರಣ ಮಾಡದೆ ಸೇವಾ ಮನೋಭಾವನೆಯಿಂದ ರಾಜಕಾರಣ ಮಾಡುತ್ತೇನೆ. ನಾನು ಆಸೆ ಆಕಾಂಕ್ಷೆಗಳ ಹಿನ್ನಲೆಯಲ್ಲಿ ರಾಜಕಾರಣಕ್ಕೆ ಬಂದವನಲ್ಲ. ತತ್ವ ಸಿದ್ಧಾಂತದ ಆಧಾರಿತವಾಗಿ ರಾಜಕಾರಣದಲ್ಲಿದ್ದೇನೆ. ಹೀಗಾಗಿ ಯಾವುದೇ ಸಚಿವ ಪದವಿಯ ಆಕಾಂಕ್ಷಿಯಲ್ಲ. ನಾನು ಸಚಿವ ಸ್ಥಾನವನ್ನು ಅಪೇಕ್ಷೆ ಪಡುವುದಿಲ್ಲ. ಬದಲು ಕ್ಷೇತ್ರಕ್ಕೆ ಗರಿಷ್ಠ ಅನುದಾನ ನೀಡುವಂತೆ ಪ್ರಧಾನಮಂತ್ರಿಯವರಲ್ಲಿ ಮನವಿ ಮಾಡುತ್ತೇನೆ ಎಂದು ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್...
ರಾಜಕೀಯಸುದ್ದಿ

ಲೋಕಸಭೆಯಲ್ಲಿ ಪ್ರಚಂಡ ಜನಾದೇಶ ಪಡೆದಿರುವ ಬಿಜೆಪಿ: ರಾಜ್ಯಸಭೆಯಲ್ಲೂ ಬಹುಮತ ಸಾಧಿಸುವ ಸಾಧ್ಯತೆ – ಕಹಳೆ ನ್ಯೂಸ್

2019ರ ಲೋಕಸಭೆಯಲ್ಲಿ ಪ್ರಚಂಡ ಜನಾದೇಶ ಪಡೆದಿರುವ ಬಿಜೆಪಿ, ಮೇಲ್ಮನೆ ರಾಜ್ಯಸಭೆಯಲ್ಲೂ 2020ರೊಳಗೆ ಬಹುಮತ ಸಾಧಿಸುವ ಸಾಧ್ಯತೆ ಇದೆ. ಹೌದು ಅದು ಹೇಗೆ ಅಂದ್ರೆ ಈ ವರ್ಷದಲ್ಲಿ ರಾಜ್ಯಸಭೆಯ 10 ಸೀಟುಗಳು ಹಾಗೂ ಮುಂದಿನ ವರ್ಷ 2020ರಲ್ಲಿ ಒಟ್ಟು 72 ಸೀಟುಗಳು ತೆರವಾಗಲಿದ್ದು, ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಹಲವು ಚುನಾವಣೆ ಬಿಜೆಪಿಯ ಪಾರುಪತ್ಯ ಇರೋ ರಾಜ್ಯಗಳಲ್ಲಿ ನಡೆಯೋದ್ರಿಂದ ಕೆಲವೊಂದು ಸ್ಥಾನಗಳನ್ನ ಕಮಲ ಪಾಳಯ ಸುಲಭವಾಗಿ ತನ್ನ ತೆಕ್ಕೆಗೆ...
ರಾಜಕೀಯಸುದ್ದಿ

ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ : ಮೂವರೂ ಶಾಸಕರು ಬಿಜೆಪಿಗೆ ಸೇರ್ಪಡೆ – ಕಹಳೆ ನ್ಯೂಸ್

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೈಯಲ್ಲಿ ಭರ್ಜರಿ ಹೊಡೆತ ತಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಂದು ಆಘಾತ ಎದುರಿಸಬೇಕಾಗಿ ಬಂದಿದೆ. ಪಕ್ಷದ ಇಬ್ಬರು ಶಾಸಕರಾದ ಶೀಲಭದ್ರ ದತ್ತಾ ಮತ್ತು ಸುನಿಲ್‌ ಸಿಂಗ್‌ ಸೋಮವಾರ ಸಂಜೆ ನವದೆಹಲಿಗೆ ಆಗಮಿಸಿದ್ದಾರೆ. ಅವರ ಜೊತೆಗೆ ಇತ್ತೀಚೆಗಷ್ಟೇ ಟಿಎಂಸಿಯಿಂದ ಅಮಾನತುಗೊಂಡ ಬಿಜೆಪಿ ನಾಯಕ ಮುಕುಲ್‌ ರಾಯ್‌ ಅವರ ಪುತ್ರ ಶಾಸಕ ಸುಭ್ರಾಂಶ್ಷು ರಾಯ್‌ ಕೂಡಾ ಇದ್ದಾರೆ. ಈ ಮೂವರೂ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ....
ರಾಜಕೀಯಸುದ್ದಿ

ಹೈಕೋರ್ಟ್ ಅಂಗಳಕ್ಕೆ ಬಂದ ಪ್ರಜ್ವಲ್ ರೇವಣ್ಣ ಆಸ್ತಿ ಮುಚ್ಚಿಟ್ಟ ಆರೋಪ ಪ್ರಕರಣ..! – ಕಹಳೆ ನ್ಯೂಸ್

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಜ್ವಲ್​ ರೇವಣ್ಣ ಗೆದ್ದಾಗಿದೆ. ಆದ್ರೆ ಅವರ ಎಂಪಿ ಸ್ಥಾನ ಅನರ್ಹಗೊಳಿಸುವಂತೆ ಕಾಂಗ್ರೆಸ್ ಕಾರ್ಯಕರ್ತ ದೇವರಾಜ ಗೌಡ ಸಲ್ಲಿಸಿದ್ದ ಎಲೆಕ್ಷನ್​​ ಪಿಟಿಷನ್​​​​ ಅರ್ಜಿ ಈಗ ಹೈಕೋರ್ಟ್​ ಅಂಗಳಕ್ಕೆ ಬಂದಿದೆ. ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ದಾಖಲೆ ಸಲ್ಲಿಕೆ ಮಾಡಿದ ಅರೋಪದ ಮೇಲೆ ದೇವರಾಜ ಗೌಡ ಕಳೆದ ವಾರವೇ ಇಪಿ ಫೈಲ್ ಮಾಡಿದ್ದಾರೆ. ಪ್ರಜ್ವಲ್​​ ತನ್ನ ಅನೇಕ ಅಕ್ರಮ ಆಸ್ತಿಗಳ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ...
ರಾಜಕೀಯಸುದ್ದಿ

ಕೈ ನಾಯಕನಿಗೆ ನನ್ನ ಸ್ಥಾನವನ್ನು ಬಿಟ್ಟಿಕೊಡಲು ಸಿದ್ದ – ಕಹಳೆ ನ್ಯೂಸ್

ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂಸದರೆಂದು ಹೆಸರು ಮಾಡಿ, ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡವರು ಅಧಿಕಾರದಲ್ಲಿರಬೇಕೆ ಹೊರತು ಐದು ವರ್ಷ ಸುಮ್ಮನೆ ಕೂರುವುದು ಇಷ್ಟವಿಲ್ಲ. ಈ ಹಿನ್ನೆಲೆಯಲ್ಲಿ ನನ್ನ ಸ್ಥಾನವನ್ನು ಬಿಟ್ಟಿಕೊಡುವುದಾಗಿ ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ ತಿಳಿಸಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಪರಾಭವಗೊಂಡ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಂಸದ ಧ್ರುವನಾರಾಯಣ್ ಅವರಿಗೆ ಶಾಸಕ ಸ್ಥಾನವನ್ನು ಬಿಟ್ಟುಕೊಡುವುದಾಗಿ ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ ತಿಳಿಸಿದ್ದಾರೆ. ರಾಜ್ಯದಲ್ಲಿ ಐದು ವರ್ಷದವರೆಗೆ...
1 161 162 163 164 165 232
Page 163 of 232