ಮೊದಲ ದಿನವೇ ಮೋದಿ ಸರ್ಕಾರಕ್ಕೆ ಎರಡು ಶಾಕ್ ! – ಕಹಳೆ ನ್ಯೂಸ್
ನವದೆಹಲಿ: 2017-18ನೇ ಸಾಲಿನಲ್ಲಿ ದೇಶದಲ್ಲಿ ನಿರುದ್ಯೋಗ ದರವು ಶೇ.6.1ರಷ್ಟುಇದ್ದು ಕಳೆದ 45 ವರ್ಷಗಳಲ್ಲೇ ಗರಿಷ್ಠ ಪ್ರಮಾಣ ಎಂಬುದು ಇದೀಗ ಖಚಿತವಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಇದೇ ಮಾಹಿತಿಗಳನ್ನು ಒಳಗೊಂಡ ವರದಿ ಸೋರಿಕೆಯಾಗಿತ್ತು. ಇದೀಗ ಸರ್ಕಾರವೇ ಅಧಿಕೃತವಾಗಿ ಆ ವರದಿಯನ್ನು ಬಿಡುಗಡೆ ಮಾಡಿದೆ. 2017ರ ಜುಲೈನಿಂದ 2018ರ ಜೂನ್‌ವರೆಗೆ ನಡೆಸಿದ ಪಿಎಲ್‌ಎಫ್‌ಎಸ್ (ಪೀರಿಯಾಡಿಕ್ ಲೇಬರ್ ಪೋರ್ಸ್ ಸರ್ವೇ) ಸಮೀಕ್ಷೆ ಅನ್ವಯ ನಗರ ಪ್ರದೇಶಗಳ ಉದ್ಯೋಗ ಮಾಡುವ ಅರ್ಹತೆ ಹೊಂದಿದವರ ಪೈಕಿ ಶೇ.7.8ರಷ್ಟುಜನ ಮತ್ತು...







