Saturday, May 2, 2026

ರಾಜಕೀಯ

ರಾಜಕೀಯಸುದ್ದಿ

ಸಂಪುಟ ರಚನೆ ಹಗ್ಗಜಗ್ಗಾಟ ಮುಗಿದ ನಂತರ, ಸೆ.2ನೇ ವಾರದಲ್ಲಿ ರಾಜ್ಯ ಬಜೆಟ್ – ಕಹಳೆ ನ್ಯೂಸ್

ಬೆಂಗಳೂರು: ಸಂಪುಟ ರಚನೆ ಹಗ್ಗಜಗ್ಗಾಟ ಮುಗಿದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಿನ ತಿಂಗಳ ಎರಡನೇ ವಾರದಲ್ಲಿ ಬಿಜೆಪಿ ಸರ್ಕಾರದ ನೂತನ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಯಡಿಯೂರಪ್ಪ ಸೆಪ್ಟೆಂಬರ್ ಎರಡನೇ ವಾರದಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲಿದ್ದು, ಇದಕ್ಕಾಗಿ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಧಿಕಾರಿಗಳ ಸಭೆಯನ್ನು ನಿರಂತರವಾಗಿ ನಡೆಸುತ್ತಿರುವ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪನ್ಮೂಲಗಳ ಕ್ರೂಢೀಕರಣ, ಮಾಜಿ...
ರಾಜಕೀಯ

ನೆರೆಯಿಂದ ಏನೇ ನಷ್ಟವಾದರೂ ಅದಕ್ಕೆ ಸೂಕ್ತ ಪರಿಹಾರ: ಸಿಎಂ ಯಡಿಯೂರಪ್ಪ ಹೇಳಿಕೆ – ಕಹಳೆ ನ್ಯೂಸ್

ಬಳ್ಳಾರಿ: ನೆರೆ ಹಾವಳಿಯಿಂದ ಏನೇ ನಷ್ಟವಾದರೂ ಅದಕ್ಕೆ ಸೂಕ್ತ ಪರಿಹಾರ ನೀಡಲು ಸರ್ಕಾರ ಸಿದ್ದವಾಗಿದೆ ಎಂದು ಬಿ.ಎಸ್‍ಯಡಿಯೂರಪ್ಪ ಹೇಳಿದರು. ಆಲಮಟ್ಟಿ ಜಲಾಶಯದಿಂದ 2.11 ಲಕ್ಷ ಕ್ಯೂಸೆಕ್, ನಾರಾಯಣಪುರ ಜಲಾಶಯದಿಂದ 2.9 ಲಕ್ಷ ಕ್ಯೂಸೆಕ್ ಸೇರಿ ಒಟ್ಟು 4 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಎನ್‍ಡಿಆರ್‍ಎಫ್ ಸಹ ಕಾರ್ಯಾಚರಣೆಗೆ ಇಳಿದಿದೆ. ಕೇಂದ್ರದಿಂದಲೂ ಮಿಲಿಟರಿ ಪಡೆ ಬಂದಿದೆ. ಭಾನುವಾರ ವೀಡಿಯೋ ಕಾನ್ಫರೆನ್ಸ್ ನಡೆಸಿ ಸಂಬಂಧಪಟ್ಟ...
ರಾಜಕೀಯ

ಎಚ್.ಡಿ.ಕೆ ಕೇವಲ ಒಕ್ಕಲಿಗರಿಗೆ ಮಾತ್ರ ಕೆಲಸ ಮಾಡುತ್ತಾರೆ, ಜಗದೀಶ್ ಶೆಟ್ಟರ್ ಠೀಕೆ – ಕಹಳೆ ನ್ಯೂಸ್

ಹುಬ್ಬಳ್ಳಿ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒಂದು ಜಾತಿಗೆ ಮಾತ್ರ ಸೀಮಿತವಾಗಿ ಕೆಲಸ ಮಾಡುತ್ತಾರಾ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಲೆಳೆದಿದ್ದಾರೆ. ಡಿಐಜಿಯಾಗಿರುವ ರವಿಕಾಂತೇಗೌಡ ಅವರನ್ನು ವರ್ಗಾವಣೆ ಮಾಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಕಿಡಿಕಾರಿದರು. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು. ಅವರು ಕೇವಲ ಒಕ್ಕಲಿಗರಿಗೆ ಮಾತ್ರ ಕೆಲಸ ಮಾಡುತ್ತಾರಾ ಎಂದು ಕುಟುಕಿದರು. ಕುಮಾರಸ್ವಾಮಿ ಅವರಿಗೆ ರವಿಕಾಂತೇಗೌಡ ಅವರ ಬಗ್ಗೆ ಯಾಕೆ ಒಲವು..? ಅವರು ಒಕ್ಕಲಿಗ ಎನ್ನುವ...
ರಾಜಕೀಯ

ದೋಸ್ತಿ ಸರ್ಕಾರ ಪತನದಿಂದ ಬೇಸರ, ರಾಜಕೀಯ ನಿವೃತ್ತಿಯ ಬಗ್ಗೆ ಮಾತನ್ನಾಡಿದ ಎಚ್ ಡಿ ಕುಮಾರಸ್ವಾಮಿ – ಕಹಳೆ ನ್ಯೂಸ್

ಹಾಸನ: ದೋಸ್ತಿ ಸರ್ಕಾರ ಪತನದಿಂದ ಬೇಸರಗೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಜಕೀಯ ನಿವೃತ್ತಿಯ ಬಗ್ಗೆ ಮಾತನ್ನಾಡಿದ್ದಾರೆ. ಇಂದು ಜಾತಿ ಪ್ರಭಾವದಿಂದ ರಾಜಕೀಯ ನಡೆಯುತ್ತಿದೆ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಒಳ್ಳೆಯವರಿಗೆ ಕಾಲವಿಲ್ಲ. ನನಗೆ ರಾಜಕೀಯದಲ್ಲಿ ಮುಂದುವರಿಯಬೇಕೆಂಬ ಹುಂಬಲವೂ ಇಲ್ಲ. ರಾಜಕೀಯದಿಂದ ನಾನೇ ಹಿಂದಕ್ಕೆ ಸರಿಯಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿ ಆದೆ ದೇವರು ಕೊಟ್ಟ ಆಶೀರ್ವಾದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಸಿಎಂ ಸ್ಥಾನದಲ್ಲಿ ಕುಳಿತು...
ರಾಜಕೀಯ

ನರೇಂದ್ರ ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ – ಕಹಳೆ ನ್ಯೂಸ್

ಹೊಸದಿಲ್ಲಿ: ನರೇಂದ್ರ ಮೋದಿ ಸರಕಾರದ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ,'' ಬಿಜೆಪಿ ಸರಕಾರಕ್ಕೆ ಕಟ್ಟುವ ಕೆಲಸ ಗೊತ್ತಿಲ್ಲ. ಪೂರ್ವಜರು ಕಠಿಣ ಶ್ರಮ, ಶ್ರದ್ಧೆಯಿಂದ ಕಟ್ಟಿರುವ ಸಂಸ್ಥೆಗಳನ್ನು ನಾಶಮಾಡುವುದಕ್ಕೆ ಮಾತ್ರ ಗೊತ್ತಿದೆ'' ಎಂದರು. ಕಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ದೇಶದ ಉದ್ಯಮರಂಗಕ್ಕೆ ಹೇಗೆ ಪರಿಣಾಮಬೀರಬಹುದು ಎಂಬ ಕುರಿತು ಚರ್ಚೆಯಾಗುತ್ತಿರುವ ಸಮಯದಲ್ಲಿ ರಾಹುಲ್ ಹೇಳಿಕೆ ನೀಡಿದ್ದಾರೆ. ''ಬಿಜೆಪಿ(ಭಾರತೀಯ ಜನತಾ...
ರಾಜಕೀಯ

ರಾಜ್ಯ ಸರ್ಕಾರಿ ನೌಕರರಿಗೆ `ಬಿಎಸ್ ವೈ’ ಸರ್ಕಾರದಿಂದ ಶಾಕಿಂಗ್ ನ್ಯೂಸ್! ನೌಕರರ ಸಾಂದರ್ಭಿಕ ರಜೆ 10ಕ್ಕೆ ಇಳಿಕೆ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್ ನೀಡಿದ್ದು, ಸರ್ಕಾರಿ ನೌಕರರ ಸಾಂದರ್ಭಿಕ ರಜೆಯನ್ನು 15 ದಿನಗಳಿಂದ 10 ದಿನಗಳಿಗೆ ಕಡಿತ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಆರನೇ ವೇತನ ಆಯೋಗದ ಶಿಫಾರಸಿನಂತೆ ನಾಲ್ಕನೇ ಶನಿವಾರ ನೌಕರರಿಗೆ ರಜೆ ಘೋಷಿಸಿರುವ ಸರ್ಕಾರ, ಸಾಂದರ್ಭಿಕ ರಜೆ ಕಡಿತ ಮಾಡಲು ನಿರ್ಧರಿಸಿತ್ತು. ಅದರಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಬಿ. ಶಿವಕುಮಾರ್ ಅವರು ಜು. 27...
ರಾಜಕೀಯ

ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾದ ಸಂಸದ ನಳಿನ್ ಕುಮಾರ್ ಕಟೀಲ್ – ಕಹಳೆ ನ್ಯೂಸ್

ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಪ್ರಧಾನಮಂತ್ರಿ ಆಶಯ ಯೋಜನೆಯಾದ ಮುದ್ರಾ ಮತ್ತು ಜನಧನ್ ಯೋಜನೆಗಳು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಅನುಷ್ಠಾಗೊಂಡಿದೆ. ಇದರ ಬಗ್ಗೆ ಯೋಜನೆಯ ಪ್ರಗತಿ ವರದಿಯನ್ನು ಪ್ರಧಾನಮಂತ್ರಿ ಅವರಿಗೆ ಹಸ್ತಾಂತರಿಸಿದರು. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಬೇಕಾಗಿರುವ, ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಸಂಸದರ ಮನವಿಗೆ ಸ್ಪಂಧಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ...
ರಾಜಕೀಯ

ಉಗ್ರರ ಬೇಟೆಯಲ್ಲಿ ಕೇಂದ್ರ ಸರ್ಕಾರ ಒಂದು ಹೆಜ್ಜೆ ಮುಂದು : ಯುಎಪಿಎ ತಿದ್ದುಪಡಿ ವಿಧೇಯಕಕ್ಕೆ ಸಂಸತ್ ಅಂಗೀಕಾರ ಮುದ್ರೆ – ಕಹಳೆ ನ್ಯೂಸ್

ಹೊಸದಿಲ್ಲಿ: ಭಯೋತ್ಪಾದನೆ ನಿಗ್ರಹ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಸಂಸತ್ತು ಶುಕ್ರವಾರ ಅನುಮೋದಿಸಿದೆ. ಇದರೊಂದಿಗೆ ಕೇಂದ್ರ ಸರಕಾರಕ್ಕೆ ವ್ಯಕ್ತಿಯೊಬ್ಬನನ್ನು ಭಯೋತ್ಪಾದಕ ಎಂದು ಘೋಷಿಸುವ ಹಾಗೂ ಆತನ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ದೊರೆತಂತಾಗಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ವಿಧೇಯಕ 2019 ಅನ್ನು ಲೋಕಸಭೆ ಕಳೆದ ವಾರವೇ ಅಂಗೀಕರಿಸಿತ್ತು. 1967ರ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ಜುಲೈ 24ರಂದು ರಾಜ್ಯಸಭೆ ಇದನ್ನು ಅನುಮೋದಿಸಿತ್ತು. ವಿಧೇಯಕವನ್ನು ಆಯ್ದ ಸದಸ್ಯರ ಸಮಿತಿಯ...
1 142 143 144 145 146 232
Page 144 of 232