ಅಂಬೇಡ್ಕರ್ ಜಯಂತಿ ಮೆರವಣಿಗೆಯಲ್ಲಿದ್ದವರ ಮೇಲೆ ಮದ್ಯ ವ್ಯಸನಿಯಿಂದ ಕಾರು ಚಾಲನೆ – 7 ವರ್ಷದ ಮಗು ಸ್ಥಳದಲ್ಲೇ ಸಾವು -ಕಹಳೆ ನ್ಯೂಸ್
ಚಿಕ್ಕಮಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ (Ambedkar Jayanti) ಮೆರವಣಿಗೆ ವೇಳೆ ಭಾರಿ ಅಚಾತುರ್ಯವೊಂದು ಬಿಳೇಕಲ್ಲು ಗ್ರಾಮದಲ್ಲಿ ನಡೆದಿದೆ. ಮೆರವಣಿಗೆಯಲ್ಲಿದ್ದವರ ಮೇಲೆ ಮದ್ಯ ವ್ಯಸನಿ ಕಾರು ಚಲಾಯಿಸಿದ ಪರಿಣಾಮ 7 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. 7 ಜನರಿಗೆ ಗಾಯವಾಗಿದೆ. 7 ವರ್ಷದ ಮಗು ಸಾನ್ವಿ ಸಾವನ್ನಪ್ಪಿದೆ. 11 ವರ್ಷದ ನಿಶ್ಚಿತ್-ತೃಪ್ತಿ, ತಿಮ್ಮರಾಜು, ಉಷಾ, ಚೇತನ್, ಸೃಷ್ಠಿ ಹಾಗೂ ನಾಗರಾಜ್ ಗಾಯಗೊಂಡಿದ್ದು, ಹಾಸನದ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಅಪಘಾತವಾಗುತ್ತಿದ್ದಂತೆ...






