ಮುಂದಿನ ವರ್ಷದಿಂದ ನಾಗರ ಪಂಚಮಿಗೆ ಸರಕಾರಿ ರಜೆ ನೀಡಿ : ಮುಖ್ಯಮಂತ್ರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ – ಕಹಳೆ ನ್ಯೂಸ್
ಕರಾವಳಿ ಜಿಲ್ಲೆಯ ಜನರಿಗೆ ಅತ್ಯಂತ ಭಾವನಾತ್ಮಕವಾದ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುವ ನಗರ ಪಂಚಮಿ ಹಬ್ಬಕ್ಕೆ ರಾಜ್ಯ ಸರಕಾರ ಮುಂದಿನ ವರ್ಷದಿಂದಾದರೂ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ. ನಾಗರ ಪಂಚಮಿ ಹಬ್ಬಕ್ಕೆ ಕರಾವಳಿ ಜಿಲ್ಲೆಯಲ್ಲಿ ವಿಶೇಷ ಮಾನ್ಯತೆಯಿದ್ದು ಪ್ರತಿ ಮನೆಯಲ್ಲೂ ಭಕ್ತರು ನಾಗ ಬನಗಳಲ್ಲಿ ಅತ್ಯಂತ ಭಕ್ತಿ ಭಾವದಿಂದ ತನು ಎರೆದು, ಧಾರ್ಮಿಕ ಕಾರ್ಯಗಳಲ್ಲಿ ಕುಟುಂಬ ಸಮೇತರಾಗಿ...







