Tuesday, April 28, 2026

ಉಡುಪಿ

ಉಡುಪಿಜಿಲ್ಲೆಸಂತಾಪಸುದ್ದಿ

ಪಡುಬಿದ್ರಿ ಇಬ್ಬರು ಯುವಕರು ಸಮುದ್ರ ಪಾಲು; ಒರ್ವನ ರಕ್ಷಣೆ-ಕಹಳೆ ನ್ಯೂಸ್

ಪಡುಬಿದ್ರಿ: ಸೋಮವಾರ(ಡಿ.30) ಮೀನುಗಾರಿಕೆಗೆ ಇಳಿದಿದ್ದ ಇಬ್ಬರು ಸಮುದ್ರ ಪಾಲಾಗಿರುವ ಘಟನೆ ಹೆಜಮಾಡಿ ಸಮುದ್ರ ತೀರದಲ್ಲಿ  ನಡೆದಿದೆ. ಮೃತರನ್ನು ಅಮನ್(19) ಹಾಗೂ ಅಕ್ಷಯ್(19) ಎಂದು ಗುರುತಿಸಲಾಗಿದೆ. ಅಮನ್, ಅಕ್ಷಯ್ ಹಾಗೂ ಪವನ್ ಮೂವರು ಸೇರಿ ಮೀನುಗಾರಿಗೆ ತೆರಳಿದ್ದರು ಈ ವೇಳೆ ಮೂವರು ಸಮುದ್ರ ಪಾಲಾಗಿದ್ದಾರೆ, ಇಂದು ಎಳ್ಳಮಾವಾಸ್ಯೆ ಆಗಿದ್ದ ಕಾರಣ ಸಮುದ್ರ ತೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಸಮುದ್ರಪಾಲಾದ ಮೂವರಲ್ಲಿ ಇಬ್ಬರು ಮೃತಪಟ್ಟಿದ್ದು ಓರ್ವನನ್ನು ರಕ್ಷಣೆ ಮಾಡಲಾಗಿದೆ. ಘಟನೆ ಸಂಬAಧ...
ಉಡುಪಿಕಾಪುಸುದ್ದಿ

ಕಟಪಾಡಿ ಮಣಿಪುರ ಮುಖ್ಯ ರಸ್ತೆಯಿಂದ ಸತೀಶ್ ಬಿಲ್ಲವ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ  ಗುದ್ದಲಿ ಪೂಜೆ  ನೆರವೇರಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ – ಕಹಳೆ ನ್ಯೂಸ್

ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟಪಾಡಿ ಮಣಿಪುರ ಮುಖ್ಯ ರಸ್ತೆಯಿಂದ ಸತೀಶ್ ಬಿಲ್ಲವ ಮನೆಗೆ ಹೋಗುವ ರಸ್ತೆಗೆ  ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾ ಶೆಟ್ಟಿ ಅಧ್ಯಕ್ಷರು, ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುಭಾಸ್ ಬಲ್ಲಾಳ್, ಅಶೋಕ್ ರಾವ್, ಕವಿತಾ ಸುವರ್ಣ, ಜೋಸೆಫ್ ಮೊಂತೆರೊ, ಗುತ್ತಿಗೆದಾರರಾದ ಮಹೇಶ್ ಶೆಟ್ಟಿ, ಗ್ರಾಮ ಪಂಚಾಯತ್...
ಉಡುಪಿಸುದ್ದಿ

ಹೆದ್ದಾರಿ ಕಾಮಗಾರಿಗೆ ಅಗೆದಿರುವ ಹೊಂಡಕ್ಕೆ ಬಿದ್ದ ಕಾರು -ಕಹಳೆ ನ್ಯೂಸ್

ಉಡುಪಿ : ಅಂಬಲಪಾಡಿ ಜಂಕ್ಷನ್ ನಲ್ಲಿ ರಾ.ಹೆ. ಮೇಲ್ಸೇತುವೆ ಕಾಮಗಾರಿಗೆ ಅಗೆದಿರುವ ಬೃಹತ್ ಹೊಂಡಕ್ಕೆ ಕಾರೊಂದು ಮಗುಚಿಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಐದು ಮಂದಿ ಪ್ರಯಾಣಿಕರು ಕೊಲ್ಲೂರಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್ ನಲ್ಲಿ ಮೇಲ್ಸೇತುವೆಯ ಫಿಲ್ಲರ್ ನಿರ್ಮಿಸಲು ಬಹೃತ್ ಹೊಂಡ ಅಗೆಯಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿದ...
ಉಡುಪಿಮೂಡಬಿದಿರೆಸುದ್ದಿ

ಬಾಲಕನ ಚಿಕಿತ್ಸೆಗೆ ಮೂಡುಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಆರ್ಥಿಕ ನೆರವು-ಕಹಳೆ ನ್ಯೂಸ್

ಮೂಡುಬಿದಿರೆ: ತೀವ್ರತರವಾದ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸೃಜನ್ ಕುಕ್ಯಾನ್ ನ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕವಾಗಿ ಬೆಂಬಲವನ್ನ ನೀಡಿದ ಮೂಡುಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಯ ಬದುಕಿಗೆ ಆರ್ಥಿಕ ನೆರವನ್ನು ನೀಡಲಾಯಿತು. ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆಯ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಸೃಜನ್ ಕುಕ್ಯಾನ್ ಕಳೆದ ಕೆಲ ದಿನಗಳಿಂದ ತೀವ್ರತರವಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ತುರ್ತು ಚಿಕಿತ್ಸಾ...
ಉಡುಪಿಕುಂದಾಪುರಸಂತಾಪಸುದ್ದಿ

ಜಮ್ಮು ಕಾಶ್ಮೀರದ ಪೂಂಜ್ ಜಿಲ್ಲೆಯ ಗಡಿರೇಖೆ ಬಳಿ ಭೀಕರ ರಸ್ತೆ ಅಪಘಾತ ;ಕುಂದಾಪುರದ ಯೋಧ ಹುತಾತ್ಮ-ಕಹಳೆ ನ್ಯೂಸ್

ಕುಂದಾಪುರ: ಸೇನಾ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದ ಘಟನೆ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ನೋಯಿ ಪ್ರದೇಶದಲ್ಲಿ ನಡೆದಿದ್ದು, ಕುಂದಾಪುರ ಬೀಜಾಡಿಯ ಅನೂಪ್ ಪೂಜಾರಿ (31) ಸಹಿತ? ಐವರು ಮೃತ ಪಟ್ಟಿದ್ದಾರೆ. ಅನೂಪ್ ಪೂಜಾರಿ ಸೇನೆಗೆ ಸೇರಿ 13 ವರ್ಷವಾಗಿತ್ತು. ಅವರು ಮರಾಠ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹುತಾತ್ಮರಾಧ ಯೋಧ ಅನೂಪ್ ಅವರಿಗೆ ವಿವಾಹವಾಗಿದ್ದು 2 ವರ್ಷದ ಹೆಣ್ಣು ಮಗುವಿದೆ. ಕಳೆದ ತಿಂಗಳು...
ಉಡುಪಿಸಂತಾಪಸುದ್ದಿ

ಬಿಂದಿಗೆ ತೆಗೆಯಲು ಬಾವಿಗೆ ಇಳಿದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ವ್ಯಕ್ತಿ ಮೃತ್ಯು-ಕಹಳೆ ನ್ಯೂಸ್

ಮಣಿಪಾಲ: ಕೊಡಪಾನ ತೆಗೆಯಲು ಬಾವಿಗೆ ಇಳಿದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಮಣಿಪಾಲದ ಸರಳೆಬೆಟ್ಟುವಿನ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಬಳಿ ನಡೆದಿದೆ. ಮೃತರನ್ನು ಸರಳಬೆಟ್ಟು ನಿವಾಸಿ ಕೂಲಿ ಕಾರ್ಮಿಕ ಶಿವ ನಾಯ್ಕ್(50) ಎಂದು ಗುರುತಿಸಲಾಗಿದ್ದು, ಇವರು ನೆರೆಕರೆಯ ಕಲ್ಯಾಣಿ ಎಂಬವರ ಬಾವಿಯಲ್ಲಿ ಬಿದ್ದಿರುವ ಕೊಡಪಾನವನ್ನು ತೆಗೆಯಲು ಬಾವಿಗೆ ಇಳಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದರೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಅಗ್ನಿ ಶಾಮಕ...
ಉಡುಪಿರಾಜಕೀಯಸುದ್ದಿ

ಕೊರಗ ಸಮುದಾಯದ 10 ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಅದೇಶ ಪತ್ರ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿತರಣೆ-ಕಹಳೆ ನ್ಯೂಸ್

ಉಡುಪಿ: ರಾಜೀವ ಗಾಂಧಿ ವಸತಿ ನಿಗಮದಿಂದ ಕೊರಗ ಸಮುದಾಯದ 10 ಫಲಾನುಭವಿಗಳಿಗೆ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಂಜೂರಾದ ಮನೆ ಮಂಜೂರಾತಿ ಮತ್ತು ಕಾಮಗಾರಿ ಅದೇಶ ಪತ್ರವನ್ನು ಇಂದು ದಿನಾಂಕ 24-12-2024 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ತಮ್ಮ ಹಿರಿಯಡಕ ಶಾಸಕರ ಕಚೇರಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ, ಉಪಾಧ್ಯಕ್ಷರಾದ ಹರೀಶ್ ಸಾಲಿಯಾನ್, ಕೊಡಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂದೀಪ, ಬೈರಂಪಳ್ಳಿ...
ಉಡುಪಿಕುಂದಾಪುರಸುದ್ದಿ

ಕೇಂದ್ರದ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಾಪಸ್ಸಾಗಲಿ – ಚಂದ್ರಶೇಖರ್ ವಿ-ಕಹಳೆ ನ್ಯೂಸ್

ಕುಂದಾಪುರ: ಕಾರ್ಮಿಕ ವರ್ಗಕ್ಕೆ ಮಾರಕವಾದ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ಕೇಂದ್ರ ಸರಕಾರ ಕೈ ಬಿಡಬೇಕು ಎಂಬುದಾಗಿ ಸಿಐಟಿಯು ಕುಂದಾಪುರ ತಾಲೂಕು ಸಂಚಾಲಕರಾದ ಚಂದ್ರಶೇಖರ್ ವಿ ಇಂದಿಲ್ಲಿ ಹೇಳಿದರು. ಅವರು ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಸರಕಾರ ಶ್ರೀಮಂತ ಉದ್ದಿಮೆದಾರರ ಪರವಾದ ನೀತಿಗಳು ಕಾರ್ಮಿಕರ ಶೋಷಣೆಯನ್ನು ಹೆಚ್ಚಿಸುವುದಾಗಿದೆ ಕಿರು ಕೈಗಾರಿಕೆಗಳಿಗೆ ಯಾವುದೇ ರಕ್ಷಣೆ ಇಲ್ಲವಾಗಿದೆ, ಅದನ್ನೇ ಅವಲಂಬಿಸಿದ ಕಾರ್ಮಿಕರು ಬೀದಿಗೆ ಬೀಳುತ್ತಿದ್ದಾರೆ. ಉಡುಪಿ...
1 36 37 38 39 40 120
Page 38 of 120