Monday, March 9, 2026

ಉಡುಪಿ

ಉಡುಪಿ

ಉಡುಪಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ ; 30 ಸಾವಿರ ರೂ. ಮೌಲ್ಯದ ಗಾಂಜಾ ವಶ-ಕಹಳೆ ನ್ಯೂಸ್

ಉಡುಪಿ : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ 23 ವರ್ಷದ ಕೆ ಎಸ್ ಗೌತಮ್ ಗೌಡ ಮತ್ತು ಬೆಳಗಾವಿ ನಿವಾಸಿ 21 ವರ್ಷದ ವಿಕ್ಕಿ ದಯಾಳ್ ಅಲಿಯಾಸ್ ವಿಕ್ಕಿ ಎಂದು ಗುರುತಿಸಲಾಗಿದೆ. ಮಾರ್ಚ್ 16ರಂದು ಮಧ್ಯಾಹ್ನ 1.30ರ ಸುಮಾರಿಗೆ ಉಡುಪಿಯ ಕುಂಜಿಬೆಟ್ಟು ಕೆಇಬಿ ವಸತಿ ಗೃಹದ ಬಳಿ ಇರುವ ವಿಮಲಾ ಪದ್ಮನಾಭ ಕಟ್ಟಡದ ಬಳಿ ಇಬ್ಬರು ವ್ಯಕ್ತಿಗಳು...
ಉಡುಪಿ

ಉಡುಪಿ ಜಿಲ್ಲೆಯಲ್ಲೀಗ ಮೂರ್ಚೆ ತಪ್ಪಿಸಿ ಮನೆಯನ್ನೇ ಕೊಳ್ಳೆ ಹೊಡೆಯುವ ಖತರ್ನಾಕ್ ಗ್ಯಾಂಗ್ ಬಂದಿದೆ ; ಮಣಿಪಾಲ ಠಾಣೆಯ ಪೊಲೀಸರ ಪ್ರಕಟಣೆ-ಕಹಳೆ ನ್ಯೂಸ್

ಉಡುಪಿ : ಉಡುಪಿ ಜಿಲ್ಲೆಯಲ್ಲೀಗ ಮೂರ್ಚೆ ತಪ್ಪಿಸಿ ಮನೆಯನ್ನೇ ಕೊಳ್ಳೆ ಹೊಡೆಯುವ ಖತರ್ನಾಕ್ ಗ್ಯಾಂಗ್ ಬಂದಿದೆ. ಹೀಗಂತೆ ಖುದ್ದು ಮಣಿಪಾಲ ಠಾಣೆಯ ಪೊಲೀಸರೇ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಇವರು ಫಿನಾಯಿಲ್ ಮಾರುವ ನೆಪದಲ್ಲಿ ಮನೆ ಮನೆಗೆ ತೆರಳಿ ಫಿನಾಯಿಲ್ ನಂತೆ ಇರುವ ಬಾಟಲಿಯ ವಾಸನೆ ತೋರಿಸಿ ಮೂರ್ಛೆ ಹೋಗುವಂತೆ ಮಾಡಿ ಮನೆಯಲ್ಲಿರುವ ಬಂಗಾರದ ಆಭರಣಗಳನ್ನು ಕಳ್ಳತನ ನಡೆಸುತ್ತಿರುವ ಮಹಿಳೆಯರ ಗುಂಪೊಂದು ಉಡುಪಿ ನಗರದಲ್ಲಿ ಸಕ್ರೀಯವಾಗಿದೆ. ಮಣಿಪಾಲ ಪೊಲೀಸರು ಈ ಬಗ್ಗೆ ಪ್ರಕಟಣೆ...
ಉಡುಪಿ

ಬಸ್ಸಿನಲ್ಲಿ ರಂಪಾಟ ಮಾಡುತ್ತಿದ್ದ ಮಾನಸಿಕ ಅಸ್ವಸ್ಥ ವೃದ್ಧೆಯನ್ನ ರಕ್ಷಿಸಿದ ವಿಶು ಶೆಟ್ಟಿ ಅಂಬಲಪಾಡಿ-ಕಹಳೆ ನ್ಯೂಸ್

ಉಡುಪಿ : ಸಿಟಿ ಬಸ್ಸಿನಲ್ಲಿ ಸಾರ್ವಜನಿಕರ ಮೇಲೆ ವಿನಾಕಾರಣ ಹಲ್ಲೆ ನಡೆಸುತ್ತಿದ್ದ ಅಪರಿಚಿತ ಮಾನಸಿಕ ಅಸ್ವಸ್ಥ ವೃದ್ಧೆಯನ್ನ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಮಾನಸಿಕ ಅಸ್ವಸ್ಥ ವೃದ್ಧೆಯೊರ್ವರು, ಬಸ್ಸಿನಿಂದ ಇಳಿಯಲು ಕೇಳದೆ ರಂಪಾಟ ನಡೆಸಿದ್ದಾಳೆ. ಈ ಬಗ್ಗೆ ನಿರ್ವಾಹಕ ವಿಶು ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದು, ತಕ್ಷಣ ವಿಶು ಶೆಟ್ಟಿ ಅವರು ಮಹಿಳಾ ಪೊಲೀಸರ ಸಹಕಾರದಿಂದ ವೃದ್ಧೆಯನ್ನು ವಶಕ್ಕೆ...
ಉಡುಪಿ

ಅಡುಗೆ ಮಾಡುತ್ತಿದ್ದ ವೇಳೆ ಸೀರೆಗೆ ಬೆಂಕಿ ತಗುಲಿ 67 ವರ್ಷದ ಮಹಿಳೆ ಮೃತ್ಯು-ಕಹಳೆ ನ್ಯೂಸ್

ಉಡುಪಿ : ಬ್ರಹ್ಮಾವರದ ವರಂಬಳ್ಳಿ ಗ್ರಾಮದಲ್ಲಿ ಬುಧವಾರದಂದು 67 ವರ್ಷದ ಮಹಿಳೆ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಸೀರೆಗೆ ಬೆಂಕಿ ತಗುಲಿ ಸುಟ್ಟು ಗಾಯಗೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ಬ್ರಹ್ಮಾವರದ ವರಂಬಳ್ಳಿ ಗ್ರಾಮದ ಉಪ್ಪಿನಕೋಟೆ ನಿವಾಸಿ 67ವರ್ಷದ ಮಿಲ್ಲಿ ಡಿಸಿಲ್ವಾ ಮೃತಪಟ್ಟ ಮಹಿಳೆಯಾಗಿದ್ದಾರೆ. ಅವರು ಮಾರ್ಚ್ 6 ರಂದು ಬೆಳಿಗ್ಗೆ 11.15ರ ಸುಮಾರಿಗೆ ಅಡುಗೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಅವರ ಸೀರೆಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲೇ ಬೆಂಕಿ ದೇಹವನ್ನು ಆವರಿಸಿದೆ....
ಉಡುಪಿ

ಸುಬ್ರಹ್ಮಣ್ಯ ವಡ್ಡಾರು ಅವರ ಮನೆಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ದಾಳಿ- ಕಹಳೆ ನ್ಯೂಸ್

ಉಡುಪಿ : ಉಡುಪಿಯ ಪುತ್ತೂರು ಬಳಿ ಈ ಹಿಂದೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯ ವಡ್ಡಾರು ಅವರ ಮನೆಗೆ ಇಂದು ಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಸುಬ್ರಹ್ಮಣ್ಯ ವಡ್ಡಾರು ಅವರು ವರ್ಗಾವಣೆಗೊಂಡು ಮ್ಯೆಸೂರಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕರಾಗಿದ್ದಾರೆ. ಒಟ್ಟು ನಾಲ್ಕು ಕಡೆ ಈ ದಾಳಿ ನಡೆಸಿದ ಅಧಿಕಾರಿಗಳು ಸುಬ್ರಹ್ಮಣ್ಯ ವಡ್ಡಾರು ಅವರ ಮ್ಯೆಸೂರಿನಲ್ಲಿರುವ ಮನೆ, ಕಚೇರಿ, ಹಾಗೂ ಕಾರವಾರದಲ್ಲಿರುವ...
ಉಡುಪಿ

ಉಡುಪಿಯ ಅಲೆವೂರು ಗುಡ್ಡೆಯಂಗಡಿ ಮನೆಯೊಂದರ ಒಳಗಿತ್ತು ಅಸ್ಥಿಪಂಜರ; 8 ತಿಂಗಳ ಹಿಂದೆ ಸಾವನ್ನಪ್ಪಿದ್ದ ಸಂಶಯ-ಕಹಳೆ ನ್ಯೂಸ್

ಉಡುಪಿ : ಅಲೆವೂರು ಗುಡ್ಡೆಯಂಗಡಿ ಮನೆಯೊಂದರಲ್ಲಿ ಅಸ್ಥಿಪಂಜರವೊಂದು ಇಂದು ಕಂಡುಬಂದ ಘಟನೆ ನಡೆದಿದೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ವ್ಯಕ್ತಿ ಮೃತಪಟ್ಟು ಸುಮಾರು ಎಂಟು ತಿಂಗಳು ಕಳೆದಿರಬಹುದೆಂದು ಶಂಕಿಸಲಾಗಿದೆ. ಮೃತ ಪಟ್ಟಿರುವ ವ್ಯಕ್ತಿಯನ್ನು 47 ವರ್ಷದ ಸುರೇಶ್ ಶೆಟ್ಟಿ ಎಂದು ಗುರುತಿಸಲಾಗಿದ್ದು, ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಸ್ಥಿಪಂಜರವನ್ನು ಶವಪರೀಕ್ಷೆಗೆ ಮಣಿಪಾಲದ ಶವಗಾರಕ್ಕೆ ಸಾಗಿಸಲು ಉಚಿತ ಅಂಬುಲೆನ್ಸ್...
ಉಡುಪಿ

ಉಡುಪಿಯ ರಾಷ್ಟ್ರೀಯ ಹೆದ್ದಾರಿ ಬಳಿ ತ್ಯಾಜ್ಯ ಎಸೆದ ಲಾರಿ ಚಾಲಕನಿಗೆ ಅಪರ ಜಿಲ್ಲಾಧಿಕಾರಿ ತರಾಟೆ-ಕಹಳೆ ನ್ಯೂಸ್

ಉಡುಪಿ : ಉಡುಪಿ ನಗರಸಭೆಯ ತಂಡ, ಕುಂದಾಪುರ - ಮಂಗಳೂರು ಹೆದ್ದಾರಿ ಎರಡೂ ಪಾಶ್ವದಲ್ಲಿ ಎಸೆಯಲಾಗಿದ್ದ ಕಸವನ್ನು ಸ್ವಚ್ಚಗೊಳಿಸಿದ ಬಳಿಕವೂ ತ್ಯಾಜ್ಯ ಎಸೆಯುತ್ತಿದ್ದ ಲಾರಿಯೊಂದನ್ನು ತಡೆದು ನಿಲ್ಲಿಸಿ, ಚಾಲಕನಿಗೆ ದಂಡ ವಿಧಿಸಿದೆ. ಉಡುಪಿ ನಗರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ -66 ರಲ್ಲಿ ಕರಾವಳಿ ಜಂಕ್ಷನ್ ನಿಂದ ಕುಂದಾಪುರ / ಮಂಗಳೂರು ಹೆದ್ದಾರಿ ಬದಿಯ ಎರಡೂ ಪಾಶ್ವದಲ್ಲಿ ಎಸೆಯಲಾಗಿದ್ದ ಕಸವನ್ನು ಫೆಬ್ರವರಿ 13 ರಂದು ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ತೆರವುಗೊಳಿಸಿ...
ಉಡುಪಿದಕ್ಷಿಣ ಕನ್ನಡರಾಜ್ಯಸುದ್ದಿಸುಳ್ಯ

ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಹಾಗಲ್ಲ, ಆಚರಣೆ, ಸಂಪ್ರದಾಯ ಮಠದಂತಿದೆ – ಹಿಂದಿನಿಂದ ಬಂದ ಪೂಜಾಪದ್ದತಿ ಮಠಸಂಪ್ರದಾಯದ್ದು ; ಆಚರಣೆ ಭಿನ್ನತೆಗೆ ಪಲಿಮಾರು ಶ್ರೀ ಖಂಡನೆ – ಕಹಳೆ ನ್ಯೂಸ್

ಉಡುಪಿ : ಮಧ್ವಾಚಾರ್ಯರ ಕಾಲದಿಂದ ಕುಕ್ಕೆಯಲ್ಲಿ ಮಠದವರೇ ಪೂಜೆ ಮಾಡುತ್ತಾ ಬಂದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ದೇವಾಲಯದ ಹಾಗೆ ಅಲ್ಲ. ಕುಕ್ಕೆಯ ಆಚರಣೆ ಸಂಪ್ರದಾಯಗಳು ಮಠದಂತೆ ಇದೆ. ಕುಕ್ಕೆಯಲ್ಲಿ ತಲೆಯ ಮೇಲೆ ಹೊತ್ತುಕೊಂಡು ಹೋಗುವ ಉತ್ಸವ ನಡೆಯುವುದಿಲ್ಲ. ಆಚಾರ್ಯ ಮಧ್ವರ ಕಾಲದಿಂದ ಮಾಧ್ವರಿಂದ ಪೂಜೆ ನಡೆಯುತ್ತಿದೆ ಎಂದು ಉಡುಪಿ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.   ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಕುಕ್ಕೆಯಲ್ಲಿ ಈ...
1 110 111 112 113 114 119
Page 112 of 119