ಅಕ್ರಮ ಜಾನುವಾರು ಸಾಗಾಟ ಮತ್ತು ಹಿಂಸೆ ಪ್ರಕರಣಗಳಲ್ಲಿ ಕೂಡಾ ಭಾಗಿಯಾಗಿದ್ದ ಕ್ರಿಮಿನಲ್ ಆರೋಪಿ ಅಬೂಬಕ್ಕರ್‌ನಿಗೆ ಉಡುಪಿಯಿಂದಲೇ ಗಡೀಪಾರು ಶಿಕ್ಷೆ – ಕಹಳೆ ನ್ಯೂಸ್
ಉಡುಪಿ: ಗೆಳೆಯರೊಂದಿಗೆ ಒಂದು ತಂಡ ಕಟ್ಟಿಕೊಂಡು ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕಳವು, ಅಕ್ರಮ ಜಾನುವಾರು ಸಾಗಾಟ ಮತ್ತು ಹಿಂಸೆ ಪ್ರಕರಣಗಳಲ್ಲಿ ಕೂಡಾ ಭಾಗಿಯಾಗಿದ್ದ ಯುವಕನೋರ್ವನನ್ನು ಮತ್ತು ಆತನ ಸಹಚರರನ್ನು ಬಂಧಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ. ಅಬೂಬಕ್ಕರ್ (43) ಬಂಧಿತ ಆರೋಪಿ. ಕುಂದಾಪುರ ಗ್ರಾಮಾಂತರ ಠಾಣಾ ಸರಹದ್ದಿನ ಗುಲ್ವಾಡಿ ಗ್ರಾಮದ ಕಾಂಡ್ಲಗದ್‌ದೆ ವಾಸಿ ಅಬ್ದುಲ್ ಬ್ಯಾರಿ ಮಗ ಅಬೂಬಕ್ಕರ್ (43) ಬಂಧಿತ ಆರೋಪಿ. ಈತ ತನ್ನ ಸಹಚರರೊಂದಿಗೆ ತಮ್ಮದೇ ಆದ...






