Tuesday, April 28, 2026

ಜಿಲ್ಲೆ

ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನ.22 ಹಾಗೂ 23ರಂದು  ಬೈದಶ್ರೀ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ-ಕಹಳೆ ನ್ಯೂಸ್

ಬಂಟ್ವಾಳ : ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಸೇವಾ ಚಟುವಟಿಕೆಗಳ ಸಹಾಯಾರ್ಥವಾಗಿ ಬಂಟ್ವಾಳ ತಾಲೂಕು ಮಟ್ಟದ 12 ತಂಡಗಳ ಬೈದ್ಯಶ್ರೀ ಪ್ರೀಮಿಯರ್ ಲೀಗ್ ಬಿಲ್ಲವ ಕ್ರಿಕೆಟ್ ಪಂದ್ಯಾಟ *ಬೈದ್ಯಶ್ರೀ ಟ್ರೋಫಿ 2025" ನವೆಂಬರ್22 ಮತ್ತು 23 ರಂದು ಬಂಟ್ವಾಳ ಭಂಡಾರಿಬೆಟ್ಟು ಎಸ್ ವಿ ಎಸ್ ಶಾಲಾ ಮೈದಾನದಲ್ಲಿ ನಡೆಯಲಿದೆ. ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಮಾಲಕತ್ದದ ಟೀಮ್ ಬ್ರಹ್ಮಶ್ರೀ ಸಜೀಪ, ರಂಜಿತ್ ಬಿಸಿರೋಡ್ ಮಾಲಕತ್ದದ ಬಿಲ್ಲವ ವಾರಿಯರ್ಸ್ ಬಂಟ್ವಾಳ ಪೃಥ್ವಿರಾಜ್...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವೀರಕಂಭ ಗ್ರಾಮದ ಕೆಲಿಂಜ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ : ಕೂಡು ಕುಟುಂಬ ನಾಶದಿಂದಾಗಿ ಮಕ್ಕಳಲ್ಲಿ ಮಾನವೀಯ ಮೌಲ್ಯ ಕಮ್ಮಿ ಆಗಿದೆ : ಉಷಾ ಸುವರ್ಣ-ಕಹಳೆ ನ್ಯೂಸ್

ಕಲ್ಲಡ್ಕ: ಕೂಡು ಕುಟುಂಬ ನಾಶದಿಂದಾಗಿ ಮಕ್ಕಳಲ್ಲಿ ಮಾನವೀಯ ಮೌಲ್ಯ ಕಮ್ಮಿ ಆಗಿದೆ. ಮಕ್ಕಳ ಕಾಳಜಿಯ ಜೊತೆ ಪೋಷಕರ ಜವಾಬ್ದಾರಿ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಮಕ್ಕಳ ಚಲನ ವಲನಗಳನ್ನು ಪ್ರತಿದಿನ ಗಮನಿಸುತ್ತಾ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪೋಷಕರ ಜವಾಬ್ದಾರಿ ಬಹಳ ಇದೆ ಎಂದು ಬಂಟ್ವಾಳ ಕೆಲಿಂಜ ಶಾಲಾ ಶಿಕ್ಷಕಿ ಉಷಾ ಸುವರ್ಣ ಹೇಳಿದರು. ಅವರು ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಟ್ಲ, ಬಾಲವಿಕಾಸ ಸಮಿತಿ ಕೆಲಿಂಜ ಅಂಗನವಾಡಿ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ನ.22ರಂದು ವಿಶ್ವ ಹಿಂದೂ ಪರಿಷದ್ ಪುತ್ತೂರು, ನೆಲಪ್ಪಾಲು ಕೇಸರಿ ನಂದನ ಶ್ರೀ ವೀರಾಂಜನೇಯ ಕ್ಷೇತ್ರದ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ- ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಡೂರು ಗ್ರಾಮದ ವಿಶ್ವ ಹಿಂದೂ ಪರಿಷದ್ ಪುತ್ತೂರು ಶ್ರೀ ವೀರಾಂಜನೇಯ ಕ್ಷೇತ್ರ ನೆಲಪ್ಪಾಲುವಿನಲ್ಲಿ ಕೇಸರಿ ನಂದನ ವೀರಾಂಜನೇಯ ಕ್ಷೇತ್ರದ ಕಾರ್ಯಾಲಯದ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮವು ನ.22ರಂದು ನಡೆಯಲಿದೆ. ನ.21ರ ಇಂದು ಸಂಜೆ 6.00 ರಿಂದ ಕಟ್ಟಡದ ವಾಸ್ತು ಹೋಮ, ವಾಸ್ತು ಬಲಿ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಗಳು ನಡೆದು, ನ.22ರ ಶನಿವಾರದಂದು ಬೆಳಿಗ್ಗೆ 8.00 ಗಂಟೆಗೆ ಗಣಹೋಮ, ಸಂಜೆ 6.00ರಿಂದ ಭಜನೆ,...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿಲ್ಲವ ಸಮಾಜ ಸೇವಾ ಸಂಘ(ರಿ.)ಕಲ್ಲಡ್ಕ ವಲಯ ಇದರ ಅಮ್ಟೂರು ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಸತೀಶ್ ಪೂಜಾರಿ ಕೇಶವನಗರ ಆಯ್ಕೆ -ಕಹಳೆ ನ್ಯೂಸ್

ಬಿಲ್ಲವ ಸಮಾಜ ಸೇವಾ ಸಂಘ(ರಿ.)ಕಲ್ಲಡ್ಕ ವಲಯ ಇದರ ಅಮ್ಟೂರು ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಭೆಯು ಕಲ್ಲಡ್ಕ ಬಿಲ್ಲವ ಸಮಾಜ ಸೇವಾ ಸಂಘ ದ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ ರವರ ಅಧ್ಯಕ್ಷತೆಯಲ್ಲಿ ನಾಗೇಶ್ ಕರಿಂಗಾನ ರವರ ಮನೆ ಆವರಣದಲ್ಲಿ ಜರಗಿತು. ಗೌರವಧ್ಯಕ್ಷರು ಮಹಾಬಲ ಸಾಲಿಯಾನ್ ಮುಳಿಕೊಡಂಗೆ,  ಅಧ್ಯಕ್ಷರಾಗಿ ಸತೀಶ್ ಪೂಜಾರಿ ಕೇಶವನಗರ ಉಪಾಧ್ಯಕ್ಷರುಗಳಾಗಿ :ಮೋಹನದಾಸ್ ಅಂತರಗುತ್ತು, ವಸಂತಕುಮಾರ್ ಕರಿಂಗಾನ, ಕಾರ್ಯದರ್ಶಿಯಾಗಿ ಯತೀಶ್ ಕುಮಾರ್ ಮುಳಿಕೊಡಂಗೆ, ಜತೆ ಕಾರ್ಯದರ್ಶಿಗಳಾಗಿ ಜನಾರ್ಧನ...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ :ನಾಳೆ(ನ.22): ಉಜಿರೆ-ಧರ್ಮಸ್ಥಳ -ಪೆರಿಯಶಾಂತಿ ಸ್ಪರ್ ರಸ್ತೆ ಕಾಮಗಾರಿಗೆ ದ್ವಾರದ ಬಳಿಯ ಬಸ್ ನಿಲ್ದಾಣ ಧರ್ಮಸ್ಥಳದಲ್ಲಿ ಶಿಲಾನ್ಯಾಸ : ಧರ್ಮಸ್ಥಳದಲ್ಲಿ ಬೆಂಗಳೂರು ಮಾದರಿಯ ಅಂಡರ್ ಪಾಸ್ ನಿರ್ಮಾಣ-ಕಹಳೆ ನ್ಯೂಸ್

ಬೆಳ್ತಂಗಡಿ : ಉಜಿರೆ- ಧರ್ಮಸ್ಥಳ -ಪೆರಿಯಶಾಂತಿ ಸ್ಟರ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ನಾಳೆ ನ.22 ರಂದು ಬೆಳಗ್ಗೆ 9:30ಕ್ಕೆ ದ್ವಾರದ ಬಳಿಯ ಬಸ್ ನಿಲ್ದಾಣ ಬಳಿ ಧರ್ಮಸ್ಥಳ ದಲ್ಲಿ ಶಿಲಾನ್ಯಾಸ ನಡೆಯಲಿದೆ. ರೂ.614 ಕೋಟಿ ವೆಚ್ಚದ ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಲಾಖೆಯ ಹೆದ್ದಾರಿಗಳ ನಿರ್ವಹಣೆ ಯೋಜನೆಯಲ್ಲಿ 30 ಕಿ.ಮೀ. ವ್ಯಾಪ್ತಿಯ ಈ ಸ್ಟರ್ ರಸ್ತೆ ಅಭಿವೃದ್ಧಿ ಹೊಂದಲಿದೆ. ಕಾಮಗಾರಿಯಲ್ಲಿ ರಸ್ತೆ ವಿಸ್ತರಣೆಗೊಳ್ಳಲಿದ್ದು, ಸುಸಜ್ಜಿತ ಚರಂಡಿಗಳು,...
ದಕ್ಷಿಣ ಕನ್ನಡ

ಎನ್ನೆಂಸಿ; ವಾರ್ಷಿಕ ಕ್ರೀಡೋತ್ಸವ ಹಿರಿಯ ವಿದ್ಯಾರ್ಥಿಗಳ ಕ್ರೀಡಾ ಸಮ್ಮಿಲನ : ಕ್ರೀಡಾ ಚಟುವಟಿಕೆಗಳು ಉತ್ತಮ ಆರೋಗ್ಯಕ್ಕೆ ಅತ್ಯವಶ್ಯಕ: ಡಾ. ಪೊಡಿಯ-ಕಹಳೆ ನ್ಯೂಸ್

ಕ್ರೀಡೆ ಎಂಬುದು ಆರೋಗ್ಯಕ್ಕೆ ಪೂರಕ. ಕ್ರೀಡೆಯಿಂದ ದೈಹಿಕ ಕ್ಷಮತೆಯೊಂದಿಗೆ ನಾವು ಆರೋಗ್ಯವಾಗಿ ಕ್ರಿಯಾಶೀಲವಾಗಿ ಇರಲು ಸಾಧ್ಯ ಎಂದು ರಾಷ್ಟ್ರ ಮಟ್ಟದ ಕ್ರೀಡಾಪಟು, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಪುತ್ತೂರು ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪೊಡಿಯ ಹೇಳಿದರು. ಇವರು ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ನವೆಂಬರ್ 19ರಂದು ನಡೆದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಸಾಧನೆಗೆ ನಿರಂತರ ಪ್ರಯತ್ನ ಕಠಿಣ ಪರಿಶ್ರಮ ಅಗತ್ಯ. ಉತ್ತಮ ಆಹಾರ ಮತ್ತು...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ ನ್ಯಾಯಾಲಯಕ್ಕೆ ಧರ್ಮಸ್ಥಳ ಪ್ರಕರಣದ ತನಿಖಾ ವರದಿ ಸಲ್ಲಿಸಿದ ಎಸ್ಐಟಿ-ಕಹಳೆ ನ್ಯೂಸ್

ಭಾರೀ ಕುತೂಹಲ ಕೆರಳಿಸಿದ್ದ ಧರ್ಮಸ್ಥಳ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡ ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ. ಈಗ ಆರೋಪಿಯಾಗಿ ಬದಲಾಗಿರುವ ಆರಂಭದ ದೂರುದಾರ ಚಿನ್ನಯ್ಯ, ಮಹೇಶ್‌ ಶೆಟ್ಟಿ ತಿಮರೋಡಿ ಸೇರಿ ಆರು ಮಂದಿಯ ವಿರುದ್ದ ಎಸ್ಐಟಿ ಅಧಿಕಾರಿಗಳು ‘ಸುಳ್ಳು ಸಾಕ್ಷಿ’ ವರದಿಯನ್ನು ಸೆಕ್ಷನ್ 215 ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಎಸ್.ಐ.ಟಿ ಅಧಿಕಾರಿಗಳು ಪ್ರಕರಣದಲ್ಲಿ ಜೈಲಿನಲ್ಲಿರುವ ಚಿನ್ನಯ್ಯ ಸೇರಿದಂತೆ ಮಹೇಶ್ ಶೆಟ್ಟಿ...
ಉಡುಪಿಬೈಂದೂರುಸುದ್ದಿ

ಬೈಂದೂರು: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡ: ಸುಟ್ಟು ಭಸ್ಮವಾದ ಕಾರು.!-ಕಹಳೆ ನ್ಯೂಸ್

ಉಡುಪಿ: ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ಚಲಿಸುತ್ತಿದ್ದ ಕಾರೊಂದು ಸುಟ್ಟು ಭಸ್ಮವಾದ ಘಟನೆ ಬೈಂದೂರು ತಾಲೂಕಿನ ನಾವುಂದ ರಾಷ್ಟ್ರೀಯ ಹೆದ್ದಾರಿ 66ರ ಫ್ಲೈ ಓವರ್ ಮೇಲೆ ಸಂಭವಿಸಿದೆ. ಕುಂದಾಪುರದಿಂದ ಉಪ್ಪುಂದಕ್ಕೆ ಚಲಿಸುತ್ತಿದ್ದ ಕಾರಿನಲ್ಲಿ ದುರ್ಘಟನೆ ನಡೆದಿದೆ. ಕಾರು ಚಲಾಯಿಸುತ್ತಿದ್ದ ನಿತೇಶ್ (31) ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಂದು (73) ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಬೈಂದೂರು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದರು. ಬೈಂದೂರು ಪೊಲೀಸ್ ಠಾಣೆಯಲ್ಲಿ...
1 76 77 78 79 80 957
Page 78 of 957