ಸುಧೀರ್ಘ 27 ವರ್ಷಗಳಿಂದ ಬಾಯಿಲ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಶಿಕ್ಷಕಿ ಜೆಸಿಂತಾ ರವರ ಬೀಳ್ಕೊಡುಗೆ ಕಾರ್ಯಕ್ರಮ- ಕಹಳೆ ನ್ಯೂಸ್
ಕಲ್ಲಡ್ಕ : ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಬಾಯಿಲ ಕಿರಿಯ ಪ್ರಾಥಮಿಕ ಶಾಲೆ ರವಿವಾರ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿ ಯಾಗಿತ್ತು. ಶಾಲೆಯಲ್ಲಿ ಸುದೀರ್ಘ 27 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಇಲಾಖೆಯ ನಿಯಮದ ಪ್ರಕಾರ ಬೇರೆ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ಜೆಸಿಂತಾ ಪ್ಲೇವಿ ಮಸ್ಕರೇನಸ್ ರವರ ಬೀಳ್ಕೊಡುಗೆ ಕಾರ್ಯಕ್ರಮ ವಿಶೇಷವಾಗಿ ಜರಗಿತು. ಶಾಲಾ ಹಿರಿಯ ವಿದ್ಯಾರ್ಥಿಗಳು ಸೇರಿ ಗುರುವಿಗೆ ಗುರುದಕ್ಷಿಣೆಯಾಗಿ ಶಾಲೆಯಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ...







