ಶಾಲಾ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಧ್ವಜ ನಿಷೇಧಿಸುವಂತೆ ಮನವಿ -ಕಹಳೆ ನ್ಯೂಸ್
ಕಲ್ಲಡ್ಕ : ಹಿಂದೂ ಜನ ಜಾಗೃತಿ ಸಮಿತಿ ವೀರಕಂಭ ವತಿಯಿಂದ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ಇಲ್ಲಿನ ಮುಖ್ಯ ಶಿಕ್ಷಕಿಗೆ ಶಾಲೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಹಾಗೂ ಇನ್ನಿತರ ಯಾವುದೇ ಕಾರ್ಯಕ್ರಮಗಳಲ್ಲಿ ಭಾರತದ ರಾಷ್ಟ್ರೀಯ ಧ್ವಜವನ್ನು ಉಪಯೋಗಿಸುವಾಗ ಪ್ಲಾಸ್ಟಿಕ್ ಧ್ವಜ ಉಪಯೋಗಿಸಬಾರದು ಹಾಗೂ ಈ ಬಗ್ಗೆ ಶಾಲಾ ಮಕ್ಕಳಿಗೂ ಮನವರಿಕೆ ಮಾಡಬೇಕೆಂದು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಜೀವ ಮೂಲ್ಯ ಮಜಿ, ವೀರಪ್ಪ...







