ಧರ್ಮಸ್ಥಳ ವಿರುದ್ಧ ಅಪಪ್ರಚಾರ ; ಖಂಡಿಸಿ ಜೆಡಿಎಸ್ ಸತ್ಯ ಯಾತ್ರೆ-ಕಹಳೆ ನ್ಯೂಸ್
– ಹಾಸನದಿಂದ ಧರ್ಮಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಯಾತ್ರೆ ಹಾಸನ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಖಂಡಿಸಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಸತ್ಯ ಯಾತ್ರೆ ಹೊರಟಿದ್ದಾರೆ. ಧರ್ಮಸ್ಥಳ ಚಲೋ ಬೃಹತ್ ರ‍್ಯಾಲಿಗೆ ಭಾನುವಾರ ಚಾಲನೆ ಸಿಕ್ಕಿದೆ. ಹಾಸನದಿಂದ ಧರ್ಮಸ್ಥಳಕ್ಕೆ ಜೆಡಿಎಸ್ ಸತ್ಯ ಯಾತ್ರೆ ಕೈಗೊಂಡಿದೆ. ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಆಗಮಿಸಿದ್ದಾರೆ. ರ‍್ಯಾಲಿಯಲ್ಲಿ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಎಂಎಲ್‌ಸಿಗಳು ಭಾಗಿಯಾಗಿದ್ದಾರೆ. ಕಾರುಗಳು, ಟಿಟಿ...







