ಮಣಿಪಾಲ ಜ್ಞಾನಸುಧಾ: ಎನ್.ಎಸ್.ಎಸ್. ಘಟಕ ಉದ್ಘಾಟನೆ : ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಎನ್. ಎಸ್. ಎಸ್. ಸಹಕಾರಿ : ಡಾ. ಗಣನಾಥ ಎಕ್ಕಾರ್ – ಕಹಳೆ ನ್ಯೂಸ್
ಮಣಿಪಾಲ : ಶ್ರಮಯೇವ ಜಯತೆ ಎನ್ನುವ ಧ್ಯೇಯ ದೊಂದಿಗೆ ದೇಶದಲ್ಲಿ ಅತೀ ಹೆಚ್ಚು ಸದಸ್ಯರ ಸಂಘಟನೆ ಎನ್. ಎಸ್. ಎಸ್.. ಅಂತಹ ಸುಭದ್ರ ತಳಹದಿಯ ಸಂಘಟನೆ ಸದಸ್ಯರಾಗಿರುವುದೇ ಹೆಮ್ಮೆಯ ವಿಷಯ.ಯುವಜನತೆಗೆ ವಿಧ್ಯಾಭ್ಯಾಸದ ಜೊತೆಗೆ ಸಾಮಾಜಿಕ ಜವಾಬ್ದಾರಿ ಸೇವಮಾನೋಭಾವನೆ ರೂಢಿಸಲು ಸೃಷ್ಟಿಯಾದ ಎನ್.ಎಸ್.ಎಸ್. ಕ್ರಾಂತಿಕಾರಿ ಸಾಧನಾ ಪಥದಲ್ಲಿ ಸಾಗುತ್ತಾ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುತ್ತಿದೆ. ಎಂದು ಕರ್ನಾಟಕ ಸರಕಾರ(ಎನ್.ಎಸ್.ಎಸ್ ಕೋಶ)ದ ನಿಕಟಪೂರ್ವ ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಡಾ. ಗಣನಾಥ ಎಕ್ಕಾರ್ ಅಭಿಪ್ರಾಯಪಟ್ಟಿದ್ದಾರೆ....







