Saturday, May 2, 2026

ಜಿಲ್ಲೆ

ದಕ್ಷಿಣ ಕನ್ನಡಪುತ್ತೂರುಮಂಗಳೂರುಸುದ್ದಿ

ಅ.22ರಂದು ಕಪಿಲಾ ಗೋ ಶಾಲೆಯಲ್ಲಿ ಸಾರ್ವಜನಿಕ ಗೋಪೂಜಾ ಕಾರ್ಯಕ್ರಮ-ಕಹಳೆ ನ್ಯೂಸ್

ಮಂಗಳೂರು: ಪ್ರಕೃತಿ- ಪಶು ಸಂರಕ್ಷಣೆ, ಅಳಿವಿನಂಚಿನ ದೇಸಿ ಗೋವು ಸಂತತಿ ರಕ್ಷಣೆ ಹಾಗೂ ಗೋವಿನ ಪಾವಿತ್ರೃತೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಆರಂಭಗೊಂಡ ಕೆಂಜಾರಿನ ಕಪಿಲಾ ಪಾರ್ಕ್ ಗೋ ಶಾಲೆಯಲ್ಲಿ ಅ.22ರಂದು ಬೆಳಗ್ಗೆ 6ರಿಂದ 11.30ರ ವರೆಗೆ 108 ಕಪಿಲಾ ಗೋವಿಗೆ ಸಾರ್ವಜನಿಕ ಗೋಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಕಪಿಲಾ ಗೋ ಶಾಲೆಯ ಮುಖ್ಯಸ್ಥರಾದ ಪ್ರಕಾಶ್ ಶೆಟ್ಟಿ ಹೇಳಿದರು. ದೀಪಾವಳಿಯ ವಿಶೇಷ ಸಂದರ್ಭ ಸಾರ್ವಜನಿಕರಿಗೆ ಗೋವಿನ ಅನುಗ್ರಹ ಪ್ರಾಪ್ತಿಗಾಗಿ ಕಪಿಲಾ ಪಾರ್ಕ್...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು: ಆಟೋ ಚಾಲಕನ ಮೇಲೆ ಟ್ರಾಫಿಕ್ ಪೊಲೀಸರಿಂದ ಹಲ್ಲೆ ಅವಾಚ್ಯ ಶಬ್ದಗಳಿಂದ ನಿಂದನೆ ವಿಡಿಯೋ ವೈರಲ್ – ತೀವ್ರ ಆಕ್ರೋಶ : ಇಲಾಖೆಯಿಂದ ತನಿಖೆ..!-ಕಹಳೆ ನ್ಯೂಸ್

  ಪುತ್ತೂರು: ದರ್ಬೆ ಸಮೀಪ ಆಟೋ ರಿಕ್ಷಾ ಚಾಲಕರೊಬ್ಬರ ಮೇಲೆ ಸಂಚಾರಿ ಪೊಲೀಸರು ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಇಂದು ಸಂಜೆ ದರ್ಬೆಯಿಂದ ಮಾಣಿ ಮೈಸೂರು ಹೆದ್ದಾರಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ನಡೆದಿದೆ. ಸಂಚಾರಿ ಪೊಲೀಸರ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸಂಚಾರಿ ಠಾಣೆಯ ಪೊಲೀಸರು ಆಟೋ ರಿಕ್ಷಾಕ್ಕೆ ಅಡ್ಡಲಾಗಿ...
ದಕ್ಷಿಣ ಕನ್ನಡಬೆಂಗಳೂರುರಾಜ್ಯಸುದ್ದಿ

ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ: ಬೆಂಗಳೂರು-ಹಾಸನ ಬಸ್ ಸಂಚಾರ ತಾತ್ಕಾಲಿಕ ಸ್ಥಗಿತ -ಕಹಳೆ ನ್ಯೂಸ್

ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸುತ್ತಿದ್ದು, ವಾರಾಂತ್ಯ ಹಾಗೂ ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಹಾಸನಾಂಬೆ ದರ್ಶನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ದೇವಾಲಯಕ್ಕೆ ಭಕ್ತಸಾಗರವೇ ಹರಿದು ಬರುತ್ತಿರುವುದರಿಂದ ಹಾಸನ ಜಿಲ್ಲಾಡಳಿತ ಶಿಷ್ಟಾಚಾರ ಪಾಲನೆಯಲ್ಲಿ ಮಾರ್ಪಾಡು ಮಾಡಿದೆ. ಈ ನಡುವೆ ಬೆಂಗಳೂರು ಹಾಗೂ ಹಾಸನ ನಡುವೆ ಬಸ್ ಸಂಚಾರವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಜನರನ್ನು ನಿಯಂತ್ರಿಸಲು ಟಿಕೆಟ್ ಬುಕಿಂಗ್ ಕೂಡ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಹಾಸನಾಂಬೆ ದೇವಸ್ಥಾನ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ 2025- 26 ನೇ ಸಾಲಿನ ಪೋಷಕರ ಸಭೆ – ಕಹಳೆ ನ್ಯೂಸ್

ಬಡಗನ್ನೂರು:-  ಪುತ್ತೂರು ದ್ವಾರಕ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಡುವ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆ ಇಲ್ಲಿನ ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ 2025- 26 ನೇ ಸಾಲಿನ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕರಾದ ಶ್ರೀಯುತ ವಿಘ್ನೇಶ್ ಹಿರಣ್ಯ ಇವರು ವಹಿಸಿ, ಪ್ರತಿ ಮಗುವಿನಲ್ಲಿಯೂ ವಿವಿಧ ರೀತಿಯ ಪ್ರತಿಭೆಗಳು ಅಡಗಿರುತ್ತವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಬಹುಮುಖ್ಯವಾದುದು...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಟೀಮ್ ಕಲ್ಲೇಗ ಟೈಗರ್ಸ್ (ರಿ.) ವತಿಯಿಂದ ಅ. 19 ರಿಂದ ಅ.22ರವರೆಗೆ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ “ಪಟಾಕಿ ಉತ್ಸವ” – ಕಹಳೆ ನ್ಯೂಸ್

ಪುತ್ತೂರು : ಟೀಮ್ ಕಲ್ಲೇಗ ಟೈಗರ್ಸ್ (ರಿ.) ಇದರ ವತಿಯಿಂದ ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಪಟಾಕಿ ಉತ್ಸವ ಅ. 19 ರಿಂದ ಅ.22ರ ವರೆಗೆ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ನಡೆಯಲಿದೆ. ಈ ಬಾರಿಯ ಬೆಳಕಿನ ಹಬ್ಬವನ್ನು ಗ್ರೀನ್ ಪಟಾಕಿಗಳೊಂದಿಗೆ ಆಚರಿಸೋಣ ಪಟಾಕಿ ಉತ್ಸವಕ್ಕೆ ಬೇಟಿ ನೀಡಿ ಎಲ್ಲಾ ವಿಧದ ಪಟಾಕಿಗಳು ಕೈಗೆಟಕುವ ದರದಲ್ಲಿ ಖರೀದಿಸಿ ದೀಪಗಳ ಹಬ್ಬ ದೀಪಾವಳಿಯನ್ನ ಆಚರಿಸಿ.. ಸಂಪರ್ಕಿಸಿ : 95354...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ:ಹಿಂದು ಮುಖಂಡ ಭರತ್ ಕುಮ್ಡೇಲು ಅವರಿಗೆ ಪಿತೃ ವಿಯೋಗ – ಕಹಳೆ ನ್ಯೂಸ್

ಬಂಟ್ವಾಳ: ಹಿಂದು ಮುಖಂಡ ಭರತ್ ಕುಮ್ಡೇಲು ಇವರ ತಂದೆ ಶ್ರೀಯುತ ಸೇಸಪ್ಪ ಬೆಳ್ಚಾಡ ಕುಮ್ಡೇಲು ಇಂದು ಮಧ್ಯಾಹ್ನ 12;15ಕ್ಕೆ ಸ್ವರ್ಗಸ್ಥರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ 5ಗಂಟೆಗೆ ಸರಿಯಾಗಿ ನಡೆಸಲಾಗುವುದು ಎಂದು ಮೃತರ ಸಂಬಂಧಿಕರು ತಿಳಿಸಿರುತ್ತಾರೆ....
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಸಂವಹನ ಕೌಶಲ್ಯವು ಭವಿಷ್ಯದ ಉನ್ನತಿಗೆ ತಳಹದಿ – ಕಹಳೆ ನ್ಯೂಸ್

ಪುತ್ತೂರು, : ಸಂವಹನ ಕೌಶಲ್ಯವು ಭವಿಷ್ಯದ ಉನ್ನತಿಗೆ ಮೂಲ ತಳಹದಿಯಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಸಮಯಪ್ರಜ್ಞೆ, ತಾಳ್ಮೆ, ವರ್ತನೆಯೊಂದಿಗೆ ಸಕಾರಾತ್ಮಕ ಮನೋಭಾವವು ಬಹುಮುಖ್ಯವಾಗಿದೆ. ನಾವು ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರವೇ ಯಶಸ್ಸನ್ನುಗಳಿಸಲು ಸಾಧ್ಯ. ಅವಕಾಶ ನಮ್ಮ ಬಳಿಗೆ ಬಂದಾಗ ಅದನ್ನು ಬಿಟ್ಟುಬಿಡದೆ ಬಾಚಿಕೊಳ್ಳಬೇಕು. ಯಾವುದೇ ಕಷ್ಟದ ಸಂದರ್ಭದಲ್ಲಿಯೂ ಹಿಡಿದ ಕೆಲಸವನ್ನು ಕೈ ಬಿಡಬಾರದು. ಸಮಾಜದಲ್ಲಿ ಬದುಕಲು ಪುಸ್ತಕದ ಜ್ಞಾನ ಮಾತ್ರ ಸಾಕಾಗುವುದಿಲ್ಲ, ಇಲ್ಲಿ ಕಲಿಯಲು...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕಲಾ ಸಂಘದ ವತಿಯಿಂದ ಕಾರ್ಯಾಗಾರ – ಕಹಳೆ ನ್ಯೂಸ್

ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಕಲಾ ಸಂಘದ ವತಿಯಿಂದ ‘ Think Better- Feel Better ’ ವಿಷಯದ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿವೇಕಾನಂದ ಮಹಾವಿದ್ಯಾಲಯದ ಮನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಚಂದ್ರಕಾಂತ  ಗೋರೆ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ನಮ್ಮ ಕಾರ್ಯಗಳು ನಮ್ಮ ಆಲೋಚನೆಗಳಂತೆಯೇ ಸಾಗುತ್ತದೆ. ನಾವು ಧನಾತ್ಮಕ ಆಲೋಚನೆ ಮಾಡಿದಾಗ ಮಾತ್ರ ಬದುಕು ಸುಗಮವಾಗಿ ಸಾಗಬಲ್ಲದು. ಜೀವನದಲ್ಲಿ ಗುರಿ...
1 103 104 105 106 107 959
Page 105 of 959