Tuesday, April 28, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಪುತ್ತೂರುಸುದ್ದಿ

ಏ.17ರಂದು ಮಾಲಾಡಿಯಲ್ಲಿ 131ನೇ ವರ್ಷದ ಅಂಬೇಡ್ಕರ್ ಜಯಂತಿ: ‘ಜೈ ಭೀಮ್’ ಚಲನಚಿತ್ರ ಉಚಿತ ಪ್ರದರ್ಶನ- ಕಹಳೆ ನ್ಯೂಸ್

ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ‘ಮಾಲಾಡಿ ಅಂಬೇಡ್ಕರ್’ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಜನ್ಮದಿನಾಚರಣಾ ಸಮಿತಿ ಮಾಲಾಡಿ ಆಶ್ರಯದಲ್ಲಿ ಏ.17ರಂದು 131ನೇ ವರ್ಷದ ಅಂಬೇಡ್ಕರ್ ಜಯಂತಿಯನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಲಾಗಿದೆ. ಬೆಳಗ್ಗೆ 11 ಗಂಟೆಯಿAದ ಪುರುಷರಿಗೆ ಹಗ್ಗಜಗ್ಗಾಟ, 100ಮೀ ಓಟ, ಮಹಿಳೆಯರಿಗೆ ಸಂಗೀತ ಕುರ್ಚಿ, ಹಗ್ಗಜಗ್ಗಾಟ, ಬಾಲಕ, ಬಾಲಕಿಯರಿಗೆ 100ಮೀ ಓಟ, ಆಟೋಗ್ರಾಫ್, ಬಾಟಲಿಗೆ ನೀರು ತುಂಬಿಸುವುದು, ಸ್ಟಾç ಆಟ, ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ....
ದಕ್ಷಿಣ ಕನ್ನಡಪುತ್ತೂರುಸುದ್ದಿ

25ನೇ ವರ್ಷದ ಬೆಳ್ಳಿ ಹಬ್ಬದ ಶ್ರೀ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ 2021-22 ಪ್ರಯುಕ್ತ ಕೊಸ್ಮಠ ಬಲ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಎ. 17 ರಂದು ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ – ಕಹಳೆ ನ್ಯೂಸ್

ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಹೊಸ್ಮಠ ಬಲ್ಯ ಇದರ 25ನೇ ವರ್ಷದ ಬೆಳ್ಳಿ ಹಬ್ಬದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವದ ನಿಮಿತ್ತ, ಕ್ರೀಡಾಹಬ್ಬ, ರಂಗಮಂದಿರ ಲೋಕಾರ್ಪಣೆ, ಸ್ಮರಣ ಸಂಚಿಕೆ ಬಿಡುಗಡೆ, ಸನ್ಮಾನ, ಬಹುಮಾನ ವಿತರಣೆ, ಸಮಾರೋಪ ಸಮಾರಂಭ ಕಾರ್ಯಕ್ರಮ ಮೇ 1 ರಂದು ಬಲ್ಯ ಗ್ರಾಮದ ಹೊಸ್ಮಠ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಲಿದೆ.   ಇನ್ನೂ 25ನೇ ವರ್ಷದ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ಜಾತ್ರೋತ್ಸವದಲ್ಲಿ ಯುವಶಕ್ತಿ ಸೇವಾಪಥದ ಸಾರಥ್ಯದಲ್ಲಿ ಸೇವಾಯಜ್ಞ ಸೇವಾನಿಧಿ ಯೋಜನೆ – ಕಹಳೆ ನ್ಯೂಸ್

ಪುತ್ತೂರು : ಹಲವಾರು ಬಡಕುಟುಂಬಗಳಿಗೆ ನೆರವಿನ ಹಸ್ತ ಚಾಚಿರುವ ಯುವಶಕ್ತಿ ಸೇವಾಪಥ ಸಾರಥ್ಯದಲ್ಲಿ ಪುತ್ತೂರು ಜಾತ್ರೋತ್ಸವ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಮೂರು ಬಡ ಕುಟುಂಬಗಳ ಚಿಕಿತ್ಸಾ ವೆಚ್ಚಕ್ಕಾಗಿ ಸೇವಾಯಜ್ಞ ಸೇವಾನಿಧಿ ಯೋಜನೆ ಹಮ್ಮಿಕೊಂಡಿದೆ. ಈ ಮಹತ್ತರ ಕಾರ್ಯವು ಪುತ್ತೂರಿನ 10 ಸಂಘಟನೆಗಳ ಸಹಯೋಗದೊಂದಿಗೆ ನೆರವೇರಲಿದ್ದು, ಈ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯ ವೇಷ ಹಾಗೂ ಎಸ್ ಆರ್ ಕೆ ನಾಸಿಕ್ ವಾದನ ಸೇವಾಯೋಜನೆಗೆ ಮೆರುಗು ನೀಡಲಿದೆ. ಭಕ್ತಾದಿಗಳು ನೆರವಿನ ಹಸ್ತ ನೀಡುವಂತೆ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು: ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ವರ್ಷಾವಧಿ ಜಾತ್ರೋತ್ಸವ: ಎ.16-17ರಂದು ನಗರದ ಪ್ರಮುಖ ರಸ್ತೆ ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ – ಕಹಳೆ ನ್ಯೂಸ್

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಎ.16 ಮತ್ತು 17 ರಂದು ಪುತ್ತೂರು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ. ಬಸ್ ನಿಲ್ದಾಣದ ಕಡೆಯಿಂದ ಬರುವ ಎಲ್ಲಾ ವಾಹನಗಳು ರಸ್ತೆಯಿಂದ ಎಡಕ್ಕೆ ತಿರುಗಿ ಪರ್ಲಡ್ಕ ಬೈಪಾಸ್ ರಸ್ತೆಗೆ ತೆರಳಿ ಸಂಚರಿಸುವುದು. ಮಂಗಳೂರು ಕಡೆಯಿಂದ ಬರುವ ವಾಹನಗಳು ಲಿನೆಟ್ ಜಂಕ್ಷನಿಂದ ಪರ್ಲಡ್ಕ, ದರ್ಬೆ, ಎಪಿಎಂಸಿ ರಸ್ತೆಯ ಮೂಲಕ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ – ಕಹಳೆ ನ್ಯೂಸ್

ಪುತ್ತೂರು : ನರಿಮೊಗರಿನ ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು. ಅತ್ಯಂತ ಅಧ್ಯಯನ ಶೀಲ ವ್ಯಕ್ತಿತ್ವದ ಅಂಬೇಡ್ಕರ್, ಭಾರತದ ಶ್ರೇಷ್ಠ ಚಿಂತಕರಲ್ಲಿ ಓರ್ವರು. ಯಾರ ಪ್ರಭಾವಕ್ಕೂ ಒಳಗಾಗದೆ ತಮ್ಮದೇ ವಿಶಿಷ್ಟ ವಿಮರ್ಶೆಯ ದೃಷ್ಟಿ ಬೆಳೆಸಿಕೊಂಡವರು ಡಾ. ಅಂಬೇಡ್ಕರ್ ಎಂದು ಶಾಲಾ ಸಂಚಾಲಕ ಅವಿನಾಶ್ ಕೊಡಂಕಿರಿ ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಗುರು ರಾಜರಾಮ ವರ್ಮಾ ದಿನದ ಮಹತ್ವವನ್ನು ತಿಳಿಸಿದರು....
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವತ್‍ಪೂರ್ವ ವಿಭಾಗದಲ್ಲಿ ಶ್ರೀಮತಿ ಪ್ರತಿಭಾಪ್ರವೀಣ್ ಕುಮಾರ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ – ಕಹಳೆ ನ್ಯೂಸ್

ಉಪ್ಪಿನಂಗಡಿ: ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವತ್‍ಪೂರ್ವ ವಿಭಾಗದಲ್ಲಿ ಶ್ರೀಮತಿ ಪ್ರತಿಭಾಪ್ರವೀಣ್ ಕುಮಾರ್ ಇವರು ಶೇ 65 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶ್ರೀಪ್ರವೀಣ್‍ಕುಮಾರ್ ಮುಡಂಬಡಿತ್ತಾಯ ಗಾಣದಮೂಲೆ ಇವರ ಪತ್ನಿಯಾಗಿರುವ ಶ್ರೀಮತಿ ಪ್ರತಿಭಾಪ್ರವೀಣ್ ಕುಮಾರ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅನ್ನೋ ಹಂಬಲ ಇಟ್ಟುಕೊಂಡಿದ್ದ ಇವರು ಊರ್ವಸ್ಟೋರ್‍ನ ‘ನಾದ ಸರಸ್ವತಿ ಸಂಗೀತ ಶಾಲೆ’ಯ ನಿರ್ದೇಶಕಿ ವಿದುಷಿ ಶ್ರೀಮತಿ ಸತ್ಯವತಿ ಜಿ ಬಿಮುಡಂಬಡಿತ್ತಾಯ ಹಾಗೂ ವಿದ್ವಾನ್ ಶ್ರೀ...
ದಕ್ಷಿಣ ಕನ್ನಡಪುತ್ತೂರುಬಂಟ್ವಾಳಸುದ್ದಿ

ಹಿಂ.ಜಾ.ವೇ.ಪ್ರಮುಖರಿಂದ ಬಂಟ್ವಾಳದಲ್ಲಿ ಮುಖ್ಯಮಂತ್ರಿ ಭೇಟಿ ; ಹಿಂದೂ ವಿರೋಧಿ ಆರೋಪದಡಿ ಪುತ್ತೂರು ಡಿವೈಎಸ್ಪಿ ಗಾನ ವರ್ಗಾವಣೆಗೆ ಮನವಿ – ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲುವಿನಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಹಿಂ.ಜಾ.ವೇ. ಕಾರ್ಯಕರ್ತರು ಬೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪುತ್ತೂರಿನ ಹಿಂದೂ ವಿರೋಧಿ ಡಿ.ವೈ.ಎಸ್ಸಿ. ಗಾನ ಅವರನ್ನು ಕೂಡಲೇ ಪುತ್ತೂರಿನಿಂದ ವರ್ಗವಣೆ ಮಾಡುವಂತೆ ಹಾಗೂ ಪುತ್ತೂರಿನ ವಿದ್ಯಾರ್ಥಿಗಳ ಮೇಲೆ ವಿನಾ ಕಾರಣ ಕೇಸು ದಾಖಲಿಸಿ, ರೌಡಿ ಶೀಟರ್ ದಾಖಲೆ ಮಾಡಿದ್ದನ್ನು ರದ್ದು ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಹಿಂ.ಜಾ.ವೇ.ಪುತ್ತೂರು ತಾಲೂಕು ಗೌರವಧ್ಯಕ್ಷ ಡಾ | ಎಂ.ಕೆ. ಪ್ರಸಾದ್...
ದಕ್ಷಿಣ ಕನ್ನಡಸುದ್ದಿ

ಜೆಪ್ಪು ವಾರ್ಡಿನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ವೇದವ್ಯಾಸ್ ಕಾಮತ್ – ಕಹಳೆ ನ್ಯೂಸ್

ಮಂಗಳೂರು: ಮಹಾನಗರ ಪಾಲಿಕೆಯ ಜೆಪ್ಪು ವಾರ್ಡಿನಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕ ಕಾಮತ್, ಜೆಪ್ಪು ವಾರ್ಡಿನ ಸೂಟರ್ ಪೇಟೆಯ ೨ನೇ ಮುಖ್ಯ ರಸ್ತೆ ಹಾಗೂ ೩ನೇ ಅಡ್ಡರಸ್ತೆ, ೫ನೇ ಅಡ್ಡರಸ್ತೆ, ೮ನೇ ಅಡ್ಡರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಅಭಿವೃದ್ಧಿ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಅತೀ ಅಗತ್ಯವಾಗಿದ್ದು ಕಾಮಗಾರಿ ಪೂರ್ಣಗೊಳ್ಳುವ ವರೆಗೂ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ...
1 613 614 615 616 617 725
Page 615 of 725