ಆ. 5,6 ರಂದು ಕರಾವಳಿಯಲ್ಲಿ ‘ಆರೆಂಜ್ ಅಲರ್ಟ್’ ; ಭಾರೀ ಗಾಳಿಮಳೆ | ಕಡಬ ಹಾಗೂ ಸುಳ್ಯ ತತ್ತರ – ಕಹಳೆ ನ್ಯೂಸ್
ಮಂಗಳೂರು/ಉಡುಪಿ: ಮುಂಗಾರು ಬಿರುಸು ಪಡೆದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆ. 4ರಿಂದ 6ರ ವರೆಗೆ ಕರಾವಳಿ ಭಾಗದಲ್ಲಿ “ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ ಭಾರೀ ಮಳೆ, ಗಾಳಿ ಮತ್ತು ಸಮುದ್ರದ ಅಬ್ಬರ ಹೆಚ್ಚಿರುವ ನಿರೀಕ್ಷೆ ಇದೆ. ದ.ಕ. ಜಿಲ್ಲೆಯಾದ್ಯಂತ ಗುರುವಾರ ದಿನವಿಡೀ ಉತ್ತಮ ಮಳೆಯಾಗಿದೆ. ಮಂಗಳೂರು ನಗರ ದಲ್ಲಿ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ರಾತ್ರಿ ವೇಳೆ ಮಳೆಯ ಬಿರುಸು ಹೆಚ್ಚಿತ್ತು. ಉಡುಪಿಯಲ್ಲಿ ಹಗಲು...







