Tuesday, March 17, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಉಪ್ಪಿನಂಗಡಿಯ ಶಿರಾಡಿ ಗ್ರಾಮದಲ್ಲಿ ಟ್ರಕ್ ಮತ್ತು ಟಾಟಾಏಸ್ ಮುಖಾಮುಖಿ ಡಿಕ್ಕಿ ; ಓರ್ವ ಸಾವು-ಕಹಳೆ ನ್ಯೂಸ್

ಉಪ್ಪಿನಂಗಡಿ : ಏ.5ರಂದು ಎಳನೀರು ಹೇರಿಕೊಂಡು ಬರುತ್ತಿದ್ದ ಟ್ರಕ್ ಹಾಗೂ ಹಾಸನಕ್ಕೆ ಬೀಡಿ ವ್ಯಾಪಾರಕ್ಕಾಗಿ ತೆರಳುತ್ತಿದ್ದ ಟಾಟಾಏಸ್ ಗಾಡಿ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಶಿರಾಡಿ ಗ್ರಾಮದ ಉದಾನೆ ಪರವರ ಕೊಟ್ಯ ಎಂಬಲ್ಲಿ ನಡೆದಿದೆ. ಇದರ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಮೃತರನ್ನು ಬಂಟ್ವಾಳ ತಾಲೂಕು ಕುಕ್ಕಾಜೆ ಮೂಲದ 56 ವರ್ಷದ ಹನೀಫ್ ಎಂದು ಗುರುತಿಸಲಾಗಿದೆ. ಹಾಗೂ ಈ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ ಎಂದು...
ಹೆಚ್ಚಿನ ಸುದ್ದಿ

ಮೊಗಪ್ಪೆ ಕಟ್ಟದ ನೀರು ಮಲಿನಗೊಳಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಪನ್ನೆ-ಕಹಳೆ ನ್ಯೂಸ್

ಬೆಳ್ಳಾರೆ : ಮೊಗಪ್ಪೆ ಕಟ್ಟಕ್ಕೆ ಕಿಡಿಗೇಡಿಗಳು ಬಿಯರ್ ಮತ್ತು ಇನ್ನಿತರ ಮದ್ಯದ ಬಾಟಲ್ ಗಳನ್ನು ಕುಡಿದು ನೀರಿಗೆ ಬಿಸಾಡುತ್ತಿದ್ದರು. ಈ ಕಾರಣದಿಂದ ಸಾರ್ವಜನಿಕರು ಗ್ರಾಮ ಪಂಚಾಯತ್ ಗೆ ದೂರು ನೀಡಿದರು. ಈ ಹಿನ್ನಲೆಯಿಂದ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಪನ್ನೆ ಭೇಟಿ ನೀಡಿ ನೀರು ಮಲಿನಗೊಳಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಗೌರಿ ನೆಟ್ಟಾರು, ಬಿಜೆಪಿ ಬೂತ್ ಸಮಿತಿ...
ಹೆಚ್ಚಿನ ಸುದ್ದಿ

ತಾವೇ ಬೆಳೆದ 2 ಕ್ವಿಂಟಾಲ್ ಗೆಣಸನ್ನು ಕಟಾವು ಮಾಡಿದ ಕಲ್ಲಡ್ಕ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳು-ಕಹಳೆ ನ್ಯೂಸ್

ಕಲ್ಲಡ್ಕ : ಕಲ್ಲಡ್ಕ ಶ್ರೀರಾಮ ಶಾಲೆಯ ಶಾಲಾ ಕೈ ತೋಟದಲ್ಲಿ, ಕೃಷಿ ಸಂಘದ ವತಿಯಿಂದ ವಿದ್ಯಾರ್ಥಿಗಳು ತಾವೇ ಬೆಳೆದ 2 ಕ್ವಿಂಟಾಲ್ ಗೆಣಸನ್ನು ಕಟಾವು ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಮತ್ತು ಕೃಷಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು....
ಹೆಚ್ಚಿನ ಸುದ್ದಿ

ಆರ್ತಿಬೈಲ್ ಘಟ್ಟದ ಬಳಿ ದಿಬ್ಬಕ್ಕೆ ಡಿಕ್ಕಿ ಹೊಡೆದ ಬಸ್; 15ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ-ಕಹಳೆ ನ್ಯೂಸ್

ಯಲ್ಲಾಪುರ : ಕಳಚೆ-ಯಲ್ಲಾಪುರ ನಡುವಿನ ಬಸ್ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 63ರ ಆರ್ತಿಬೈಲ್ ಘಟ್ಟದ ಬಳಿ ದಿಬ್ಬಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ 15 ಕ್ಕೂ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಇದರಲ್ಲಿ ಬಹುತೇಕರು ಕಾಲೇಜು ವಿದ್ಯಾರ್ಥಿಗಳಾಗಿದ್ದು ಪರೀಕ್ಷೆ ನಡೆಯುವುದರಿಂದ ತುಸು ಮೊದಲೇ ಕಾಲೇಜಿಗೆ ಬರುತ್ತಿದ್ದರು. ಗಾಯಾಳುಗಳನ್ನು 18 ವರ್ಷದ ಸ್ವಾತಿ ಸಂತೋಷ ನಾಯ್ಕ ತೆಲಂಗಾರ, 16 ವರ್ಷದ ರಂಜನಾ ಜಿ.ಕುಣಬಿ ವಜ್ರಳ್ಳಿ, 18 ವರ್ಷದ...
ಹೆಚ್ಚಿನ ಸುದ್ದಿ

ಈದು ಶ್ರೀ ಮೂಜಿಲ್ನಾಯ ದೈವಸ್ಥಾನದ ಆಡಳಿತವನ್ನು ಆಡಳಿತ ಅಧಿಕಾರಿಗೆ ಹಸ್ತಾಂತರಿಸಲು ಮತ್ತು ಕಾಲಾವಧಿ ಜಾತ್ರೋತ್ಸವದ ನೆರವೇರಿಸುವಂತೆ ಧರಣಿ ನಡೆಸಿದ ಗ್ರಾಮಸ್ಥರು-ಕಹಳೆ ನ್ಯೂಸ್

ಈದು ಶ್ರೀ ಮೂಜಿಲ್ನಾಯ ದೈವಸ್ಥಾನ ಆಡಳಿತವನ್ನು ಆಡಳಿತ ಅಧಿಕಾರಿಗೆ ಹಸ್ತಾಂತರಿಸಲು ಮತ್ತು ಕಾಲಾವಧಿ ಜಾತ್ರೋತ್ಸವದ ನೆರವೇರಿಸುವಂತೆ ಈದು ಮೂಜಿಲ್ನಾಯ ದೈವಸ್ಥಾನದ ವಠಾರದಲ್ಲಿ ಗ್ರಾಮಸ್ಥರು ಧರಣಿ ನಡೆಸಿದರು....
ಹೆಚ್ಚಿನ ಸುದ್ದಿ

ಬಂದಾರು ಪಂಚಾಯತ್‍ನ ನಿವಾಸಿ ಬಾಡ ಮೊಗೇರರ ಮನೆ ದುರಸ್ತಿ ಕಾರ್ಯ ; ಕಷ್ಟಕ್ಕೆ ಸ್ಪಂಧಿಸಿ ಒಗ್ಗಟ್ಟು ಪ್ರದರ್ಶಿಸಿದ ಸಹೃದಯಿಗಳು – ಕಹಳೆ ನ್ಯೂಸ್

ಬಂದಾರು : ಬಂದಾರು ಗ್ರಾಮದ ಮೈರೋಳ್ತಡ್ಕ ಮುಂಡೂರು ನಿವಾಸಿಯಾಗಿರುವ ಬಾಡ ಮುಗೇರರವರು ಅನಾರೋಗ್ಯ ಪೀಡಿತರಾಗಿದ್ದು ತಂಗಿ ಲೀಲಾರವರ ದುಡಿಮೆಯಿಂದ ಜೀವನ ನಡೆಸುತ್ತಿದ್ದಾರೆ. ಇವರ ಮನೆಯ ಮಾಡು ಸಂಪೂರ್ಣ ಹಾಳಾಗಿದ್ದು ಗಾಳಿ ಮಳೆಗೆ ಬಿದ್ದು ಹೋಗುವ ಅಪಾಯದಲ್ಲಿತ್ತು. ಇದೀಗ ಈ ಮನೆಗೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಕಣಿಯೂರು ಒಟ್ಟಾಗಿ ಹೊಸ ರೂಪವನ್ನ ನೀಡಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯ ಹಾಗೂ ಶ್ರೀ ಧರ್ಮಸ್ಥಳ ವಿಪತ್ತು...
ಹೆಚ್ಚಿನ ಸುದ್ದಿ

ಬೈಕ್ ಸ್ಕಿಡ್ ಆಗಿ ತಾಯಿ ಮಗ ರಸ್ತೆಗೆ ಬಿದ್ದು ಗಾಯ; ಟ್ರಾಫಿಕ್ ಪೊಲೀಸರದ್ದೆ ತಪ್ಪು ಎಂದು ಹಲ್ಲೆಗೆ ಮುಂದಾದ ಸಾರ್ವಜನಿಕರು-ಕಹಳೆ ನ್ಯೂಸ್

ಬಳ್ಳಾರಿ : ಬಳ್ಳಾರಿ ನಗರದ ಸಂಗಮ್ ಸರ್ಕಲ್ ಬಳಿ ಪೊಲೀಸರು ಫೈನ್ ಹಾಕುತ್ತಾರೆ ಎಂಬ ಭಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರ ಮತ್ತು ಆತನ ತಾಯಿ ಇದ್ದ ಬೈಕ್ ಸ್ಕಿಡ್ ಆಗಿದ್ದು, ಇದು ಪೊಲೀಸರದ್ದೇ ತಪ್ಪಿನಿಂದ ನಡೆದ ಘಟನೆ ಎಂದು ತಪ್ಪು ತಿಳಿದ ಸಾರ್ವಜನಿಕರು ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿರುವ ಘಟನೆ ನಡೆದಿದೆ. ತಾಯಿ ಮಗ ಬೈಕ್ ನಲ್ಲಿ ಹೆಲ್ಮೆಟ್ ಹಾಕದೇ ಬಂದಿದ್ದು, ಪೊಲೀಸರ ಕೈಗೆ ಸಿಕ್ಕಿದರೆ...
ಹೆಚ್ಚಿನ ಸುದ್ದಿ

ಏಪ್ರಿಲ್ 7ರಿಂದ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತವಾಗುವುದು ಖಂಡಿತ; ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್-ಕಹಳೆ ನ್ಯೂಸ್

ಧಾರವಾಡ : ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು," ಕರ್ನಾಟಕ ಸರ್ಕಾರ ಎಸ್ಮಾ ಜಾರಿಗೊಳಿಸಿದರೂ ನಾವು ಭಯ ಪಡುವುದಿಲ್ಲ. ಏಪ್ರಿಲ್ 7ರಿಂದ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತವಾಗುವುದು ಖಂಡಿತ" ಎಂದು ಹೇಳಿದ್ದಾರೆ. ರಾಜ್ಯ ರಸ್ತೆ ಸಾರಿಗೆ ನೌಕರರು, ಸಾರಿಗೆ ನೌಕರರನ್ನು 6ನೇ ವೇತನ ಆಯೋಗದ ಅಡಿ ತರಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ. ಇದರಿಂದಾಗಿ ಸರ್ಕಾರಿ ಬಸ್‍ಗಳ ಸಂಚಾರದಲ್ಲಿ...
1 65 66 67 68 69 174
Page 67 of 174