Thursday, March 19, 2026

ಸುದ್ದಿ

ದಕ್ಷಿಣ ಕನ್ನಡಮಂಗಳೂರುಯಕ್ಷಗಾನ / ಕಲೆಸುದ್ದಿ

ಜ.17 ರಿಂದ 19 ರ ತನಕ “ದ ದಾಪರ್ ಎಕ್ಸ್ಪೋ ಚಿತ್ರ ಕಲಾ ಪ್ರದರ್ಶನ”…. !

ಮಂಗಳೂರು:ಉದಯ ಕೃಷ್ಣ ಜಿ ಮತ್ತು ನಿಯತಿ. ಯು ಭಟ್ ಬೆಂಗಳೂರು ತಂದೆ ಮತ್ತು ಮಗಳು ಜೊತೆಯಾಗಿ ನಡೆಸುವ ದ ದಾಪರ್ ಎಕ್ಸ್ಪೋ ನಾಮದ ಚಿತ್ರ ಕಲಾ ಪ್ರದರ್ಶನವು ಜನವರಿ 17 ರಿಂದ 19 ರ ತನಕ ನಗರದ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಖ್ಯಾತ ಚಿತ್ರ ಕಲಾವಿದರಾದ ಉದಯ ಕೃಷ್ಣ ಜಿ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡು , ಕಾರ್ಯಕ್ರಮದ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಹಿಂದೂ ಜನಜಾಗೃತಿ ಸಮಿತಿಯ ವಿಶೇಷ ಮಾರ್ಗದರ್ಶನ ಕಾರ್ಯಕ್ರಮ : ಸಂಸ್ಕೃತಿ ರಕ್ಷಣೆಗೆ ಬೇಕಿದೆ ಆತ್ಮಬಲ ಮತ್ತು ಧರ್ಮಜಾಗೃತಿ – ಡಾ. ಶ್ರೀ ಪ್ರಣವ ಮಲ್ಯ-ಕಹಳೆ ನ್ಯೂಸ್

ಬಂಟ್ವಾಳ: ಧರ್ಮಶಿಕ್ಷಣದ ಅಭಾವದಿಂದಾಗಿ ಇಂದು ಹಿಂದೂ ಸಮಾಜದವರಿಂದಲೇ ಧರ್ಮ ಮತ್ತು ದೇವತೆಗಳ ವಿಡಂಬನೆಯಾಗುತ್ತಿರುವುದು ವಿಷಾದನೀಯ. ಹಬ್ಬಗಳು ಮತ್ತು ವಿವಾಹ ಸಂಸ್ಕಾರಗಳಲ್ಲಿ ಸಂಸ್ಕೃತಿಯ ವಿಕೃತೀಕರಣ ನಡೆಯುತ್ತಿದ್ದು, ಇದು ಧರ್ಮಹಾನಿಗೆ ಸಮಾನವಾಗಿದೆ ಎಂದರು. ದೇವಸ್ಥಾನಗಳಲ್ಲಿ ಹಿಂದೂ ಸಮಾಜಕ್ಕೆ ಧರ್ಮಶಿಕ್ಷಣ ಸಿಗುವ ವ್ಯವಸ್ಥೆಯಾಗಬೇಕು. ಹಿಂದೂ ಧರ್ಮದ ಮೇಲಿನ ಆಘಾತಗಳನ್ನು ತಡೆಯಲು ಸಮಾಜದಲ್ಲಿ ಮನೋಬಲ ಮತ್ತು ಆತ್ಮಬಲ ವೃದ್ಧಿಸಿ, ಎಲ್ಲರೂ ಸಂಘಟಿತ ಪ್ರಯತ್ನ ಮಾಡುವುದು ಅನಿವಾರ್ಯವಾಗಿದೆ ಎಂದು ಡಾ. ಶ್ರೀ. ಪ್ರಣವ ಮಲ್ಯ ಅವರು ಕರೆ...
ಕೊಡಗುಜಿಲ್ಲೆಮಡಿಕೇರಿಸುದ್ದಿ

ತಂದೆಯನ್ನು ಕೊಂದು ಸುಟ್ಟು ಹಾಕಿದ ಮಗ – ಕಹಳೆ ನ್ಯೂಸ್

ಮಡಿಕೇರಿ : ತನ್ನ ತಂದೆಯನ್ನು ಕೊಂದು ಸುಟ್ಟು ಹಾಕಿದ ಆರೋಪದ ಮೇರೆಗೆ ಪ್ರಶಾಂತ್ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬುರೊ ಮುದಿ (65) ಕೊಲೆಯಾದವರು. ಪ್ರಕರಣ ಮುಚ್ಚಿ ಹಾಕಲು ಸಹಕರಿಸಿದ ಆರೋಪದ ಮೇರೆಗೆ ಇತರ 7 ಮಂದಿಯನ್ನೂ ಪೊಲೀಸರು ಬಂಧಿಸಿದ್ದಾರೆ. 'ಪಶ್ಚಿಮ ಬಂಗಾಳದ ಆರೋಪಿ ಪ್ರಶಾಂತ್ ತಾಲ್ಲೂಕಿನ ಹೊಸ್ಕೇರಿ ಗ್ರಾಮದ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಭಾನುವಾರ ಜಗಳ ಉಂಟಾಗಿ ದೊಣ್ಣೆಯಿಂದ ಪ್ರಶಾಂತ್ ತನ್ನ ತಂದೆಯನ್ನು ಹೊಡೆದು ಕೊಲೆ ಮಾಡಿದ್ದ. ಬಳಿಕ...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಜ. 22 ರಿಂದ 31ರ ತನಕ ವಿಧಾನಮಂಡಲದ ಜಂಟಿ ಅಧಿವೇಶನ – ಕಹಳೆ ನ್ಯೂಸ್

ಬೆಂಗಳೂರು :  ಜ.22ರಿಂದ ಜ.31ರ ತನಕ ಅಧಿವೇಶನ ನಡೆಸಲು ತುರ್ತು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ರಜಾ ದಿನಗಳನ್ನ ಹೊರತುಪಡಿಸಿ ಎಷ್ಟು ದಿನ ಅಧಿವೇಶನ ನಡೆಯಬೇಕು ಎಂಬುದನ್ನ ಸ್ಪೀಕರ್ ತೀರ್ಮಾನ ಮಾಡಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಚಿವ ಸಂಪುಟ ಸಭೆಯಲ್ಲಿ ಮನ್ರೇಗಾ ವರ್ಸಸ್ ವಿಕಸಿತ ಭಾರತ್ ಜಿರಾಮಜಿ ಕಾಯ್ದೆಗಳನ್ನು ಹೋಲಿಕೆ ಮಾಡಿ, ಸುದೀರ್ಘವಾಗಿ ಕ್ಯಾಬಿನೆಟ್‌ನಲ್ಲಿ ಚರ್ಚೆ...
ರಾಜ್ಯರಾಷ್ಟ್ರೀಯಸುದ್ದಿ

ಸುಕ್ಮಾ ಜಿಲ್ಲೆಯಲ್ಲಿ 29 ಮಂದಿ ನಕ್ಸಲರು ಮುಖ್ಯವಾಹಿನಿಗೆ -ಕಹಳೆ ನ್ಯೂಸ್

ಸುಕ್ಮಾ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ 29 ಮಂದಿ ನಕ್ಸಲರು ಮುಖ್ಯವಾಹಿನಿ ಸೇರಿದ್ದಾರೆ. ಈ ಶರಣಾಗತಿಯಲ್ಲಿ ಗೊಗುಂಡಾ ಪ್ರದೇಶದ ದಂಡಕಾರಣ್ಯ ಆದಿವಾಸಿ ಕಿಸಾನ್ ಮಜದೂರ್ ಸಂಘಟನೆಯ ನಾಯಕ ಪೊಡಿಯಂ ಬುದ್ರಾ ಸೇರಿದ್ದಾರೆ. ಇವರ ಮೇಲೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಡಿಎಕೆಎಂಎಸ್ ಸದಸ್ಯರು, ಮಿಲಿಷಿಯಾ ಸಿಬ್ಬಂದಿ ಹಾಗೂ ಜನತಾನಾ ಸರ್ಕಾರ್‌ನ ಕಾರ್ಯಕರ್ತರು ಈ ಗುಂಪಿನಲ್ಲಿದ್ದರು. ಸುಕ್ಮಾ (Sukma) ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾನ್ ಅವರು ಮಾತನಾಡಿ, ರಾಜ್ಯ ಸರ್ಕಾರದ ಪೂನಾ...
ಜಿಲ್ಲೆಮಂಡ್ಯಸುದ್ದಿ

ಹೃದಯಾಘಾತದಿಂದ ಬಿಎಸ್‌ಎಫ್ ಯೋಧ ಸಾವು -ಕಹಳೆ ನ್ಯೂಸ್

ಮಂಡ್ಯ: ಮಹಾರಾಷ್ಟ್ರದ ಚಾಕೋರು ಜಿಲ್ಲೆಯ ಲಾತೂರ್‌ನ ಬಿಎಸ್‌ಎಫ್ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯ ಮೂಲದ ಬಿಎಸ್‌ಎಫ್ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಂಡ್ಯ ನಗರದ ತಾವರೆಗೆರೆ ಬಡಾವಣೆ ನಿವಾಸಿ ಎಂ.ಬಿ ಮಾದೇಗೌಡ (44) ಮೃತ ಯೋಧ. ಕರ್ತವ್ಯದ ಸಮಯದಲ್ಲಿ ಹೃದಯಾಘಾತದಿಂದ ಯೋಧ ಮೃತಪಟ್ಟಿದ್ದಾರೆ. ಮಾದೇಗೌಡ 2000ರಲ್ಲಿ ಮೈಸೂರಿನಲ್ಲಿ ನಡೆದ ಬಿಎಸ್‌ಎಫ್ ಸೇನಾ ನೇಮಕಾತಿಯಲ್ಲಿ ಆಯ್ಕೆಯಾಗಿದ್ದು, ಕಳೆದ 25 ವರ್ಷಗಳಲ್ಲಿ ದೇಶದ ಹಲವೆಡೆ ಸೇವೆ ಸಲ್ಲಿಸಿದ್ದರು. ಇಂದು ಯೋಧನ ಮೃತದೇಹ ಮಂಡ್ಯಕ್ಕೆ...
ಸುದ್ದಿ

ಮಂಗಳೂರು ಐಸ್ ಕ್ರೀಮ್ ಪರ್ಬ 2026 – Season 3 -ಕಹಳೆ ನ್ಯೂಸ್

ಮಂಗಳೂರಿನ ಪಾಂಡೇಶ್ವರದಲ್ಲಿರುವ ಫಿಝಾ ಬೈ ನೆಕ್ಸಸ್ ಮಾಲ್  ಮತ್ತು ಮಂಗಳೂರಿನ ಪ್ರಸಿದ್ಧ ತಿಂಡಿ (Try Tinidi) Instagram ಪೇಜ್ ಸಹ ಭಾಗಿತ್ವದಲ್ಲಿ ಇದೇ ಬರುವ ಜನವರಿ 16, 17 ಮತ್ತು 18, 2026 ರಂದು 3 ದಿನಗಳ ಐಸ್ ಕ್ರೀಮ್ ಪರ್ಬವನ್ನು ಆಯೋಜಿಸಲಾಗಿದೆ. 3ನೇ ಅವ್ರತ್ತಿಯ ಐಸ್ ಕ್ರೀಮ್ ಪರ್ಬ ಇದಾಗಿದ್ದು ಮೂರೂ ದಿನ ಕೂಡ ಬೆಳಗ್ಗೆ 11 ರಿಂದ ರಾತ್ರಿ 9 ರವರೆಗೆ ನಡೆಯಲಿದೆ. ಮಂಗಳೂರನ್ನು ಐಸ್ ಕ್ರೀಮ್...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಕಾವ್ಯಶ್ರೀ ಅಜೀರು ಆಯ್ಕೆ , ಉಮೇಶ್ ಮಿಜಾರ್ ಗೆ ಕಲಾಭೂಷಣ ಪ್ರಶಸ್ತಿ-ಕಹಳೆ ನ್ಯೂಸ್

ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಯಕ್ಷರಂಗದ ಅಗ್ರಮಾನ್ಯ ಮಹಿಳಾ ಭಾಗವತ ರಾದ ಕಾವ್ಯಶ್ರೀ ಅಜೇರು ಆಯ್ಕೆಯಾಗಿದ್ದಾರೆ. ಶ್ರೀಕುಂದೇಶ್ವರ ದೇಗುಲದ ಧರ್ಮದರ್ಶಿಯಾಗಿ, ಯಕ್ಷಗಾನ ಮೇಳ ಸಂಘಟಕ, ಕಲಾವಿದ, ಅರ್ಥಧಾರಿಯಾಗಿದ್ದ ದಿ.ರಾಘವೇಂದ್ರ ಭಟ್ ಸ್ಮರಣಾರ್ಥ, ಕ್ಷೇತ್ರದ ವತಿಯಿಂದ ಪ್ರಶಸ್ತಿ ನೀಡಲಾಗುತ್ತಿದೆ. ಜ.23ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಯ್ಕೆ ಸಮಿತಿ ಸಂಚಾಲಕ ಜಿತೇಂದ್ರ ಕುಂದೇಶ್ವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಶ್ರೀ ಕುಂದೇಶ್ವರ ಕ್ಷೇತ್ರದಲ್ಲಿ...
1 78 79 80 81 82 3,297
Page 80 of 3297