Sunday, June 14, 2026

ಬೆಂಗಳೂರು

ಬೆಂಗಳೂರುರಾಜ್ಯಸುದ್ದಿ

ಖಾಸಗಿ ಫೋಟೋ ಇಟ್ಟುಕೊಂಡು ಸೈಬರ್ ವಂಚಕರ ಕಿರುಕುಳ – ಬೆಂಗಳೂರಿನಲ್ಲಿ ಬಿ.ಟೆಕ್ ವಿದ್ಯಾರ್ಥಿ ನಾಪತ್ತೆ -ಕಹಳೆ ನ್ಯೂಸ್

ಬೆಂಗಳೂರು: ಸೈಬರ್ ವಂಚಕರ ಕಿರುಕುಳಕ್ಕೆ ಬೇಸತ್ತು ಬಿ.ಟೆಕ್ ವಿದ್ಯಾರ್ಥಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ  ನಡೆದಿದೆ. ಒಡಿಶಾ ಮೂಲದ ಚಿನ್ಮಯ್ ಪ್ರಸಾದ್ ಸಾಹೋ ಎಂಬ ಯುವಕ ಕಣ್ಮರೆಯಾಗಿದ್ದಾನೆ. ಬಿ.ಟೆಕ್ ಓದಿಕೊಂಡಿರುವ ಚಿನ್ಮಯ್ ತನ್ನ ಗೆಳತಿಯೊಂದಿಗೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಯುವಕ ಮತ್ತು ಯುವತಿ ಒಟ್ಟಿಗೆ ವಾಸವಾಗಿದ್ದು, ಕೆಲ ದಿನಗಳ ಹಿಂದೆ ಯುವಕ ಚಿನ್ಮಯ್ ಮೊಬೈಲ್‌ಗೆ ಆತನದ್ದೇ ಖಾಸಗಿ ಫೋಟೋಗಳು ಬಂದಿತ್ತು. ಸೈಬರ್ ವಂಚಕರು, ಇನ್ನೂ ಹಲವು ಖಾಸಗಿ ಫೋಟೋಗಳಿವೆ....
ಬೆಂಗಳೂರುರಾಜ್ಯಸುದ್ದಿ

SSLC ತೃತೀಯ ಭಾಷೆಗೆ ಈ ವರ್ಷ ಗ್ರೇಡ್ ಬೇಡ, ಅಂಕವನ್ನೇ ನೀಡಿ: ಹೈಕೋರ್ಟ್ ಆದೇಶ -ಕಹಳೆ ನ್ಯೂಸ್

ಬೆಂಗಳೂರು: ಹಿಂದಿ ಸೇರಿದಂತೆ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಗೆ ಈ ವರ್ಷ ಗ್ರೇಡ್ ಬೇಡ, ಅಂಕವನ್ನೇ ನೀಡಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ ನೀಡುವ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ವರ್ಷ ಹಳೆ ಪದ್ಧತಿಯನ್ನೇ ಮುಂದುವರಿಸುವಂತೆ ಸೂಚನೆ ನೀಡಿದೆ. ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಸಂಬಂಧ 2025ರ ಅಕ್ಟೋಬರ್ 28ರಂದು ಸುತ್ತೋಲೆ ಹೊರಡಿಸಲಾಗಿದೆ. ಬಳಿಕ...
ಜಿಲ್ಲೆದಕ್ಷಿಣ ಕನ್ನಡಬೆಂಗಳೂರುಸುದ್ದಿ

ಬೆಂಗಳೂರಿನಲ್ಲಿ ಜೀವಂತ ಗ್ರೆನೇಡ್ ಪತ್ತೆ ಕೇಸ್‌ : ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟ -ಕಹಳೆ ನ್ಯೂಸ್

ಬೆಂಗಳೂರು: ನಗರದಲ್ಲಿ ಜೀವಂತ ಗ್ರೆನೇಡ್‌ ಪತ್ತೆ ಪ್ರಕರಣದ ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟವಾಗಲಿದೆ. ನಗರದಲ್ಲಿ 2008ರ ಮಾದರಿಯಲ್ಲಿ ಸ್ಫೋಟ ನಡೆಸಲು ಆರೋಪಿಗಳು ಸಂಚು ರೂಪಿಸಿದ್ದರು. ಆರ್‌ಟಿ ನಗರದ ಮನೆಯಲ್ಲಿ ಜೀವಂತ ಗ್ರೆನೇಡ್, ಪಿಸ್ತೂಲ್, ಗುಂಡುಗಳು ವಶಕ್ಕೆ ಪಡೆಯಲಾಗಿತ್ತು. 2023 ರಲ್ಲಿ ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದರು. ಖಚಿತ ಮಾಹಿತಿ‌ ಮೇರೆಗೆ ಸಿಸಿಬಿ ದಾಳಿ ನಡೆಸಿತ್ತು. ಸ್ಫೋಟಕ ವಸ್ತುಗಳು, ವಾಕಿ ಟಾಕಿ, ಮ್ಯಾಪನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಪ್ರಕರಣ ಎನ್ಐಎ ಕೈಗೆತ್ತಿಕೊಂಡು ವಿಚಾರಣೆ...
ಬೆಂಗಳೂರುರಾಜ್ಯಸುದ್ದಿ

ನಲಪಾಡ್ ಮನೆ ಮೇಲೆ ಇಡಿ ದಾಳಿಗೆ ಆ 10 ಲಕ್ಷ ಕಾರಣಾನಾ?-ಕಹಳೆ ನ್ಯೂಸ್

ಬೆಂಗಳೂರು: ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್‌  ಮನೆ ಸೇರಿದಂತೆ 17 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಇಂದು (ಏ.20) ದಾಳಿ ನಡೆಸಿದ್ದಾರೆ. ಇದೀಗ ಇಡಿ ದಾಳಿಯ ಹಿಂದೆ 10 ಲಕ್ಷ ರೂ. ವಹಿವಾಟೊಂದರ ಶಂಕೆ ವ್ಯಕ್ತವಾಗಿದೆ. ಬಿಟ್‌ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಹ್ಯಾಕರ್ ಶ್ರೀಕಿ ಜೊತೆಯಲ್ಲಿ ಆರ್ಥಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಇಡಿ ದಾಳಿ ಮಾಡಿದೆ. ಶ್ರೀಕಿ ಜೊತೆ ನಲಪಾಡ್ ಆರ್ಥಿಕ ವ್ಯವಹಾರ ಇಟ್ಟುಕೊಂಡಿದ್ದರು. 2020 ರಲ್ಲಿ...
ಬೆಂಗಳೂರುರಾಜ್ಯಸುದ್ದಿ

ಲಾರಿ ಚಾಲಕನ ಅಜಾಗರೂಕತೆಯಿಂದ ಸರಣಿ ಅಪಘಾತ : ನಾಲ್ವರು ದುರ್ಮರಣ -ಕಹಳೆ ನ್ಯೂಸ್

ಬಳ್ಳಾರಿ: ಲಾರಿ (Lorry) ಚಾಲಕನ ಅಜಾಗರೂಕತೆಯಿಂದ ಸರಣಿ ಅಪಘಾತ (Serial Accident) ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಐದಾರು ಮಂದಿ ಗಾಯಗೊಂಡಿರುವ ಘಟನೆ ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆ (Hospete) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಬೆಳ್ಳುಳ್ಳಿ ಸಾಗಾಟ ಮಾಡುತ್ತಿದ್ದ ಲಾರಿ ಹೊಸಪೇಟೆ ಹೊರವಲಯದ ಟನಲ್‌ನಿಂದ ಡಣಾಪುರದವರೆಗೆ ಬೈಕ್, ಕಾರು ಹಾಗೂ ಬಸ್‌ಗೆ ಹೊಡೆದುಕೊಂಡು ಹೋಗಿದೆ. ಸದ್ಯಕ್ಕೆ ನಾಲ್ಕು ಜನರು ಸಾವನ್ನಪ್ಪಿರೋದರ ಕುರಿತು ಮಾಹಿತಿ ಲಭಿಸಿದೆ. ಅಪಘಾತದ ರಭಸಕ್ಕೆ...
ಬೆಂಗಳೂರುರಾಜ್ಯಸುದ್ದಿ

ಮುಂಜಾನೆ ಮನೆಯಿಂದ ಹೋಗಿದ್ದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆ : ಕೊಲೆ ಶಂಕೆ -ಕಹಳೆ ನ್ಯೂಸ್

ಬೆಂಗಳೂರು: ಭಾನುವಾರ ಮುಂಜಾನೆ ಮನೆಯಿಂದ ಹೋಗಿದ್ದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರಿನ ಮಣಿಪಾಲ್ ಕೌಂಟಿ ರಸ್ತೆಯಲ್ಲಿ ನಡೆದಿದೆ. ಬಸಾಪುರ ನಿವಾಸಿ ನಾರಾಯಣಪ್ಪ (56) ಮೃತ ದುರ್ದೈವಿ. ನಾರಾಯಣಪ್ಪ ಮುಂಜಾನೆ 5 ಗಂಟೆಗೆ ಮನೆಯಿಂದ ತೆರಳಿದ್ದರು. ಬಳಿಕ ಸ್ವಿಫ್ಟ್ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಾರಿನಲ್ಲಿದ್ದ ಶವವನ್ನು ನೋಡಿ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಇದನ್ನೂ ಓದಿ:‌ ಯೋಗೇಶ್ ಗೌಡ ಹತ್ಯೆ ಕೇಸ್; ಪರಸ್ಪರ 57 ಬಾರಿ ಮೊಬೈಲ್ ಕರೆ...
ಬೆಂಗಳೂರುರಾಜ್ಯಸುದ್ದಿ

ಪರಪ್ಪನ ಅಗ್ರಹಾರದ ಕ್ವಾರಂಟೈನ್ ಸೆಲ್‌ನಲ್ಲಿ ವಿನಯ್ ಕುಲಕರ್ಣಿ, ಗ್ಯಾಂಗ್ : ದರ್ಶನ್ ಸೆಲ್‌ನ ಕೂಗಳತೆ ದೂರದಲ್ಲೇ ಇರೋ ಕೈದಿಗಳು -ಕಹಳೆ ನ್ಯೂಸ್

ಬೆಂಗಳೂರು: ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶಾಸಕ ವಿನಯ್‌ ಕುಲಕರ್ಣಿ ಮತ್ತು ಗ್ಯಾಂಗ್‌ ಪರಪ್ಪನ ಅಗ್ರಹಾರದ ಕ್ವಾರಂಟೈನ್‌ ಸೆಲ್‌ ಸೇರಿದ್ದಾರೆ. ನಟ ದರ್ಶನ್‌ ಸೆಲ್‌ನ ಕೂಗಳತೆ ದೂರದಲ್ಲೇ ಈ ಕೈದಿಗಳು ಇದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಹದಿನೇಳು ಜನರನ್ನು ಅಪರಾಧಿಗಳು ಅಂತಾ ತೀರ್ಪು ಪ್ರಕಟಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ನಿನ್ನೆ ಪರಪ್ಪನ ಅಗ್ರಹಾರ ಜೈಲು...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಡೆಲ್ಲಿ ವಿರುದ್ಧ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ RCB : ಚಿನ್ನಸ್ವಾಮಿಯಲ್ಲಿಂದು ಆರ್‌ಸಿಬಿಯ 100ನೇ ಪಂದ್ಯ -ಕಹಳೆ ನ್ಯೂಸ್

ಬೆಂಗಳೂರು: ಪ್ರತಿ ಐಪಿಎಲ್ ಸೀಸನ್‌ನ ಒಂದು ಪಂದ್ಯದಲ್ಲಿ ಆರ್‌ಸಿಬಿ ಹಸಿರು ಜೆರ್ಸಿಯಲ್ಲಿ ಆಡುವ ರೂಢಿಯಿದೆ. ಅಂದರಂತೆ ಇಂದು (ಏ.18) ಡೆಲ್ಲಿ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಪ್ರತಿ ಆವೃತ್ತಿಯಲ್ಲಿಯೂ ಗ್ರೀನ್ ಜೆರ್ಸಿ ಧರಿಸುವ ಮೂಲಕ ಆರ್‌ಸಿಬಿ ತಂಡ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಇದರ ಇನ್ನೊಂದು ವಿಶೇಷತೆಯೆಂದರೆ ಆಟಗಾರರು ಧರಿಸಿರುವ ಎಲ್ಲಾ ಜೆರ್ಸಿಗಳು ಮರುಬಳಕೆಯಾಗಬಲ್ಲ ವಸ್ತುಗಳಿಂದ ತಯಾರಿಸಲಾಗಿರುತ್ತದೆ. ಪರಿಸರದ ಬಗ್ಗೆ ಕಾಳಜಿ ಮೂಡಿಸಬೇಕೆನ್ನುವ ದೃಷ್ಟಿಯಿಂದ...
1 10 11 12 13 14 229
Page 12 of 229