ಬೆಂಗಳೂರು ಗ್ಯಾಂಗ್ರೇಪ್ ಪ್ರಕರಣದ ಮೂವರು ಆರೋಪಿಗಳು ಚೆನ್ನೈಗೆ ಪರಾರಿ-ಕಹಳೆ ನ್ಯೂಸ್
ಬೆಂಗಳೂರು(ಮೇ 31): ಬಾಂಗ್ಲಾದೇಶ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಘಟನೆಯೊಂದು ನಡೆದಿದೆ. ಗ್ಯಾಂಗ್ರೇಪ್ ಪ್ರಕರಣದ ಮೂವರು ಪ್ರಮುಖ ಆರೋಪಿಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಗಂಡ-ಹೆಂಡತಿ ಸೇರಿ ಓರ್ವ ಯುವಕ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಪತ್ತೆಯಾಗಿರುವ ಗಂಡ-ಹೆಂಡತಿ ಘಟನೆ ನಡೆದ ದಿನ ಸ್ಥಳದಲ್ಲೇ ಇದ್ದು ಪ್ರಚೋದನೆ ಕೊಟ್ಟಿದ್ದರು ಎಂದು ತಿಳಿದು ಬಂದಿದೆ. ಪರಾರಿಯಾಗಿರುವ ಯುವಕ ಸಹ ಯುವತಿ ಮೇಲೆ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಘಟನೆ ನಡೆದ...







