ಶಿವರಾತ್ರಿ ಪ್ರಯುಕ್ತ ಖಲೀಲ್ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ಪ್ರಸಾದ ತಿಂದು 120ಕ್ಕೂ ಹೆಚ್ಚು ಮಂದಿ ಅಸ್ವಸ್ಥ-ಕಹಳೆ ನ್ಯೂಸ್
ಡುಂಗರಪುರ : ಖಲೀಲ್ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಹಿನ್ನೆಲೆ ದೇವಸ್ಥಾನಕ್ಕೆ ತೆರಳಿ ಪ್ರಸಾದ ಸೇವಿಸಿದ ಬಳಿಕ 120ಕ್ಕೂ ಅಧಿಕ ಮಂದಿ ಅಸ್ವಸ್ಥಗೊಳಗಾದ ಘಟನೆ ನಡೆದಿದೆ. ಪ್ರಸಾದ ಸೇವಿಸಿದ ಬಳಿಕ ಭಕ್ತಾದಿಗಳಿಗೆ ಹೊಟ್ಟೆನೋವು, ಭೇದಿ ಮತ್ತು ವಾಂತಿ ಶುರುವಾಗಿದ್ದು, ತಕ್ಷಣವೇ ಗ್ರಾಮಸ್ಥರು ಜಿಲ್ಲಾ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಕೇಂದ್ರ, ಪೂನ್ಪುರ ಹಾಗೂ ಬಂಕೋಡ ಆರೋಗ್ಯ ಕೇಂದ್ರಗಳ ವೈದ್ಯಕೀಯ ತಂಡಗಳು ಜನರಿಗೆ ಚಿಕಿತ್ಸೆ ನೀಡಿದೆ. ಕೆಲವು ಭಕ್ತಾಧಿಗಳಿಗೆ...







