ಆಸ್ತಿ ಕಾರ್ಡ್ ವಿತರಿಸುವ ಸ್ವಾಮಿತ್ವ ಯೋಜನೆಗೆ ಪ್ರಧಾನಿ ಮೋದಿ ಚಾಲನೆ- ಕಹಳೆ ನ್ಯೂಸ್
ನವದೆಹಲಿ : ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನ (SVAMITVA) ಯೋಜನೆಯಡಿ ಪ್ರಾಪರ್ಟಿ ಕಾರ್ಡ್ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಗ್ರಾಮೀಣ ಪರಿವರ್ತನೆಗೆ ಇದೊಂದು ಐತಿಹಾಸಿಕ ಪ್ರಯತ್ನ ಎಂದು ಪಿಎಂ ನರೇಂದ್ರ ಮೋದಿ ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನ ಯೋಜನೆಯಡಿ ಪ್ರಾಪರ್ಟಿ ಕಾರ್ಡ್ ಬಿಡುಗಡೆ ಬಳಿಕ, ಪಿಎಂ ಮೋದಿ ಅವರು ಯೋಜನೆಯ ಕೆಲವು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ಸುಧಾರಿತ ತಂತ್ರಜ್ಞಾನ ಯೋಜನೆಯಡಿಯ...







