ಎ.ಸಿ ಆನ್ ಮಾಡಿ ಕಾರಿನಲ್ಲೇ ನಿದ್ದೆಗೆ ಜಾರಿದ..ಮರುದಿನ ಶವವಾದ..!-ಕಹಳೆ ನ್ಯೂಸ್
ನೊಯ್ಡಾ (ಉತ್ತರ ಪ್ರದೇಶ): ಕಾರಿನಲ್ಲಿ ಎ.ಸಿ ಆನ್ ಮಾಡಿಕೊಂಡು, ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಮಲಗುವ ಅಭ್ಯಾಸ ಇದೆಯೆ? ಹಾಗಿದ್ದರೆ ಈ ಸುದ್ದಿಯನ್ನೊಮ್ಮೆ ನೋಡಿ, ಅದು ಎಷ್ಟು ಅಪಾಯಕಾರಿ ಎನ್ನುವುದು ತಿಳಿಯುತ್ತದೆ. ಇಂಥ ಒಂದು ಅಪಾಯಕಾರಿ ಘಟನೆ ನಡೆದಿರುವುದು ಉತ್ತರ ಪ್ರದೇಶದ ನೊಯ್ಡಾದಲ್ಲಿ. ಮದ್ಯಪಾನ ಮಾಡಿ, ಕಾರಿನಲ್ಲಿ ಎ.ಸಿ ಹಾಕಿ ಮಲಗಿದ್ದ ವ್ಯಕ್ತಿ ಮರುದಿನ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಸುಂದರ್ ಪಂಡಿತ್ ಎಂದು ಗುರುತಿಸಲಾಗಿದೆ. ಇವರು ಮೊನ್ನೆ ರಾತ್ರಿ ಮದ್ಯಪಾನ ಮಾಡಿ...







