Friday, March 13, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಮಾಣಿ: ಬುಡೋಳಿ ರಸ್ತೆಗೆ ಉರುಳಿದ ಲಾರಿ; ಚಾಲಕ ಪಾರು – ಕಹಳೆ ನ್ಯೂಸ್

ವಿಟ್ಲ : ಟಯರ್ ಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿಬಿದ್ದ ಘಟನೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಅಪಘಾತದಲ್ಲಿ ಲಾರಿ ಚಾಲಕ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಟಯರ್ ಗಳನ್ನು ಹೇರಿಕೊಂಡು ಬರುತ್ತಿದ್ದ ಈ ಲಾರಿ ಮುಂಜಾನೆ 4:30 ಸುಮಾರಿಗೆ ಬುಡೋಳಿ ಸಮೀಪ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿದ ಬಿದ್ದಿದೆ...
ಹೆಚ್ಚಿನ ಸುದ್ದಿ

ಡಿಸೆಂಬರ್​ನಲ್ಲಿ 8 ದಿನ ಕರ್ನಾಟಕದಲ್ಲಿ ಬ್ಯಾಂಕ್​ ರಜೆ -ಕಹಳೆ ನ್ಯೂಸ್

ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ, ವರ್ಷದ ಕೊನೆಯ ತಿಂಗಳು ಆರಂಭವಾಗಿದೆ. ಕೊರೊನಾ ವೈರಸ್ ಈ ವರ್ಷವನ್ನೇ ನುಂಗಿ ಹಾಕಿದೆ. ವೈರಸ್ ಹಾವಳಿಯ ನಡುವೆಯೂ, ಕ್ರಿಸ್ಮಸ್ ಹೊರತಾಗಿ, ಈ ವರ್ಷದ ಹಬ್ಬಗಳು ಬಹುತೇಕ ಮುಕ್ತಾಯಗೊಂಡಿದೆ. ಕಳೆದ ನವೆಂಬರ್ ತಿಂಗಳಲ್ಲಿ ಒಂಬತ್ತು ಬ್ಯಾಂಕ್ ರಜಾದಿನಗಳಿದ್ದರೆ, ಡಿಸೆಂಬರ್ ನಲ್ಲಿ ಎಂಟು ರಜಾದಿನಗಳಿವೆ. ಹಾಗಾಗಿ, ಈ ತಿಂಗಳಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸುವುದು 23ದಿನ ಮಾತ್ರ. ಕರ್ನಾಟಕಕ್ಕೆ ಅನ್ವಯವಾಗುವಂತೆ, ಡಿಸೆಂಬರ್ - 2020 ರಜಾದಿನಗಳ ಪಟ್ಟಿ ಇಂತಿದೆ: 1. ಡಿಸೆಂಬರ್...
ಹೆಚ್ಚಿನ ಸುದ್ದಿ

ಕಾನ್ಸ್‍ಟೇಬಲ್‍ಗಳ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳು : ಪ್ರಮುಖ ಆರೋಪಿಗಾಗಿ ವ್ಯಾಪಕ ಶೋಧ – ಕಹಳೆ ನ್ಯೂಸ್

ಬೆಂಗಳೂರು - ಪೊಲೀಸ್ ಕಾನ್ಸ್‍ಟೆಬಲ್‍ಗಳ ಹುದ್ದೆಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ಅಸಲಿ ಅಭ್ಯರ್ಥಿಗಳ ಬದಲಿಗೆ ನಕಲಿ ಅಭ್ಯರ್ಥಿಗಳನ್ನು ರೂಪಿಸಿ ಬರೆಸುತ್ತಿದ್ದ ಪ್ರಮುಖ ಆರೋಪಿ ಯಾರು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ತಲೆಮರೆಸಿಕೊಂಡಿರುವ ಈ ಪ್ರಕರಣದ ಕಿಂಗ್‍ಪಿನ್‍ಗಾಗಿ ಬೆಂಗಳೂರು ಹಾಗೂ ಬೆಳಗಾವಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಕಿಂಗ್‍ಪಿನ್ ಈ ಹಿಂದೆ ಕಬ್ಬಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಬಿಟ್ಟ ನಂತರ ಹಲವಾರು ದಂಧೆ ಮಾಡಿಕೊಂಡು ವಿಲಾಸಿ ಜೀವನ ನಡೆಸುತ್ತಿದ್ದನೆಂಬುದು ಪೊಲೀಸರ...
ಹೆಚ್ಚಿನ ಸುದ್ದಿ

ಗ್ರಾಮ ಪಂಚಾಯತ್ ಚುನಾವಣೆಗೆ ದಿನಾಂಕ ಘೋಷಣೆ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ಚುನಾವಣಾ ಆಯೋಗವು ಸೋಮವಾರ ಗ್ರಾಮ ಪಂಚಾಯಿತಿ ಚುನಾವಣಾ ದಿನಾಂಕವನ್ನು ಪ್ರಕಟಿಸಿದೆ. ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದಿನಿಂದಲೇ ನೀತಿಸಂಹಿತೆ ಜಾರಿಯಲ್ಲಿರಲಿದೆ. ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆ ಡಿಸೆಂಬರ್​ 22 ಹಾಗೂ ಎರಡನೇ ಹಂತದ ಚುನಾವಣೆ ಡಿ.27ಕ್ಕೆ ನಿಗದಿಯಾಗಿದೆ. ಇಂದಿನಿಂದ ಡಿ.31ರವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ರಾಜ್ಯ ಚುನಾವಣಾ ಆಯೋಗ ಇಂದು ಬೆಳಗ್ಗೆ 11.30ಕ್ಕೆ ಗ್ರಾಮ ಪಂಚಾಯಿತಿ ಚುನಾವಣಾ ದಿನಾಂಕ ಪ್ರಕಟಿಸಿದೆ. ಈ ಕ್ಷಣದಿಂದಲೇ ಚುನಾವಣಾ ನೀತಿ...
ಹೆಚ್ಚಿನ ಸುದ್ದಿ

ಉಪ್ಪಿನಂಗಡಿ : ಪಿಕಪ್ ಢಿಕ್ಕಿ ; ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತ್ಯು – ಕಹಳೆ ನ್ಯೂಸ್

ಬೈಕಿಗೆ ಪಿಕಪ್ ಢಿಕ್ಕಿಯಾಗಿ ಪರಾರಿಯಾಗಿದ್ದು, ಬೈಕ್ ಸವಾರರಿಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ರವಿವಾರ ರಾತ್ರಿ ಬೆಳ್ತಂಗಡಿ ತಾಲೂಕಿನ ಕಲ್ಲೇರಿಯ ಹುಣ್ಸೆಕಟ್ಟೆ ಎಂಬಲ್ಲಿ ನಡೆದಿದೆ. ಉರುವಾಲು ನಿವಾಸಿ ಕೃಷ್ಣಪ್ರಸಾದ್ ಶೆಟ್ಟಿ (36) ಹಾಗೂ ಕಣಿಯೂರಿನ ಜಯರಾಮ ಗೌಡ (28) ಮೃತರು ಎಂದು ಗುರುತಿಸಲಾಗಿದೆ. ಇಂದು ರಾತ್ರಿ ಉಪ್ಪಿನಂಗಡಿ ಕಡೆಯಿಂದ ಕಲ್ಲೇರಿ ಕಡೆ ಇವರು ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರು ಕಡೆಯಿಂದ ಅತೀ ವೇಗದಿಂದ ಬಂದ ಪಿಕಪ್ ಬೈಕ್ ಗೆ ಢಿಕ್ಕಿಯಾಗಿದೆ....
ಹೆಚ್ಚಿನ ಸುದ್ದಿ

ದೇಶಾದ್ಯಂತ ವಾಹನಗಳಿಗೆ ಏಕರೂಪದ `ಪಿಯುಸಿ’ ಸರ್ಟಿಫಿಕೇಟ್ : ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ – ಕಹಳೆ ನ್ಯೂಸ್

ಹೊಸದಿಲ್ಲಿ: ದೇಶದ ಎಲ್ಲ ವ್ಯವಸ್ಥೆಗಳನ್ನು ತಂತ್ರಜ್ಞಾನದ ವ್ಯಾಪ್ತಿಗೆ ತರುತ್ತಿರುವ ಕೇಂದ್ರ ಸರಕಾರವು ಇನ್ನೊಂದು ಪ್ರಮುಖ ಹೆಜ್ಜೆ ಇರಿಸಿದೆ. ವಾಹನಗಳ ಹೊಗೆಯುಗುಳುವಿಕೆ ಮಟ್ಟದ ಪರೀಕ್ಷಾ ಪ್ರಮಾಣಪತ್ರ (ಪೊಲ್ಯೂಷನ್‌ ಅಂಡರ್‌ ಕಂಟ್ರೋಲ್‌-ಪಿಯುಸಿ)ವನ್ನು ದೇಶಾದ್ಯಂತ ಏಕರೂಪಗೊಳಿಸಲು ಚಿಂತನೆ ನಡೆಸಿದೆ. ಹಾಗೆಯೇ ಅದರಲ್ಲಿ ಕ್ಯುಆರ್‌ ಕೋಡ್‌ ಅಳವಡಿಸಲಾಗುತ್ತದೆ. ಅದನ್ನು ಸ್ಕ್ಯಾನ್‌ ಮಾಡಿದರೆ ವಾಹನದ ಮಾಲಕನ ವಿವರ, ಹೊಗೆ ಯುಗುಳುವಿಕೆ ಸ್ಥಿತಿಗತಿ ಮತ್ತಿತರ ಮಾಹಿತಿಗಳು ಸಿಗುತ್ತವೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಪ್ರಕಟನೆ ಹೊರಡಿಸಿ,...
ಹೆಚ್ಚಿನ ಸುದ್ದಿ

ಅಂಚೆ ಉಳಿತಾಯ ಖಾತೆಯಲ್ಲಿ 500 ರೂ. ಇರುವುದು ಕಡ್ಡಾಯ – ಕಹಳೆ ನ್ಯೂಸ್

ನವದೆಹಲಿ : ಹಲವು ಬ್ಯಾಂಕುಗಳ ಮಾದರಿಯಲ್ಲಿ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿಯೂ ಇನ್ನು ಮುಂದೆ ಕನಿಷ್ಠ ಬ್ಯಾಲೆನ್ಸ್‌ ಇರಲೇಬೇಕು. ಭಾರತೀಯ ಅಂಚೆ ಇಲಾಖೆ ಈ ಕುರಿತು ಮಾಹಿತಿ ನೀಡಿದೆ. ಇನ್ನು ಮುಂದೆ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿಯೂ 500 ರೂ. ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು ಎಂದು ಅಂಚೆ ಇಲಾಖೆ ಟ್ವೀಟ್‌ನಲ್ಲಿ ತಿಳಿಸಿದೆ. ಕನಿಷ್ಠ ಮೊತ್ತವನ್ನು 500 ರೂ. ನಿಗದಿ ಮಾಡಲಾಗಿದೆ. ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರುವ ಎಲ್ಲಾ ಜನರು ಡಿಸೆಂಬರ್...
ಹೆಚ್ಚಿನ ಸುದ್ದಿ

ಬ್ರಿಟೀಷರ ಕಾಲದಲ್ಲಿ ಕಳ್ಳತನವಾಗಿದ್ದ ದೇವಿಯ ಪ್ರತಿಮೆ ಭಾರತಕ್ಕೆ ವಾಪಸ್ – ಕಹಳೆ ನ್ಯೂಸ್

ಹೊಸದಿಲ್ಲಿ: ಪ್ರಧಾನಿ ಮೋದಿ ರವಿವಾರ ನಡೆಸಿಕೊಟ್ಟ ಮನ್‌ ಕೀ ಬಾತ್‌ ನಲ್ಲಿ ಕೆನಡಾದಲ್ಲಿರುವ ಅನ್ನಪೂರ್ಣಾ ದೇವಿಯ ವಿಗ್ರಹ ಸದ್ಯದಲ್ಲೇ ವಾರಾಣಸಿಗೆ ಮರಳುವ ಸಿಹಿ ಸುದ್ದಿ ನೀಡಿದ್ದಾರೆ. ಶತಮಾನದಷ್ಟು ಹಿಂದೆ ಕಳವಾಗಿದ್ದ ಈ ವಿಗ್ರಹ ವಾಪಸ್‌ ಬರುತ್ತಿರುವುದು ಇಡೀ ದೇಶಕ್ಕೇ ಖುಷಿಯ ವಿಚಾರ ಎಂದಿದ್ದಾರೆ ಮೋದಿ. ಅಷ್ಟೇ ಅಲ್ಲ, ಕಳೆದ ಆರು ವರ್ಷಗಳಲ್ಲಿ ಇಂತಹ ಸುಮಾರು 40 ವಿಗ್ರಹಗಳನ್ನು ವಿದೇಶಗಳಿಂದ ತರಿಸಲಾಗಿದೆ. ಅಮೆರಿಕವೊಂದೇ ಭಾರತದ 200 ಪ್ರಾಚೀನ ವಸ್ತುಗಳನ್ನು ಮರಳಿಸಿದೆ. ಕಳವಾಗಿರುವ ವಿಗ್ರಹಗಳನ್ನು...
1 139 140 141 142 143 174
Page 141 of 174