ನಾಳೆ ಕರ್ನಾಟಕ ಬಂದ್ : ಭಾರತ ಬಂದ್‌ಗೆ ಪೂರಕವಾಗಿ ನಿರ್ಧಾರ – ಕಹಳೆ ನ್ಯೂಸ್
ಬೆಂಗಳೂರು : ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಂಗಳವಾರ ನಡೆಯಲಿರುವ ಭಾರತ ಬಂದ್‌ಗೆ ಕರ್ನಾಟಕದಲ್ಲೂ ಬೆಂಬಲ ವ್ಯಕ್ತವಾಗಿದೆ. ರಾಜ್ಯದಲ್ಲಿಯೂ ರೈತ ಸಂಘಟನೆಗಳು ಬಂದ್ ನಡೆಸಲಿವೆ. ದೇಶದ ಒಟ್ಟು 40 ರೈತ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದು, ಕಾಂಗ್ರೆಸ್, ಟಿಎಂಸಿ, ಟಿಆರ್‌ಎಸ್, ಆಪ್ ಸಹಿತ 8 ವಿಪಕ್ಷಗಳು ಬೆಂಬಲ ನೀಡಿವೆ. ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ್, ರಾಜ್ಯ ರೈತ...







