ತಿರುಪತಿ ತಿಮ್ಮಪ್ಪನ ಸನ್ನಿಧಾನದ ಬೆಟ್ಟವನ್ನೇರುವ ಸಂದರ್ಭದಲ್ಲಿ ಭಕ್ತರನ್ನು ಬೆದರಿಸಿ ದರೋಡೆಗೆ ಯತ್ನಿಸಿದ ದರೋಡೆಕೋರರು-ಕಹಳೆ ನ್ಯೂಸ್
ತಿರುಪತಿ : ಶ್ರೀಮಂತ ದೇಗುಲವೆಂಬ ಖ್ಯಾತಿಗೆ ಪಾತ್ರವಾಗಿರುವ ತಿರುಪತಿ ತಿರುಮಲ ದೇವಸ್ಥಾನದಲ್ಲೀಗ ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ತಿರುಪತಿ ತಿಮ್ಮಪ್ಪನ ಸನ್ನಿಧಾನದ ಬೆಟ್ಟವನ್ನೇರುವ ಸಂದರ್ಭದಲ್ಲಿ ಭಕ್ತರನ್ನು ಬೆದರಿಸಿ ದರೋಡೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಭಕ್ತರು ಬೆಚ್ಚಿಬಿದ್ದಿದ್ದಾರೆ. ಕರ್ನೂಲ್ ಮೂಲದ ಸುನಿಲ್ ಮತ್ತು ಅವರ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ತಡರಾತ್ರಿ ಅಲಿಪಿರಿಯಿಂದ ತಿರುಮಲ ಬೆಟ್ಟವನ್ನೇರುತ್ತಿದ್ದರು. ಈ ವೇಳೆಯಲ್ಲಿ ಕಳ್ಳರ ಗುಂಪೊಂದು ಕುಟುಂಬವನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ್ದು, ಇನ್ನೂ ದೇವಸ್ಥಾನವನ್ನು ತಲುಪಲು...







