ಕುಡಿದು ವಾಹನ ಚಲಾಯಿಸಿ ಕಾರುಗಳಿಗೆ ಸರಣಿ ಅಪಘಾತ; ನಟ ಮಯೂರ್ ಪಟೇಲ್ ವಿರುದ್ಧ FIR -ಕಹಳೆ ನ್ಯೂಸ್
ಕುಡಿದು ವಾಹನ ಚಲಾಯಿಸಿ ಕಾರುಗಳಿಗೆ ಸರಣಿ ಅಪಘಾತ ಮಾಡಿದ ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್ (Mayur Patel) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಓಲ್ಡ್ ಏರ್ಪೋರ್ಟ್ ರಸ್ತೆಯ ಕಮಾಂಡೊ ಆಸ್ಪತ್ರೆ ಸಿಗ್ನಲ್ ಬಳಿ ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸಿಗ್ನಲ್‌ನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಯಲಾಗಿದೆ. ಈ ವೇಳೆ ಒಂದಕ್ಕೊಂದು ಕಾರುಗಳ ನಡುವೆ ಸರಣಿ ಅಪಘಾತವಾಗಿದೆ. ಪಾರ್ಚೂನರ್ ಕಾರಿನಲ್ಲಿ ಮಯೂರ್ ಪಟೇಲ್ ಬರುತ್ತಿದ್ದರು. ತಾನೇ ಕಾರು...







