Wednesday, March 18, 2026

ಸುದ್ದಿ

ಸುದ್ದಿ

ಯಾವುದೇ ಸಾಲವಿಲ್ಲ, ಶತ್ರುಗಳಿಲ್ಲ.. ಐಟಿ ಅಧಿಕಾರಿಗಳ ಒತ್ತಡ ಇತ್ತು: ಸಿಜೆ ರಾಯ್ ಬಗ್ಗೆ ಸಹೋದರ ಮಾತು- ಕಹಳೆ ನ್ಯೂಸ್

ಬೆಂಗಳೂರು: ಸಿ.ಜೆ.ರಾಯ್‌ಗೆ ಯಾವುದೇ ಸಾಲವಿಲ್ಲ, ಶತ್ರುಗಳಿಲ್ಲ. ಆದರೆ, ಐಟಿ ಅಧಿಕಾರಿಗಳ ಒತ್ತಡ ಇತ್ತು ಎಂದು ಸಹೋದರನ ಬಗ್ಗೆ ಸಿ.ಜೆ.ಬಾಬು ಮಾತನಾಡಿದ್ದಾರೆ. ಅವರು, ನಿನ್ನೆ ಬೆಳಗ್ಗೆ 10 ಗಂಟೆಗೆ ರಾಯ್ ಕರೆ ಮಾಡಿದ್ದರು. ಒತ್ತಡ ಜಾಸ್ತಿ ಆಗ್ತಿದೆ ಅಂತ ಹೇಳಿದ್ದರು. ಅವರಿಗೆ ಐಟಿ ಒತ್ತಡ ಇತ್ತು. ಕುಟುಂಬದ ಕಡೆಯಿಂದ ದೂರು ನೀಡುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಬಾಬು ತಿಳಿಸಿದ್ದಾರೆ. ಕಂಪನಿ ಲಾಸ್ ಅಲ್ಲಿ ಇರಲಿಲ್ಲ. ನಮ್ಮ ಕಂಪನಿ ಲಾಭದಲ್ಲಿ ಇತ್ತು....
ಸುದ್ದಿ

ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳ್ಳತನ ಪ್ರಕರಣ: ಬಹುಭಾಷಾ ನಟ ಜಯರಾಮ್​ಗೆ ಎಸ್​ಐಟಿ ಗ್ರಿಲ್..​! – ಕಹಳೆ ನ್ಯೂಸ್

ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದ ಚಿನ್ನಾಭರಣಗಳ ನಾಪತ್ತೆ ಪ್ರಕರಣವು ಈಗ ಸಿನಿರಂಗ ಮತ್ತು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಬೃಹತ್ ಹಗರಣದ ತನಿಖೆಯನ್ನು ಎಸ್‌ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದು, ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಪ್ರೇಕ್ಷಕರಿಗೆ ಪರಿಚಿತರಾಗಿರುವ ಪ್ರಸಿದ್ಧ ನಟ ಜಯರಾಮ್ ಅವರ ಹೆಸರು ಸಹ ಈ ಪ್ರಕರಣದಲ್ಲಿ ಕೇಳಿಬಂದಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಚೆನ್ನೈನಲ್ಲಿರುವ ಜಯರಾಮ್ ಅವರ ನಿವಾಸಕ್ಕೆ ವಿಶೇಷ ತನಿಖಾ...
ಸುದ್ದಿ

ಕ್ಯೂಬಾಗೆ ತೈಲ ಪೂರೈಸುವ ರಾಷ್ಟ್ರಗಳಿಗೆ ಹೆಚ್ಚುವರಿ ಸುಂಕ; ಮೆಕ್ಸಿಕೊ ಮೇಲೆ ಒತ್ತಡ ಹೆಚ್ಚಿಸಿದ ಟ್ರಂಪ್- ಕಹಳೆ ನ್ಯೂಸ್

ವಾಷಿಂಗ್ಟನ್: ಕ್ಯೂಬಾಗೆ ತೈಲ ಮಾರಾಟ ಮಾಡುವ ಅಥವಾ ಸರಬರಾಜು ಮಾಡುವ ಯಾವುದೇ ದೇಶದ ಸರಕುಗಳ ಮೇಲೆ ಸುಂಕ ವಿಧಿಸುವ ಪ್ರಸ್ತಾಪವನ್ನು ಹೊಂದಿರುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ದ್ವೀಪ ರಾಷ್ಟ್ರಕ್ಕೆ ದೀರ್ಘಕಾಲದಿಂದ ಕಚ್ಚಾ ತೈಲದ ಪ್ರಮುಖ ಪೂರೈಕೆದಾರನಾಗಿರುವ ಮೆಕ್ಸಿಕೊದ ಮೇಲಿನ ಹಿಡಿತವನ್ನು ಬಿಗಿಗೊಳಿಸುವ ಪ್ರಯತ್ನ ಇದಾಗಿದೆ. ಮೆಕ್ಸಿಕೊ ಅಧ್ಯಕ್ಷ ಕ್ಲೌಡಿಯಾ ಷೈನ್‌ಬಾಮ್ ಅವರು ಇತ್ತೀಚೆಗೆ ತಮ್ಮ ಸರ್ಕಾರ ಕ್ಯೂಬಾಗೆ ತೈಲ ರವಾನೆಯನ್ನು ತಾತ್ಕಾಲಿಕವಾಗಿ ನಿಲುಗಡೆ...
ಸುದ್ದಿ

ಕರಾವಳಿ ಜಿಲ್ಲೆಗಳ ಬೆಳೆ ವಿಮೆ ಬಾಕಿ ಮೊತ್ತ ಬಿಡುಗಡೆ ಹಾಗೂ ಬೆಳೆ ಸಮೀಕ್ಷೆಯ ಲೋಪದೋಷಗಳ ಬಗ್ಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಆಗ್ರಹ- ಕಹಳೆ ನ್ಯೂಸ್

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ನಾನು ಕೇಳಿದ ಪ್ರಶ್ನೆಗೆ (ಪ್ರಶ್ನೆ ಸಂಖ್ಯೆ: 89 (112)) ಸರ್ಕಾರ ನೀಡಿರುವ ಅಧಿಕೃತ ಮಾಹಿತಿಯಂತೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ರೈತರಿಗೆ ಬೆಳೆ ವಿಮೆಯ ದೊಡ್ಡ ಮೊತ್ತ ಇನ್ನೂ ಪಾವತಿಯಾಗದೆ ಬಾಕಿ ಇರುವುದು ಸಾಬೀತಾಗಿದೆ. ರಾಜ್ಯಾದ್ಯಂತ ಕೃಷಿಕರು ಸಂಕಷ್ಟದಲ್ಲಿದ್ದರೂ ಸಹ, ವಿಮಾ ಕಂಪನಿಗಳು ಮತ್ತು ಸರ್ಕಾರದ ಸಮೀಕ್ಷಾ ವಿಭಾಗವು ರೈತರ ಹಿತರಕ್ಷಣೆಯಲ್ಲಿ ವಿಫಲವಾಗಿವೆ ಎಂದು ಶಾಸಕ ಕಿಶೋರ್ ಕುಮಾರ್ ಪುತ್ತೂರು ಅಸಮಾಧಾನ ವ್ಯಕ್ತಪಡಿಸಿದ್ದಾರೆ....
ದಕ್ಷಿಣ ಕನ್ನಡಬೆಳ್ತಂಗಡಿರಾಜಕೀಯರಾಜ್ಯಸುದ್ದಿ

ಬೆಳ್ತಂಗಡಿ ತಾಲೂಕಿನ ಸರಕಾರಿ ಶಾಲೆಗಳ ದುರಸ್ತಿ ಹಾಗೂ ಶೌಚಾಲಯ ಅಭಿವೃದ್ಧಿಗೆ ರೂ.57.93 ಲಕ್ಷ ಅನುದಾನ ಬಿಡುಗಡೆ : ಶಾಸಕ ಹರೀಶ್ ಪೂಂಜ- ಕಹಳೆ ನ್ಯೂಸ್

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಿವಿಧ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತುರ್ತು ದುರಸ್ತಿ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಅಗತ್ಯ ಅನುದಾನವನ್ನು ಒದಗಿಸುವಂತೆ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಶಾಸಕರ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರವು ಬೆಳ್ತಂಗಡಿ ತಾಲೂಕಿನ 14 ವಿವಿಧ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕಟ್ಟಡ ದುರಸ್ತಿ ಹಾಗೂ ಶೌಚಾಲಯಗಳ ಅಭಿವೃದ್ಧಿಗಾಗಿ ಒಟ್ಟು ರೂ.57.93 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿದೆ. ಈ ಅನುದಾನದಿಂದ ಶಾಲೆಗಳ ಮೂಲಭೂತ...
ಸುದ್ದಿ

ಸಹಾಯ ಹಸ್ತ – ಸೇವಾಧಾಮದಿಂದ ಪುನಶ್ಚೇತನಗೊಂಡ ದಿವ್ಯಾಂಗರ ಮಾರಾಟ ಮಳಿಗೆ ಯೋಜನೆ -ಕಹಳೆ ನ್ಯೂಸ್

ಶಿರಸಿಯಲ್ಲಿ ಜನವರಿ 22 ರಿಂದ 26 ರವರೆಗೆ ಶಿರಸಿ ರೋಟರಿ ಕ್ಲಬ್ ಆಯೋಜಿಸಿದ ಆಹಾರ ಮೇಳ ಹಾಗೂ ಆಲೆಮನೆ ಉತ್ಸವ - 2026 ಕಾರ್ಯಕ್ರಮದಲ್ಲಿ ಉತ್ತರಕನ್ನಡ ಜಿಲ್ಲೆಯ ದಿವ್ಯಾಂಗರ ನೇತೃತ್ವದಲ್ಲಿ ಸೇವಾಧಾಮದಿಂದ ಪುನಶ್ಚೇತನಗೊಂಡ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ತಯಾರಿಸಿದ ವಿವಿಧ ಕರಕುಶಲ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಮಳಿಗೆಯಲ್ಲಿ ದಿವ್ಯಾಂಗರಿಂದ ತಯಾರಿಸಲಾದ ಹತ್ತಿಯಿಂದ ಬತ್ತಿ, ಉಲ್ಲನ್ ಸ್ವೇಟರ್‌ಗಳು, ಬ್ಯಾಗ್‌ಗಳು, ಟೆಡ್ಡಿ, ಕೀ ಚೈನ್, ಕೌದಿ, ಬಾಗಿಲ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಚಿರಾಂತನ ಚಾರಿಟೇಬಲ್ ಟ್ರಸ್ಟ್ ಉಕ್ಕುಡ ಇದರ ನೂತನ ವಾಗಿ ನಿರ್ಮಾಣಗೊಳ್ಳುತ್ತಿರುವ ವೃದ್ಧಾಶ್ರಮ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರುಗೊಂಡ 10 ಲಕ್ಷ ಮೊತ್ತದ ಅನುದಾನದ ಮಂಜೂರಾತಿ ಪತ್ರ ಹಸ್ತಾಂತರ -ಕಹಳೆ ನ್ಯೂಸ್

ವಿಟ್ಲ: ಚಿರಾಂತನ ಚಾರಿಟೇಬಲ್ ಟ್ರಸ್ಟ್ ಉಕ್ಕುಡ ಇದರ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ವೃದ್ರಾಶ್ರಮ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂಪಾಯಿ 10 ಲಕ್ಷ ಮೊತ್ತದ ಅನುದಾನದ ಮಂಜೂರಾಗಿದ್ದು, ಇದರ ಮಂಜೂರಾತಿ ಪತ್ರ ಹಸ್ತಾಂತರ ಜನವರಿ 29 ಗುರುವಾರ ಮಾಡಲಾಯಿತು. ಮಂಜೂರಾತಿ ಪತ್ರವನ್ನು ವಿಟ್ಲ ಜೈನ ಬಸದಿ ಅಧ್ಯಕ್ಷರಾದ ಜೇತೇಶ್ ಜೈನ್ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಚಿರಂತನ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ತೇಜಸ್ವಿ ಶಂಕರ್ ಜೂನಿಯರ್, ವಿಟ್ಲ ವಲಯದ...
ಸುದ್ದಿ

ಬಳಂತಿಮೊಗರು ಶ್ರೀ ಮಲರಾಯ, ಮಹಿಷಂದಾಯ, ಧೂಮಾವತಿ, ರಕೇಶ್ವರಿ, ಪಂಜುರ್ಲಿ, ಕಲ್ಲುರ್ಟಿ-ಕಲ್ಕುಡ, ನೆತ್ತರ್‌ಕಣ್ ಮತ್ತು ಪರಿವಾರ ದೈವಗಳ ದೈವಸ್ಥಾನ ಮತ್ತು ಸುವರ್ಣ ಕುಟುಂಬಸ್ಥರ ತರವಾಡು ಮನೆ ಆಡಳಿತ ಟ್ರಸ್ಟ್ (ರಿ.) ನಲ್ಲಿ ಜ.30 ಮತ್ತು ಜ.31ರಂದು ಶ್ರೀ ದೈವಗಳ ವರ್ಷಾವಧಿ ನೇಮೋತ್ಸವ – ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ಬಳಂತಿಮೊಗರು ಶ್ರೀ ಮಲರಾಯ, ಮಹಿಷಂದಾಯ, ಧೂಮಾವತಿ, ಪಂಜುರ್ಲಿ, ಕಲ್ಲುರ್ಟಿ-ಕಲ್ಕುಡ, ನೆತ್ತರ್‌ಕಣ್ ಮತ್ತು ಪರಿವಾರ ದೈವಸ್ಥಾನದಲ್ಲಿ ಶ್ರೀ ಧೂಮಾವತಿ, ಪಂಜುರ್ಲಿ, ಗುಳಿಗ, ಕಲ್ಕುಡ-ಕಲ್ಲುರ್ಟಿ ಹಾಗೂ ಪರಿವಾರ ದೈವಗಳಿಗೆ ವರ್ಷಾವಧಿ ನೇಮೋತ್ಸವವು ಜ.30 ಮತ್ತು ಜ.31ರಂದು ನಡೆಯಲಿದೆ. ದಿನಾಂಕ 23-01-2026 ಶುಕ್ರವಾರರಂದು ಬೆಳಿಗ್ಗೆ ಗಂಟೆ 7-00ಕ್ಕೆ ಗೊನೆ ಮುಹೂರ್ತ ನಡೆದಿದ್ದು, ಜ.30ರ ಬೆಳಗ್ಗೆ ಗಂಟೆ 6-00ರಿಂದ ಗಣಪತಿ ಹೋಮ, ನಾಗ ತಂಬಿಲ, ಹರಿಸೇವೆ ನಡೆದು ಮಧ್ಯಾಹ್ನ ಗಂಟೆ 1-00ಕ್ಕೆ ಅನ್ನಸಂತರ್ಪಣೆ...
1 58 59 60 61 62 3,296
Page 60 of 3296