ಹೆಚ್ಚಾದ ಯುವಕಾಂಗ್ರೆಸ್ ಚುನಾವಣಾ ಅಕ್ರಮಗಳು : ಫಲಿತಾಂಶ ಇನ್ನು 10 ದಿನ ವಿಳಂಬ – ಕಹಳೆ ನ್ಯೂಸ್
ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇನ್ನು 10 ದಿನಗಳ ಕಾಲ ವಿಳಂಬವಾಗುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹಿಂದೆಂದೂ ನಡೆಯದಷ್ಟು ಚುನಾವಣಾ ಅಕ್ರಮಗಳು ಯುವಕಾಂಗ್ರೆಸ್ ಚುನಾವಣೆಯಲ್ಲಿ ನಡೆದಿದೆ. ರಾಜ್ಯಾಧ್ಯಕ್ಷರ ಆಯ್ಕೆಗೆ ಚಲಾವಣೆಯಾದ ಪ್ರತಿ ವೋಟ್‍ಗೆ ಅಭ್ಯರ್ಥಿಗಳು 4ರಿಂದ5 ಸಾವಿರ ರೂ. ನೀಡಿರುವ ಆರೋಪ ಕೇಳಿ ಬಂದಿದೆ. ಆಕಾಂಕ್ಷಿಗಳು ತಮ್ಮ ಬೆಂಬಲಿಗರಿಗೆ ಹಣ ನೀಡಿ ಮತಹಾಕಿರುವ ಆಕ್ಷೇಪಗಳು ಕೇಳಿ ಬಂದಿತ್ತಾದರೂ ಅಧಿಕೃತವಾಗಿ ಯಾವುದೇ ದೂರುಗಳು ದಾಖಲಾಗಿಲ್ಲ....







