Saturday, March 7, 2026

ರಾಷ್ಟ್ರೀಯ

ಬೆಂಗಳೂರುರಾಜ್ಯಸುದ್ದಿ

ಜನರಿಗೆ ನಿರಾಶೆ ಮಾಡಬಾರದು, ಅದಕ್ಕೆ ಚಿನ್ನಸ್ವಾಮಿಯಲ್ಲಿ IPL ಆಡೋದಕ್ಕೆ ಷರತ್ತುಬದ್ಧ ಅನುಮತಿ : ಪರಮೇಶ್ವರ್ – ಕಹಳೆ ನ್ಯೂಸ್

ಬೆಂಗಳೂರು: ಜನರಿಗೆ ನಿರಾಶೆ ಮಾಡಬಾರದು, ಅದಕ್ಕೆ ಚಿನ್ನಸ್ವಾಮಿಯಲ್ಲಿ ಐಪಿಎಲ್ ಆಡೋದಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದೇವೆ ಎಂದು ಗೃಹ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಆಡೋದಕ್ಕೆ ಅನುಮತಿ ನೀಡಿದ ವಿಚಾರವಾಗಿ ಮಾತನಾಡಿ, ಕುನ್ಹಾ ಸಮಿತಿ ಕೆಲವೊಂದು ಶಿಫಾರಸ್ಸು ಮಾಡಿತ್ತು. ಅದರನ್ವಯ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ, ಜಿಬಿಎ ಕಮಿಷನರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ವಿ. ನಾವು ಕುನ್ಹಾ ಅವರ ಶಿಫಾರಸ್ಸು ಕೆಎಸ್‌ಸಿಎಗೆ ಕಳಿಸಿ, ಇದನ್ನ ಸರಿಮಾಡಿ ಎಂದಿದ್ದೆವು. ಬಳಿಕ ಕೆಎಸ್‌ಸಿಎನವರು...
ಬೆಂಗಳೂರುರಾಜ್ಯ

CL-7 ಲೈಸೆನ್ಸ್‌ಗೆ ಲಂಚಕ್ಕೆ ಬೇಡಿಕೆಯಿಟ್ಟ ಕೇಸ್ – ಅಬಕಾರಿ ಡಿಸಿ, ಎಸ್ಪಿ ಸೇರಿ ಮೂವರಿಗೆ ನ್ಯಾಯಾಂಗ ಬಂಧನ – ಕಹಳೆ ನ್ಯೂಸ್

ಬೆಂಗಳೂರು: CL-7 ಲೈಸೆನ್ಸ್ ಮಾಡಿಸಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಡಿ ಅಬಕಾರಿ ಡಿಸಿ, ಎಸ್ಪಿ ಸೇರಿ ಮೂವರನ್ನು ನ್ಯಾಯಾಂಗ ಬಂಧನ ನೀಡಿ ಕೋರ್ಟ್ ಆದೇಶಿಸಿದೆ. ಬಂಧಿತರನ್ನು ಅಬಕಾರಿ ಡಿಸಿ ಜಗದೀಶ್, ಎಸ್ಪಿ ತಮ್ಮಣ್ಣ ಹಾಗೂ ಕಾನ್ಸ್ಟೇಬಲ್ ಲಕ್ಕಪ್ಪ ಗಣಿಗೆ ಎಂದು ಗುರುತಿಸಲಾಗಿದೆ. ಮೂವರು ಸಿಎಲ್-7 ಲೈಸೆನ್ಸ್ ಮಾಡಿಸಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ತಿಳಿದುಬಂದಿದೆ. ಲೋಕಾಯುಕ್ತ ಪೊಲೀಸರು ಮೂವರನ್ನು ತಡರಾತ್ರಿವರೆಗೂ ವಿಚಾರಣೆ ನಡೆಸಿ, ಹಣ ಪಡೆದ ಕುರಿತು ಕೆಲ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ....
ಜಿಲ್ಲೆರಾಜ್ಯರಾಷ್ಟ್ರೀಯಸುದ್ದಿ

ಭಾರತ – ಪಾಕ್ ಗಡಿಯಲ್ಲಿ 3 AK-47, 2 ಪಿಸ್ತೂಲ್‌, ಮದ್ದುಗುಂಡುಗಳು ಪತ್ತೆ – ಪೊಲೀಸರಿಂದ ತೀವ್ರ ಶೋಧ – ಕಹಳೆ ನ್ಯೂಸ್

ಜೈಪುರ್: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ 3 AK-47, 2 ಪಿಸ್ತೂಲ್‌ ಹಾಗೂ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ಪಂಜಾಬ್‌ನ ಪಠಾಣ್‌ಕೋಟ್ ಪೊಲೀಸರು‌ ವಶಪಡಿಸಿಕೊಂಡಿದ್ದಾರೆ. ನರೋತ್ ಜೈಮಲ್ ಸಿಂಗ್ ಗಡಿ ಪ್ರದೇಶದಲ್ಲಿ ಪಂಜಾಬ್‌ನ ಪಠಾಣ್‌ಕೋಟ್ ಪೊಲೀಸರು ಹಾಗೂ ಕೇಂದ್ರ ಗುಪ್ತಚರ ಅಧಿಕಾರಿಗಳು ಶೋಧ ನಡೆಸಿದ್ದರು. ಈ ವೇಳೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಶಾಂತಿ ಕದಡಲು ಪಾಕಿಸ್ತಾನದಿಂದ ಈ ಶಸ್ತ್ರಾಸ್ತ್ರಗಳನ್ನು ಕಳುಹಿಸಲಾಗಿದೆ ಎಂದು ಶಂಕಿಸಲಾಗಿದೆ. ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ 3 ಎಕೆ...
ರಾಜ್ಯರಾಷ್ಟ್ರೀಯಸುದ್ದಿ

ಅಪ್ರಾಪ್ತ ಬಾಲಕನನ್ನು ಬೆತ್ತಲೆಗೊಳಿಸಿ ಹಲ್ಲೆ : ರಸ್ತೆ ಮಧ್ಯದಲ್ಲೇ ಮೆರವಣಿಗೆ -ಕಹಳೆ ನ್ಯೂಸ್

ಮಧ್ಯಪ್ರದೇಶ: ಉಜ್ಜಯಿನಿಯಲ್ಲಿ 16 ವರ್ಷದ ಬಾಲಕನನ್ನು ವಿವಸ್ತ್ರಗೊಳಿಸಿ, ಕ್ರೂರವಾಗಿ ಹಲ್ಲೆ ನಡೆಸಿ, ಸುಮಾರು 1.5 ಕಿಲೋಮೀಟರ್ ಸಾರ್ವಜನಿಕ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆದ ಬಳಿಕ ಆಕ್ರೋಶ ವ್ಯಕ್ತವಾಗಿದೆ. ಉಜ್ಜಯಿನಿಯ ಮಕ್ಸಿ ರಸ್ತೆಯ ಪನ್ವಾಸ ನಿವಾಸಿ ಅಪ್ರಾಪ್ತ ಬಾಲಕ ಅದೇ ಪ್ರದೇಶದ ಅಪ್ರಾಪ್ತ ಬಾಲಕಿಯೊಂದಿಗೆ ಸಂಬಂಧ ಹೊಂದಿದ್ದನು. ಇವರಿಬ್ಬರು ಮೂರು ತಿಂಗಳ ಹಿಂದೆ ಓಡಿಹೋಗಿದ್ದರು. ಬಳಿಕ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು. ಅನಂತರ...
ಕ್ರೈಮ್ದಕ್ಷಿಣ ಕನ್ನಡಬೆಂಗಳೂರುರಾಜ್ಯಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೆಗ್ಗಡೆಯವರ ಕುಟುಂಬದ ವಿರುದ್ಧ‌ ನಿಂದನೆ ; ವಿಠ್ಠಲ ಗೌಡನಿಗೆ 30 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ – ಕಹಳೆ ನ್ಯೂಸ್

ಬೆಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿಂದನೆ ಆರೋಪದಡಿಯಲ್ಲಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯವು ಮಹತ್ವದ ಅದೇಶ ಮಾಡಿದೆ. ಪ್ರಕರಣದ ಆರೋಪಿ, ಕುಸುಮಾವತಿ ತಮ್ಮ ವಿಠ್ಠಲ ಗೌಡನಿಗೆ 30 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯವು ಆದೇಶ ಮಾಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಪರ ಖ್ಯಾತ ನ್ಯಾಯವಾದಿ ರಾಜಶೇಖರ್ ಹಿಲ್ಯಾರ್ ವಾದ ಮಂಡನೆ ಮಾಡಿದರು. ಬೆಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆಯವರು, ಹೆಗ್ಗಡೆಯವರ ಕುಟುಂಬದ...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಡಿಸಿಎಂ ಡಿಕೆಶಿಯ ದಾವೋಸ್‌ ಪ್ರವಾಸ ರದ್ದು – ಕಹಳೆ ನ್ಯೂಸ್

ಬೆಂಗಳೂರು: ಜನವರಿ 18 ರಂದು ಸ್ವಿಜ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಿಗದಿಯಾಗಿದ್ದ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ಬೆಂಗಳೂರು ಹಾಗೂ ನವದೆಹಲಿಯಲ್ಲಿ ಅಧಿಕೃತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಡಿಸಿಎಂ ಅವರ ಈ ಪ್ರವಾಸ ರದ್ದುಗೊಳಿಸಲಾಗಿದೆ. ಇದನ್ನೂ ಓದಿ: ಸಿಎಂ ತವರು ಕ್ಷೇತ್ರದಲ್ಲೇ ಮಹಿಳಾ ಅಧಿಕಾರಿಗೆ ಧಮ್ಕಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ನಾಯಕರ ಜೊತೆಗಿನ ಸರಣಿ ಸಭೆ ಹಾಗೂ ಮನರೇಗಾ ಮರುಜಾರಿ ಆಗ್ರಹಿಸಿ...
ಬೆಂಗಳೂರುರಾಜ್ಯಸುದ್ದಿ

ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಾಮಾಜಿಕ ಮಾಧ್ಯಮದಲ್ಲಿ 200-500 ರೂ.ಗೆ ಮಾರಾಟ -ಕಹಳೆ ನ್ಯೂಸ್

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಜಾಹೀರಾತು ಮಾಡಿ ಖಾಸಗಿ ಸಂದೇಶಗಳ ಮೂಲಕ 200 ರಿಂದ 500 ರೂ.ಗಳವರೆಗೆ ಮಾರಾಟ ಮಾಡಿರುವುದಾಗಿ ಡೆಕನ್ ಹೆರಾಲ್ಡ್ ಸುದ್ದಿ ಪ್ರಕಟಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಅಪರಾಧ ಪೊಲೀಸರು, ಪ್ರಶ್ನೆ ಪತ್ರಿಕೆಗಳ ಸೋರಿಕೆ ಮತ್ತು ಮಾರಾಟದಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಒಬ್ಬ ಮುಖ್ಯೋಪಾಧ್ಯಾಯ...
ರಾಜ್ಯರಾಷ್ಟ್ರೀಯಸುದ್ದಿ

 ಬಾಂಗ್ಲಾದೇಶದಲ್ಲಿ ಹೊತ್ತಿ ಉರಿದ ಹಿಂದೂ ಶಿಕ್ಷಕನ ಮನೆ – ಕಹಳೆ ನ್ಯೂಸ್

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಸಿಲ್ಹೆಟ್‌ ಜಿಲ್ಲೆಯ ಗೋವೈನ್‌ಘಾಟ್‌ ಉಪಜಿಲ್ಲಾದಲ್ಲಿ ಹಿಂದೂ ಶಿಕ್ಷಕರೊಬ್ಬರ ಮನೆಗೆ ಬೆಂಕಿ ಹಚ್ಚಲಾಗಿದೆ. ಶಾಲಾ ಶಿಕ್ಷಕ ಬೀರೇಂದ್ರ ಕುಮಾರ್ ಡೇ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರ ಕುಟುಂಬ ಮತ್ತು ಹತ್ತಿರದ ನಿವಾಸಿಗಳಲ್ಲಿ ಭಯ ಹುಟ್ಟುಹಾಕಿದೆ. ನಂದಿರ್‌ಗಾಂವ್ ಒಕ್ಕೂಟದ ಬಹೋರ್ ಗ್ರಾಮದಲ್ಲಿ ಇಸ್ಲಾಮಿಸ್ಟ್ ಗುಂಪುಗಳು ಈ ಕೃತ್ಯ ಎಸಗಿವೆ ಎಂದು ಆರೋಪಿಸಲಾಗಿದೆ. ದಾಳಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ಬೆಂಕಿಯು...
1 8 9 10 11 12 318
Page 10 of 318