ಗೋಕರ್ಣ ಸಮುದ್ರಕ್ಕಿಳಿದು ಅಲೆಗೆ ಸಿಲುಕಿದ ಮೂರು ಜನ ಪ್ರವಾಸಿಗರ ರಕ್ಷಣೆ – ಕಹಳೆ ನ್ಯೂಸ್
ಕಾರವಾರ: ಸಮುದ್ರದಲ್ಲಿ ಮುಳುಗುತಿದ್ದ ಮೂರುಜನ ಪ್ರವಾಸಿಗರನ್ನುಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮೇನ್ ಬೀಚ್‌ನಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮನು (23), ಶಿವು (36), ಕಿರಣ್ (26) ರಕ್ಷಣೆಗೆ ಒಳಗಾದ ಪ್ರವಾಸಿಗರು. ಚಿತ್ರದುರ್ಗದಿಂದ ಗೋಕರ್ಣಕ್ಕೆ 21 ಜನ ಪ್ರವಾಸಕ್ಕೆ ಬಂದಿದ್ದರು. ಲೈಫ್ ಗಾರ್ಡ್ ಎಚ್ಚರಿಕೆ ನಡುವೆಯೇ ಸಮುದ್ರಕ್ಕಿಳಿದಿದ್ದ ಆರು ಜನ ಪ್ರವಾಸಿಗರಲ್ಲಿ ಅಲೆಗಳ ಅಬ್ಬರಕ್ಕೆ ಮೂರು ಜನ ಕೊಚ್ಚಿಹೋಗಿದ್ದರು. ಇದನ್ನು...







