ಯಾಸ್ ಚಂಡಮಾರುತ: ‘ಅಪಾಯದ ಸ್ಥಳಗಳಿಂದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿ’ ; ಪ್ರಧಾನಿ ನರೇಂದ್ರ ಮೋದಿ ಸೂಚನೆ – ಕಹಳೆ ನ್ಯೂಸ್
ನವದೆಹಲಿ, ಮೇ.23 : ಯಾಸ್ ಚಂಡಮಾರುತದಿಂದ ಉಂಟಾಗುವ ಪರಿಸ್ಥಿ ನಿರ್ವಹಿಸಲು ಒಡಿಶಾ ಹಾಗೂ ಪಶ್ಚಿಮಬಂಗಾಳ ಕೈಗೊಂಡಿರುವ ಪೂರ್ವ ಸಿದ್ದತೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪರಿಶೀಲಿಸಿದ್ದಾರೆ. ಈ ಸೂಚನೆ ನೀಡಿದ ಪ್ರಧಾನಿ ಮೋದಿ ಅವರು, "ಜನರನ್ನು ಹೆಚ್ಚು ಅಪಾಯವಿರುವ ಸ್ಥಳಗಳಿಂದ ಸುರಕ್ಷಿತವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಯಾಸ್ ಚಂಡಮಾರುತದ ಪರಿಣಾಮ ಸ್ಥಳದಲ್ಲಿ ವಿದ್ಯುತ್ ತೊಂದರೆ ಹಾಗೂ ಸಂವಹನ ಸಂಪರ್ಕದ ಸಮಸ್ಯೆ ಕಂಡುಬಂದಲ್ಲಿ ಅದನ್ನು ತ್ವರಿತವಾಗಿ ನಿವಾರಿಸಲು ಕ್ರಮ ತೆಗೆದುಕೊಳ್ಳಬೇಕು"...





