Thursday, May 14, 2026
ಉಡುಪಿಕ್ರೈಮ್ಸುದ್ದಿ

ಉಡುಪಿ ವಿಡಿಯೋ ಪ್ರಕರಣ : ಸಂತ್ರಸ್ತೆಯಿಂದ ಹೇಳಿಕೆ ಪಡೆದ ಸಿಐಡಿ, ಘಟನೆ ಮರುಸೃಷ್ಟಿಸಿ ತನಿಖೆ – ಕಹಳೆ ನ್ಯೂಸ್

ಉಡುಪಿ : ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದ ವಿಡಿಯೋ ಪ್ರಕರಣದ ಸಂತ್ರಸ್ಥೆ ವಿದ್ಯಾರ್ಥಿನಿಯಿಂದ ಬುಧವಾರ ಸಿಐಡಿ ಪೊಲೀಸರು ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.

ಉಡುಪಿ ಪೊಲೀಸರು ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸೋಮವಾರ ಹಠಾತ್ ಸಿಐಡಿಗೆ ಒಪ್ಪಿಸಿದೆ. ಸಿಐಡಿ ಡಿವೈಎಸ್ಪಿ ಅಂಜುಮಾಲ ನಾಯಕ್ ನೇತೃತ್ವದಲ್ಲಿ ಸಿಐಡಿ ತಂಡ ಮಂಗಳವಾರ ಉಡುಪಿಗೆ ಆಗಮಿಸಿ ತನಿಖೆ ಆರಂಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬುಧವಾರ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಅವರು ಕಾಲೇಜಿಗ ಭೇಟಿ ನೀಡಿ ಘಟನಾ ಸ್ಥಳವನ್ನು ಪರಿಶೀಲಿಸಿದರು. ನಂತರ ಸಂತ್ರಸ್ಥೆಯನ್ನು ಕಾಲೇಜಿಗೆ ಬರ ಮಾಡಿಕೊಂಡು ಆಕೆಯಿಂದ ಹೇಳಿಕೆಯನ್ನೂ ಪಡೆದರು. ಆಳೆತ್ತರದ ಗೊಂಬೆಯನ್ನು ಕಾಲೇಜಿನ ಶೌಚಾಲಯದ ಎದುರು ನಿಲ್ಲಿಸಿ ಘಟನೆಯ ಮರುಸೃಷ್ಟಿ ಮಾಡುವುದರ ಮೂಲಕ ತನಿಖೆಯನ್ನು ನಡೆಸಲಾಯಿತು.

ಸಂತ್ರಸ್ಥೆ ಇನ್ನೂ ತನ್ನ ಮೇಲಾಗಿರುವ ದೌರ್ಜನ್ಯದ ಬಗ್ಗೆ ದೂರು ನೀಡಿಲ್ಲ, ಆದ್ದರಿಂದ ಆಕೆಯ ಹೇಳಿಕೆಯೇ ಈಗ ಸಿಐಡಿಗೆ ಮುಖ್ಯ ಸಾಕ್ಷ್ಯವಾಗಲಿದೆ. ಸಿಐಡಿಯ ಇನ್ನೊಂದು ತಂಡ ಉಡುಪಿ ಪೊಲೀಸರು ಹಸ್ತಾಂತರಿಸಿರುವ ಕಾಲೇಜಿನ ಮತ್ತು ಅಕ್ಕಪಕ್ಕದ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿತು.

ಎಫ್ ಎಸ್ ಎ ವರದಿ ಬಂದಿಲ್ಲ
ಕಾಲೇಜಿನ ಶೌಚಾಲಯದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿಯೊಬ್ಬಳ ಖಾಸಗಿ ವಿಡಿಯೋ ಮಾಡಿದ್ದಾರೆ ಎಂಬ ಈ ಪ್ರಕರಣದಲ್ಲಿ, ಆರೋಪಿಗಳಿಂದ ವಶಪಡಿಸಿಕೊಳ್ಳಲಾದ 3 ಐಫೋನ್ ಗಳನ್ನು ಹೈದರಾಬಾದಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರ ವರದಿ ಇನ್ನೂ ಬಂದಿಲ್ಲ. ಆದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯ ವಿಡಿಯೋ ಸಿಗದೇ ಪ್ರಕರಣದ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ.