Thursday, May 14, 2026
ಸುದ್ದಿ

ಬೈಕ್ ಮತ್ತು ರಿಕ್ಷಾದ ನಡುವೆ ಅಪಘಾತ ; ಇಬ್ಬರಿಗೆ ಗಾಯ – ಕಹಳೆ ನ್ಯೂಸ್

ಪುತ್ತೂರು : ಬೈಕ್ ಮತ್ತು ರಿಕ್ಷಾದ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸಹಸವಾರ ಮತ್ತು ಆಟೋ ರಿಕ್ಷಾ ಚಾಲಕ ಗಾಯಗೊಂಡ ಘಟನೆ ನೆಹರುನಗರ ಸಮೀಪದ ಕಲ್ಲೇಗ ಮಸೀದಿ ಬಳಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಬಂಟ್ವಾಳ ಬುಡೋಲಿ ನಿವಾಸಿ ಶ್ರವಣ್ ಕೆ ಅವರು ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಮತ್ತು ವಿರುದ್ಧ ದಿಕ್ಕಿನಿಂದ ಕಾರೊಂದನ್ನು ಹಿಂದಿಕ್ಕೆ ಬರುತ್ತಿದ್ದ ರಿಕ್ಷಾ ನಡುವೆ ಅಪಘಾತ ಸಂಭವಿಸಿದೆ.ಡಿಕ್ಕಿಯ ರಭಸಕ್ಕೆ ಬೈಕ್ ಸಹಸವಾರ ಅವಿಷ್ ಮತ್ತು ಆಟೋ ರಿಕ್ಷಾ ಚಾಲಕ ದಿನೇಶ್ ಎಂಬವರು ಗಾಯಗೊಂಡಿದ್ದು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.