Thursday, June 11, 2026
ಸುದ್ದಿ

ಕೊಡಗಿನ ಸಂತ್ರಸ್ತರಿಗೆ ಪುತ್ತೂರಿನ ವಿ.ಎಚ್.ಪಿ. ಬಜರಂಗದಳದ ಮೂಲಕ ನೀವೂ ಸ್ಪಂದಿಸ ಬಹುದು. ಹೇಗೆ ಅಂತೀರಾ ? ಈ ವರದಿ ನೋಡಿ ಪ್ರತಿಯೊಬ್ಬರೂ ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡಿ – ಕಹಳೆ ನ್ಯೂಸ್

ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಸುತ್ತ ಮುತ್ತಲಿನ ಪ್ರದೇಶದಲ್ಲಿ ತೀವ್ರಮಳೆ ಹಾಗು ಭೂಕುಸಿತದ ಪರಿಣಾಮ ಸಹಸ್ರಾರು ಕುಟುಂಬಗಳು ನೆಲೆಕಳೆದುಕೊಂಡು ಸಂತ್ರಸ್ತರಾಗಿದ್ದು , ಇದೀಗ ನೂರಾರು ಜನರು ಸುಳ್ಯ ಅರಂತೋಡು ಪರಿಸರದಲ್ಲಿ ಆಶ್ರಯಕ್ಕಾಗಿ ಬಂದಿದ್ದು ನಾವೆಲ್ಲರೂ ಮಾನವೀಯತೆ ನೆಲೆಯಲ್ಲಿ ಸಹಾಯ ಹಸ್ತ ಚಾಚಬೇಕಾಗಿದೆ.

ಜಾಹೀರಾತು

ಅತೀವ ಸಂಕಷ್ಟದಲ್ಲಿರುವ, ಮನೆಮಠ ಬಂಧುಬಳಗವನ್ನೆಲ್ಲ ಕಳೆದುಕೊಂಡು ಆಶ್ರಯದ ನಿರೀಕ್ಷೆಯಲ್ಲಿರುವವರಿಗೆ ನಮ್ಮ ನೆರವನ್ನು ನೀಡೋಣ ಪುತ್ತೂರು ಅಸುಪಾಸಿನವರು ನಮ್ಮ ಮನೆಗಳಿಂದ ಅಕ್ಕಿ,ಬ್ರೇಡ್,ಬೆಡ್ ಶೀಟ್ , ಬೈರಾಸ್ ಲುಂಗಿ ,ಸೀರೆ ನೈಟಿ ,…ಮುಂತಾದ ಅಗತ್ಯ ಸಾಮಗ್ರಿಗಳನ್ನು ದಿನಾಂಕ 18/08/2018 ರಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪುತ್ತೂರು ಕಾರ್ಯಾಲಯಕ್ಕೆ ತಂದೊಪ್ಪಿಸೋಣ.. ಪುತ್ತೂರು ಬಜರಂಗದಳದ ಕಾರ್ಯಕರ್ತರು ಈ ಎಲ್ಲ ಸಾಮಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆ ಮಾಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲಾ ಕಾರ್ಯಾಲಯ
(SCDCC BANK ಬಳಿ ಪುತ್ತೂರು)