Thursday, May 14, 2026
ದಕ್ಷಿಣ ಕನ್ನಡಸುದ್ದಿ

ಎಸ್.ಪಿ. ಹೇಳಿಕೆ ಬೆನ್ನಲ್ಲೇ ರಕ್ಷಣೆಗಾಗಿ ಸರಕಾರ ನೀಡಿದ್ದ ಗನ್ ಮ್ಯಾನ್ ವಾಪಸ್ಸು ಕಳುಹಿಸಿದ ಶಾಸಕ ಹರೀಶ್ ಪೂಂಜಾ – ಕಹಳೆ ನ್ಯೂಸ್

ಮಂಗಳೂರು : ಬೆಳ್ತಂಗಡಿ ಶಾಸಕ‌ ಹರೀಶ್ ಪೂಂಜಾ ಮೇಲೆ ದಾಳಿ ಯತ್ನ ನಡೆದಿತ್ತು, ಪ್ರಕರಣ ದ ಬಗ್ಗೆ ದ.ಕ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಹೇಳಿಕೆ ನೀಡಿದ್ದಾರೆ.

ಇದು ಕೊಲೆಯತ್ನ ಪ್ರಕರಣವಲ್ಲ, ಓವರ್ ಟೇಕ್ ಮಾಡುವ ಭರದಲ್ಲಿ ಮಾಡಿದಾಗ ನಡೆದ ಘಟನೆಯಾಗಿದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಕಾರ್ಪಿಯೋ ಕಾರಿನಲ್ಲಿದ್ದ ರಿಯಾಜ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಬಳಿ ಯಾವುದೇ ಆಯುಧಗಳು ಪತ್ತೆಯಾಗಿಲ್ಲ. ಆರೋಪಿಯ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪ್ರಕರಣದ ಬಗ್ಗೆ ತನಿಖೆ ಮುಂದುವರಿಸುತ್ತೇವೆ ಎಂದು ದ.ಕ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಹೇಳಿಕೆ ನೀಡಿದ್ದಾರೆ.

ಆರೋಪಿ ತನ್ನ ಕಾರಿನ ಮೇಲೆ ತಲವಾರು ಝಳಪಿಸಿದ್ದ ಎಂದು ದೂರಿದ್ದ ಹರೀಶ್ ಪೂಂಜಾ. ಹರೀಶ್ ಪೂಂಜಾ ಕಾರು ಚಾಲಕ ನವೀನ್ ನೀಡಿದ್ದ ದೂರಿನ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿದ್ದ ಪೊಲೀಸರು. ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಎಸ್.ಪಿ. ಬಾಲಿಷ ಹೇಳಿಕೆಗೆ ಖಂಡನೆ .

ಎಸ್.ಪಿ‌. ಹೇಳಿಕೆ ಬೆನ್ನಲ್ಲೇ ರಕ್ಷಣೆಗಾಗಿ ನೀಡಿದ್ದ ಗನ್ ಮ್ಯಾನ್ ನನ್ನು ಶಾಸಕರು ವಾಪಸ್ಸು ಕಳುಹಿಸಿದ್ದಾರೆ.